ಬ್ರೇಕಿಂಗ್ ನ್ಯೂಸ್
11-02-25 04:50 pm Mangalore Correspondent ಕರಾವಳಿ
ಪುತ್ತೂರು, ಫೆ.11: ಕಿಶೋರ್ ಬೊಟ್ಯಾಡಿಯವರೇ ಎಂಎಲ್ಸಿಯಾಗಿ ಆರು ತಿಂಗಳಾಯ್ತು. ಒಂದು ರೂಪಾಯಿ ಅನುದಾನ ತಂದಿದ್ದಾರೆಯೇ ಕೇಳಿ. ತಾಕತ್ತಿದ್ದರೆ ಇನ್ನು ಮೂರು ವರ್ಷದಲ್ಲಿ ಪುತ್ತೂರಿಗೆ 50 ಕೋಟಿ ಅನುದಾನ ತರಲಿ. ನನ್ನ ಬಗ್ಗೆ ಗೂಂಡಾಗಿರಿ ಅಂದಿದ್ದಾರೆ. ಇವರು ಗೂಂಡಾಗಿರಿ, ವಸೂಲಿ ಮಾಡಿದ್ದು, ಏನೆಲ್ಲಾ ಮಾಡಿದ್ದಾರೆ ಅಂತ ನನಗೆ ಗೊತ್ತಿದೆ. ಇವರ ಬಯೋಡಾಟಾನೇ ನನ್ನ ಕೈಯಲ್ಲಿದೆ. ನನ್ನ ಬಾಯಿಗೆ ಕೋಲು ಹಾಕಲು ಬರಬೇಡಿ. 15 ವರ್ಷ ಸಂಸದರಾಗಿದ್ದ ನಳಿನ್ ಕುಮಾರ್ ಏನು ಸಾಧನೆ ಮಾಡಿದ್ದಾರೆಂದು ಹೇಳಲಿ. ದೇವಸ್ಥಾನ, ಧರ್ಮದಲ್ಲಿ ರಾಜಕೀಯ ಮಾಡಬೇಡಿ ಎಂದು ಪುತ್ತೂರು ಶಾಸಕ ಅಶೋಕ್ ರೈ ವಾಗ್ದಾಳಿ ನಡೆಸಿದ್ದಾರೆ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕರಸೇವೆಯ ಸಂದರ್ಭದಲ್ಲಿ ಅಶೋಕ್ ರೈ ಎಲ್ಲರೊಂದಿಗೆ ಕೇಸರಿ ಶಾಲು ಹಾಕಿ ವಾಗ್ಝರಿಯನ್ನೇ ಹರಿಸಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನದ ಜಾಗವನ್ನು ಬಿಟ್ಟುಕೊಡಿ ಎಂದು ಕೇಳುತ್ತಿದ್ದೇವೆ. ಕೆಲವರು ಜಾಗ ಬಿಟ್ಟುಕೊಡಲು ಮುಂದೆ ಬಂದರೂ, ಅದಕ್ಕೂ ಇವರು ಅಡ್ಡ ಬರುತ್ತಿದ್ದಾರೆ. ಅವರ ಹೆಸರು ಹೇಳಲು ಬರುವುದಿಲ್ಲ. ದೇವಸ್ಥಾನ ಮತ್ತು ಶಾಲೆಯಲ್ಲಿ ರಾಜಕೀಯ ಮಾಡಿದರೆ ದೇಶ ವಿಶ್ವಗುರು ಆಗಲು ಸಾಧ್ಯವಿಲ್ಲ. ಇಲ್ಲಿದ್ದ ಆರು ಮನೆಗಳವರ ಜೊತೆಗೂ ಮಾತನಾಡಿದ್ದೆವು. ನಿಮಗೆ ಬೇರೆ ಕಡೆ ಜಾಗ ಮತ್ತು ಮನೆಯನ್ನೂ ಕಟ್ಟಿಕೊಡುತ್ತೇವೆ ಎಂದಿದ್ದೆವು. ಈಗಾಗಲೇ 32 ಲಕ್ಷ ರೂಪಾಯಿ ಹಣವನ್ನು ಕೊಟ್ಟಿದ್ದೇವೆ. ದೇವಸ್ಥಾನದ ದುಡ್ಡು ಅಲ್ಲ, ನಾವೇ ಆ ದುಡ್ಡನ್ನು ಭರಿಸಿದ್ದೇವೆ.
ಇಲ್ಲಿದ್ದ ಮನೆಯನ್ನು ಕೆಡವಿದ ಜಾಗದಲ್ಲಿ ಏನೆಲ್ಲ ಸಿಕ್ಕಿದೆಯೆಂದು ನನಗೆ ಹೇಳಲು ನಾಚಿಕೆಯಾಗುತ್ತದೆ. ಪೊಲೀಸ್ ರೆಕಾರ್ಡಿನಲ್ಲಿ ಬೇಕಾದರೆ ನೋಡಿ. ಇವರು ಆ ಮನೆಯಲ್ಲಿದ್ದು ಯಾವೆಲ್ಲ ಕೆಲಸ ಮಾಡುತ್ತಿದ್ದರೆಂದು ಗೊತ್ತಾಗುತ್ತದೆ. ನಳಿನ್ ಕುಮಾರ್ ಧರ್ಮದ ಹೆಸರಲ್ಲಿ ಭಾಷಣ ಬಿಗಿಯುತ್ತಾರೆ. ನಳಿನ್ ಅವರೇ ನನ್ನ ತಂಟೆಗೆ ಬರಬೇಡಿ. ನಿಮಗೆ ಉಗಿಯಲು ನನ್ನಲ್ಲಿ ಹತ್ತು ಸಾವಿರ ಬಾಣಗಳಿವೆ. 20 ವರ್ಷ ರಾಜಕೀಯದಲ್ಲಿದ್ದು ಏನು ಮಾಡಿದ್ದಾರೆಂದು ಹೇಳಲಿ. ಕಿಶೋರ್ ಬೊಟ್ಯಾಡಿಯವರು ಇಷ್ಟರ ವರೆಗೂ ಮಾಡಿದ್ದು ಗೂಂಡಾಗಿರಿಯ ವಸೂಲಿ ಮಾತ್ರ. ಹಿಂದಿನ ಸರ್ಕಾರದಲ್ಲಿ ಅನುದಾನ ತಂದಿದ್ದನ್ನು ತೋರಿಸುತ್ತಿದ್ದೇನೆಂದು ನನಗೆ ಹೇಳುತ್ತಾರೆ. ನಿಮ್ಮ ಬಯೋಡಾಟಾ ನನ್ನಲ್ಲಿದೆ, ನನ್ನನ್ನು ಕೆಣಕಲು ಬರಬೇಡಿ ಎಂದು ಸವಾಲು ಹಾಕಿದರು.
ಮಹಾಲಿಂಗೇಶ್ವರನ ಸನ್ನಿಧಿಯನ್ನು ಅದ್ಭುತ ಎನ್ನುವಂತೆ ಅಭಿವೃದ್ಧಿ ಪಡಿಸುತ್ತೇವೆ. 3 ಕೋಟಿ ಅನುದಾನದಲ್ಲಿ ಕೆರೆ ಮತ್ತು ಇಲ್ಲಿನ ಪರಿಸರವನ್ನು ಅಭಿವೃದ್ಧಿ ಪಡಿಸುತ್ತೇವೆ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಬರುವ ಯಾತ್ರಿಕರಲ್ಲಿ ಅರ್ಧದಷ್ಟಾದರೂ ಪುತ್ತೂರಿಗೆ ಬರುವಂತೆ ಆಗಬೇಕು. ಪ್ರವಾಸೋದ್ಯಮ ಆಕರ್ಷಣೆಯಾಗಬೇಕು. ಇಲ್ಲಿ ಮ್ಯೂಸಿಕ್ ಫೌಂಟೇನ್ ಜೊತೆಗೆ ವಯಸ್ಸಾದವರು ಬಂದು ಆನಂದಿಸುವಂತೆ ಆಗಬೇಕು. ಇದಕ್ಕಾಗಿ ಪಕ್ಷ ಭೇದ ಬದಿಗಿಟ್ಟು ಎಲ್ಲರನ್ನೂ ಸೇರಿಸಿ ಜೀರ್ಣೋದ್ಧಾರ ಸಮಿತಿಯನ್ನು ಮಾಡಬೇಕಾಗಿದೆ. ಪುತ್ತೂರಿನ ಮತ್ತು ಹೊರಗೆ ಇರುವ ಎಲ್ಲ ಉದ್ಯಮಿಗಳನ್ನೂ ಸೇರಿಸುತ್ತೇನೆ. ದೊಡ್ಡ ಕ್ಷೇತ್ರವಾಗಿ ಮಹಾಲಿಂಗೇಶ್ವರ ಸನ್ನಿಧಿಯನ್ನು ಬೆಳಗಿಸಬೇಕು. ಆದರೆ ಧರ್ಮದ ಬಗ್ಗೆ ಮಾತನಾಡುವ ಎಲ್ಲರೂ ಈ ಕಾರ್ಯಕ್ಕೆ ಸಹಕಾರವನ್ನೂ ನೀಡಬೇಕೆಂದು ಕೋರುತ್ತೇನೆ.
ಇದೇ ವೇಳೆ, ಸಂಸದ ಬ್ರಿಜೇಶ್ ಚೌಟರನ್ನು ಅಭಿನಂದಿಸುತ್ತೇನೆ. ಪುತ್ತೂರು ಮಹಾಲಿಂಗೇಶ್ವರ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ್ದಾರೆ. ಕೇಂದ್ರ ಸರಕಾರದ ಪ್ರಸಾದಂ ಯೋಜನೆಯಡಿ ದೇವಸ್ಥಾನ ಅಭಿವೃದ್ಧಿ ಪಡಿಸಲು ಪ್ರಸ್ತಾಪ ಇಟ್ಟಿದ್ದಾರೆ. ಇದು ಸುಲಭ ಇಲ್ಲ, ಈ ಕೆಲಸವನ್ನು ಬ್ರಿಜೇಶ್ ಚೌಟ ಮಾಡಿದ್ದಾರೆ. ನಾನೂ ಪ್ರಸಾದಂ ಯೋಜನೆ ಬಗ್ಗೆ ಪ್ರಯತ್ನ ಪಟ್ಟಿದ್ದೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೆ ಬ್ರಿಜೇಶ್ ಚೌಟ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಅಶೋಕ್ ರೈ ಹೇಳಿದರು.
Demolition of rented house on Temple land in Puttur, MLA Ashok Rai warns Nalin Kateel not to interfere. A complaint has been filed against MLA Ashok Kumar Rai and Eshwar Bhat Panjigudde, President of the Sri Mahalingeshwara Temple Management Committee, accusing them of unlawfully demolishing a rented property located on temple-owned land.
11-02-25 03:40 pm
HK News Desk
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
Mysuru stone pelting, Rahul Gandhi: ದೆಹಲಿ ಫಲಿ...
11-02-25 12:37 pm
Mandya suicide crime, Gym: ಗಂಡನ ಅನೈತಿಕ ಸಂಬಂಧಕ...
10-02-25 10:51 pm
BJ show cause notice, Yatnal; 'ಭಿನ್ನರ ಬಣ'ದ ನಾ...
10-02-25 10:19 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm