ಬ್ರೇಕಿಂಗ್ ನ್ಯೂಸ್
12-02-25 10:58 pm Mangalore Correspondent ಕರಾವಳಿ
ಮಂಗಳೂರು, ಫೆ.12: ಇತ್ತೀಚೆಗಷ್ಟೇ ಮಂಗಳೂರಿನ ಹಲವು ಕಡೆಯ ಪ್ರತಿಷ್ಠಿತ ಶಾಲೆಗಳಿಗೆ ಇಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಆನಂತರ, ಪೊಲೀಸರು ತಪಾಸಣೆ ನಡೆಸಿದರೂ, ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿರಲಿಲ್ಲ. ಇದೀಗ ಮತ್ತೆ ಸುರತ್ಕಲ್ ಠಾಣೆ ವ್ಯಾಪ್ತಿಯ ರಾಯನ್ ಇಂಟರ್ನ್ಯಾಶನಲ್ ಸ್ಕೂಲ್ ಮತ್ತು ಪಾಂಡೇಶ್ವರ ಠಾಣೆ ವ್ಯಾಪ್ತಿಯ ಪ್ರೆಸಿಡೆನ್ಸಿ ಶಾಲೆಗಳಿಗೆ ಬೆದರಿಕೆ ಸಂದೇಶ ಹಾಕಲಾಗಿದೆ.
ಐಇಡಿ ಬಳಸಿ ಮಾನವ ಸಹಿತ ಸುಸೈಡ್ ಬಾಂಬ್ ದಾಳಿ ನಡೆಸುವ ಬೆದರಿಕೆ ಒಡ್ಡಲಾಗಿದೆ. ಎರಡೂ ಕಡೆಯ ಶಾಲೆಗಳಲ್ಲಿ ಪೊಲೀಸರು, ಬಾಂಬ್ ಸ್ಕ್ವಾಡ್ ಗಳು ತಪಾಸಣೆ ನಡೆಸಿದ್ದು, ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಸುರತ್ಕಲ್ ಪೊಲೀಸರ ಪ್ರಕಾರ, ರಾಯನ್ ಸ್ಕೂಲಿಗೆ ಅಣ್ಣಾ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿನಿ ಇತ್ತೀಚೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಉಲ್ಲೇಖಿಸಿ ಬೆದರಿಕೆ ಒಡ್ಡಲಾಗಿದ್ಯಂತೆ. ಈ ಸ್ಕೂಲಿಗೂ ಅಣ್ಣಾ ಯುನಿವರ್ಸಿಟಿಗೂ ಏನು ಸಂಬಂಧ ಅಂತ ಸಂದೇಶದಲ್ಲಿ ತಿಳಿಸಿಲ್ಲ. ಫೆ.11ರ ಮಧ್ಯಾಹ್ನ 1.30ರ ಸುಮಾರಿಗೆ ಎರಡೂ ಕಡೆ ಇಮೇಲ್ಗಳು ಬಂದಿದ್ದವು.
ಇತ್ತೀಚೆಗೆ ಮಂಗಳೂರಿನ ನೀರುಮಾರ್ಗದ ಕೇಂಬ್ರಿಜ್ ಸ್ಕೂಲ್, ಪ್ರೆಸಿಡೆನ್ಸಿ ಸೇರಿದಂತೆ ಹಲವು ಶಾಲೆಗಳಿಗೆ ಇಮೇಲ್ ಬೆದರಿಕೆ ಸಂದೇಶಗಳು ಬಂದಿದ್ದವು. ಅದೇ ದಿನ ಉಡುಪಿಯ ಕೆಲವು ಶಾಲೆಗಳಿಗೂ ಬೆದರಿಕೆ ಬಂದಿತ್ತು. ಕೆಲವು ಕಡೆ ಸಿಬಂದಿ ಮತ್ತು ಮಕ್ಕಳು ಹೊರಗೆ ಬಂದು ಗಾಬರಿಪಟ್ಟಿದ್ದರು. ಆನಂತರ, ಪೊಲೀಸರ ತಪಾಸಣೆ ಬಳಿಕ ಹುಸಿ ಕರೆ ಅನ್ನುವುದು ಪತ್ತೆಯಾಗಿತ್ತು.
Bomb hoax Threat via mail received again to two more schools in Mangalore. One to rayan school at kulai at presidency school at pandeshwar. Recently Three private schools in Mangaluru and a private residential school in Udupi received emails threatening of explosive substances on their premises. The police did a thorough check and found the threats to be hoaxes.
07-02-26 05:09 pm
HK News Desk
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
08-02-26 10:18 pm
HK News Desk
25 ವರ್ಷಗಳ ಬಳಿಕ ಮುಂಬೈ ಪಾಲಿಕೆ ಬಿಜೆಪಿ ತೆಕ್ಕೆಗೆ ;...
07-02-26 10:53 pm
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
08-02-26 11:17 pm
HK News Desk
ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ ; ಕೋಡಿ- ಕನ್ಯಾನ...
08-02-26 10:10 pm
ಬೈಂದೂರು ಕ್ಷೇತ್ರದ ಮಾಜಿ ಶಾಸಕ, ಜನತಾ ಪರಿವಾರದ ಹಿರಿ...
07-02-26 12:55 pm
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
08-02-26 02:07 pm
Mangalore Correspondent
MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಪೊಲೀಸ್ ದಾ...
08-02-26 12:59 pm
Mangalore Robbery, Crime: ಕಳವಾರಿಗೆ ಮೆಹಂದಿ ಹೋಗ...
08-02-26 12:37 pm
ಫ್ರೀ ಫೈರ್ ಗೇಮ್ ಚಟ ; ಅಕ್ಕನ ಮಗನ ಕೊಂದಿದ್ದ ಮಾವ, ಪ...
07-02-26 10:48 pm
ಡಿಜಿಟಲ್ ಅರೆಸ್ಟ್ ; ಮಹಿಳೆಗೆ 15 ನಿಮಿಷದಲ್ಲಿ 50 ಲಕ...
07-02-26 10:07 pm