ಬ್ರೇಕಿಂಗ್ ನ್ಯೂಸ್
07-02-25 03:12 pm Mangalore Correspondent ಕರಾವಳಿ
ಬೆಳ್ತಂಗಡಿ, ಫೆ.7: ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕೊಲ್ಪೆದಬೈಲು ಎಂಬಲ್ಲಿ ಮನೆಯೊಂದರಲ್ಲಿ ಪ್ರೇತದ ಕಾಟ ಇದೆಯೆಂದು ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದು, ಕುತೂಹಲದಿಂದ ಪ್ರೇತದ ಬಗ್ಗೆ ಸತ್ಯಶೋಧನೆಗೆ ಮುಂದಾಗಿದ್ದಾರೆ. ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಮೂರು ತಿಂಗಳಿನಿಂದ ವಿಚಿತ್ರ ಘಟನೆಗಳು ನಡೆಯುತ್ತಿದೆ ಎನ್ನಲಾಗುತ್ತಿದ್ದು, ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ.
ಮನೆಯಲ್ಲಿ ಕತ್ತಲು ಆವರಿಸುತ್ತಿದ್ದಂತೆಯೇ ಮನೆಯೊಳಗಿರುವ ಬಟ್ಟೆಗೆ ಬೆಂಕಿ ಹಿಡಿದು ಉರಿಯುವುದು, ಮನೆಯ ಪಾತ್ರೆಗಳು ಬೀಳುವುದು, ಮನೆಯಲ್ಲಿದ್ದ ವಸ್ತುಗಳು ಚಲಿಸಿದಂತಾಗುವುದು, ಮನೆಯ ವಿದ್ಯುತ್ ಸಂಪರ್ಕ ಆನ್- ಆಫ್ ಆಗುವುದು ಇತ್ಯಾದಿ ಘಟನೆಗಳು ನಡೆಯುತ್ತಿದ್ದು, ಮನೆಯವರ ಮಾತು ಕೇಳಿ ದಿನವೂ ಪರಿಸರದ ಹಲವಾರು ಜನರು ರಾತ್ರಿ ವೇಳೆ ಸ್ಥಳದಲ್ಲಿ ಜಮಾಯಿಸುತ್ತಿದ್ದಾರೆ. ಉಮೇಶ್ ಶೆಟ್ಟಿ, ಪತ್ನಿ ವಿನೋದಾ, ಪುತ್ರಿಯರಾದ ನಿಖಿತಾ ಹಾಗೂ ರಕ್ಷಿತಾ ಮನೆಯಲ್ಲಿ ವಾಸವಿದ್ದು, ನಿಖಿತಾ ದ್ವಿತೀಯ ಪಿಯುಸಿ, ರಕ್ಷಿತಾ 8ನೇ ತರಗತಿಯಲ್ಲಿದ್ದಾರೆ. ಉಮೇಶ್ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿದ್ದಾಗ ಇವರ ಪತ್ನಿ ವಿನೋದಾಗೆ ಕುತ್ತಿಗೆ ಹಿಸುಕಿದ ಅನುಭವ ಆಗಿದ್ದು, ಈ ಬಗ್ಗೆ ಹಲವಾರು ಜ್ಯೋತಿಷಿಗಳ ಬಳಿಯೂ ಸಲಹೆ ಕೇಳಿದ್ದಾರೆ.
ಜ್ಯೋತಿಷಿಗಳು ಪ್ರಸಾದ ಕೊಟ್ಟರೆ ಮನೆಗೆ ತಂದು ಇಡುವಷ್ಟರಲ್ಲಿ ಅದು ಮಾಯವಾಗುತ್ತದೆ, ಕೈಗೆ ನೂಲು ಕಟ್ಟಿದರೆ, ಬಂಗಾರವನ್ನು ಒಂದು ಕಡೆಯಲ್ಲಿ ಇಟ್ಟರೆ ಒಮ್ಮಿಂದೊಮ್ಮೆಲೇ ಕಾಣದಾಗುತ್ತದೆ. ಮನೆಯಲ್ಲಿ ಅಗೋಚರ ಶಕ್ತಿಗಳ ಚಲನೆ ಇರುವಂತೆ ಭಾಸವಾಗುತ್ತಿದ್ದು, ಕಿರಿಯ ಪುತ್ರಿ ಮನೆಯಲ್ಲಿ ಓದಲು ಕುಳಿತರೆ ಪ್ರೇತದಂತೆ ಚಲಿಸುವುದು ಕಾಣುತ್ತದೆ. ಒಂದು ದಿನ ಆಕೆ ಮೊಬೈಲ್ ನಲ್ಲಿ ಅಸ್ಪಷ್ಟ ಶರೀರವೊಂದು ಬ್ಲರ್ ಆಗಿ ಬಂದಿದೆ ಎಂದು ಉಮೇಶ್ ಹೇಳುತ್ತಿದ್ದಾರೆ. ಜ್ಯೋತಿಷಿಯ ಸಲಹೆಯಂತೆ ರಾತ್ರಿ ಮನೆಯ ನೆಲದಲ್ಲಿ ಬಟ್ಟಲಿನಲ್ಲಿ ನಿಂಬೆ ಹಣ್ಣು ಇಟ್ಟು ಅದರ ಸುತ್ತ ಬಿಳಿ ಪೌಡರ್ ಚೆಲ್ಲಿದ್ದರು. ಬಟ್ಟಲಲ್ಲಿ ಇಟ್ಟ ನಿಂಬೆ ಹಣ್ಣು ರಾತ್ರಿ ಜೋರಾಗಿ ತಿರುಗಿದ್ದು, ಬೆಳಗ್ಗೆ ಪೌಡರನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮನುಷ್ಯನ ಪಾದದ ಅಚ್ಚು ಉಲ್ಟಾ ಆಗಿ ಕಂಡುಬಂದಿತ್ತಂತೆ.
ವಿಚಿತ್ರ ಘಟನೆಗಳನ್ನು ನೋಡಲು ಪ್ರತಿದಿನ ನೂರಾರು ಮಂದಿ ಉಮೇಶ್ ಶೆಟ್ಟಿ ಮನೆಗೆ ಬರುತ್ತಾರೆ. ಕೆಲ ಮಂದಿ ಮನೆಯ ಲೈಟನ್ನು ಆಫ್ ಮಾಡಿ ಮನೆಯೊಳಗೆ ಕಾದು ಕುಳಿದು ಏನಾದರೂ ಘಟನೆ ನಡೆಯುತ್ತದೋ ಎಂದು ಪರಿಶೀಲನೆ ಮಾಡಿದ್ದಾರೆ. ಈ ರೀತಿ ಮಾಡಿದಾಗ ಯಾವುದೇ ಘಟನೆ ಅರಿವಿಗೆ ಬಂದಿಲ್ಲ. ಹತ್ತಿರದ ಮನೆಯವರು ಲೋಟ, ಪಾತ್ರೆ ಬೀಳುವುದನ್ನು ಕಂಡಿದ್ದೇವೆ ಎನ್ನುತ್ತಾರೆ. ಜ್ಯೋತಿಷಿಗಳಲ್ಲಿ ಕೇಳಿದಾಗ ಪ್ರೇತ ಮತ್ತು ಮಂತ್ರದೇವತೆ ದೈವದ ಬಾಧೆ ಇದೆಯೆಂದು ಹೇಳಿದ್ದಾರಂತೆ. ದೆವ್ವ, ಭೂತ, ಪ್ರೇತಗಳನ್ನು ನಂಬುವವರು, ನಂಬದವರೂ ಇದ್ದಾರೆ. ಒಟ್ಟಿನಲ್ಲಿ ಈ ಕುಟುಂಬದವರ ಆತಂಕ, ಸ್ಥಳೀಯರಲ್ಲೂ ಭಯದ ವಾತಾವರಣ ಸೃಷ್ಟಿಸಿದೆ.
A house in Belthangady is reportedly possessed by an evil spirit, leaving residents in fear. They have observed lights turning on and off automatically, vessels being scattered, and fires igniting spontaneously. These unsettling occurrences have raised concerns among those living there.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm