ಬ್ರೇಕಿಂಗ್ ನ್ಯೂಸ್
06-02-25 10:16 pm Mangalore Correspondent ಕರಾವಳಿ
ಮಂಗಳೂರು, ಫೆ.6: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೇ ವಿಸ್ತರಣೆಗೆ ಕರ್ನಾಟಕ ಸರಕಾರ ಹೆಚ್ಚುವರಿ ಭೂಮಿ ಕೊಡದೇ ಇರುವುದೇ ತೊಡಕಾಗಿದೆ ಎಂದು ಸಂಸತ್ತಿನಲ್ಲಿ ಕೇಂದ್ರ ವಿಮಾನ ಯಾನ ರಾಜ್ಯ ಸಚಿವ ಮುರಲೀಧರ್ ಮುಹೋಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಂಗಳೂರು ಏರ್ಪೋರ್ಟ್ ಅಭಿವೃದ್ಧಿ ಕುರಿತಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಿಂದ ಖಾಸಗಿ ಸಹಭಾಗಿತ್ವದಲ್ಲಿ ಮಾಡಲಾಗುತ್ತಿದೆ. ರನ್ ವೇ ವಿಸ್ತರಣೆ ಮಾಡುವುದಕ್ಕಾಗಿ 32.97 ಎಕ್ರೆ ಭೂಮಿ ಅಗತ್ಯವಿದ್ದು, ಇದನ್ನು ಉಚಿತವಾಗಿ ನೀಡುವಂತೆ ವಿಮಾನ ಯಾನ ಸಚಿವಾಲಯದಿಂದ ಕರ್ನಾಟಕ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕರ್ನಾಟಕ ಸರಕಾರದ ಕಡೆಯಿಂದ ಈ ಬಗ್ಗೆ ಯಾವುದೇ ಒಪ್ಪಿಗೆ ದೊರಕಿಲ್ಲ. ಹೀಗಾಗಿ, ಸದ್ಯಕ್ಕೆ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗದಂತೆ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಲು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾಕ್ಕೆ ಸಚಿವಾಲಯದಿಂದ ಸೂಚನೆ ನೀಡಲಾಗಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ, ಅಂತಾರಾಷ್ಟ್ರೀಯ ಮಟ್ಟದ ವಿಮಾನಗಳು ಮಂಗಳೂರು ಏರ್ಪೋರ್ಟ್ ಗೆ ಬರುವಂತಾಗಲು ವಿಮಾನ ನಿಲ್ದಾಣಕ್ಕೆ ಪಾಯಿಂಟ್ ಆಫ್ ಕಾಲ್ (ಪಿಓಸಿ) ಮಾನ್ಯತೆ ನೀಡುವ ಕುರಿತಾಗಿ ಸಂಸದ ಬ್ರಿಜೇಶ್ ಚೌಟ ಪ್ರಸ್ತಾಪಕ್ಕೆ ಉತ್ತರಿಸಿದ ವಿಮಾನ ಯಾನ ಸಚಿವರು, ಅಂತಾರಾಷ್ಟ್ರೀಯ ಮಟ್ಟದ ವಿಮಾನಗಳ ಆಗಮನವು ಆಯಾ ದೇಶಗಳೊಂದಿಗಿನ ವಿಮಾನ ಸೇವೆಯ ಒಪ್ಪಂದ ಪ್ರಕಾರ ನಡೆಯುತ್ತದೆ. ಈ ಒಪ್ಪಂದ ಪ್ರಕಾರ, ಮಂಗಳೂರು ಸೇರಿ ಭಾರತದ ಯಾವುದೇ ಭಾಗದ ವಿಮಾನ ನಿಲ್ದಾಣಗಳಿಂದ ಆಗಮನ ಮತ್ತು ನಿರ್ಗಮನಕ್ಕೆ ವಿದೇಶಿ ವಿಮಾನಗಳಿಗೆ ಅವಕಾಶ ಇರುತ್ತದೆ. ಆದರೆ ನಿರ್ದಿಷ್ಟ ವಿದೇಶಿ ವಿಮಾನಗಳ ಸೇವೆ ಪಾಯಿಂಟ್ ಆಫ್ ಕಾಲ್ ಮಾನ್ಯತೆ ಇರುವ ವಿಮಾನ ನಿಲ್ದಾಣಗಳಿಗೆ ಸೀಮಿತ ಆಗಿರುತ್ತದೆ.
ಸದ್ಯಕ್ಕೆ ಭಾರತ ಸರಕಾರವು ಮಂಗಳೂರಿನಂತಹ ಮೆಟ್ರೋಪಾಲಿಟನ್ ಅಲ್ಲದ ನಗರಗಳಿಂದ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ದೇಸೀ ವಿಮಾನಗಳಿಂದಲೇ ನಿರ್ವಹಿಸುವಂತಾಗಲು ಹೆಚ್ಚು ಆದ್ಯತೆ ನೀಡುತ್ತಿದೆ. ಹೀಗಾಗಿ ಮಂಗಳೂರು ಸೇರಿದಂತೆ ಯಾವುದೇ ಮೆಟ್ರೋ ರಹಿತ ನಗರಗಳ ಏರ್ಪೋರ್ಟ್ ಗಳಿಗೆ ಇನ್ನೂ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ನೀಡಲಾಗಿಲ್ಲ ಎಂದುತ್ತರಿಸಿದ್ದಾರೆ.
The Centre has said that the Karnataka government has not agreed to hand over the additional land required for the runway safety basic strip at Mangaluru airport. In a written reply to a query by the Dakshina Kannada MP, Capt Brijesh Chowta, in Lok Sabha on Thursday, Union Minister of State for Civil Aviation, Murlidhar Mohol, stated that the Airports Authority of India (AAI) has leased out Mangaluru International Airport to Mangaluru International Airport Ltd (MaIAL) for better operations, management and development under public-private partnership (PPP) model.
06-02-25 07:55 pm
Bangalore Correspondent
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
06-02-25 05:37 pm
HK News Desk
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
06-02-25 10:16 pm
Mangalore Correspondent
Prasad Attavar, Saloon Attack, Mangalore: ಮಸಾ...
05-02-25 10:51 pm
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
06-02-25 09:32 pm
HK News Desk
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm