ಮುಖ್ಯಪೇದೆಗೆ ಹಲ್ಲೆ ; ಪೊಲೀಸರ ಮಿಂಚಿನ ಕಾರ್ಯಾಚರಣೆ, ಒಬ್ಬ ಆರೋಪಿ ಬಂಧನ 

17-12-20 09:47 am       Mangaluru Correspondent   ಕರಾವಳಿ

ಕರ್ತವ್ಯ ನಿರತ ಪೊಲೀಸ್ ಸಿಬಂದಿ ಮೇಲೆ ಹಲ್ಲೆಗೈದ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ‌

ಮಂಗಳೂರು, ಡಿ.17: ಕರ್ತವ್ಯ ನಿರತ ಪೊಲೀಸ್ ಸಿಬಂದಿ ಮೇಲೆ ಹಲ್ಲೆಗೈದ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ‌

ಕುದ್ರೋಳಿ ನಿವಾಸಿ ನವಾಜ್ (21) ಬಂಧಿತ ಆರೋಪಿ.‌ ಕತ್ತಿಯಿಂದ ಹಲ್ಲೆ ಮಾಡಿದ್ದ ಪ್ರಮುಖ ಆರೋಪಿ 16 ವರ್ಷದ ಬಾಲಕ ನಾಪತ್ತೆಯಾಗಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 

ನಿನ್ನೆ ಮಧ್ಯಾಹ್ನ ಬೈಕಿನಲ್ಲಿ ಬಂದಿದ್ದ ಇಬ್ಬರು ಯುವಕರು ಕಾರ್ ಸ್ಟ್ರೀಟ್ ಬಳಿಯ ನ್ಯೂ ಚಿತ್ರಾ ಟಾಕೀಸ್ ಮುಂಭಾಗದಲ್ಲಿ ನಿಂತಿದ್ದ ಪೊಲೀಸರಿಗೆ ಹಲ್ಲೆಗೈದಿದ್ದರು. ಬೈಕಿನಲ್ಲಿ ಹಿಂಬದಿ ಸವಾರನಾಗಿದ್ದ 16 ವರ್ಷದ ಬಾಲಕ ಕತ್ತಿಯಿಂದ ಹೆಡ್ ಕಾನ್ಸ್ ಟೇಬಲ್ ಗಣೇಶ್ ಕಾಮತ್ ಕೈಗೆ ಕಡಿದು ಪರಾರಿಯಾಗಿದ್ದ. ಆರೋಪಿಗಳ ಪತ್ತೆಗಾಗಿ ಪೊಲೀಸ್ ಕಮಿಷನರ್, ವಿಶೇಷ ತಂಡ ರಚಿಸಿದ್ದರು. ಆರೋಪಿಗಳ ಬಗ್ಗೆ ಖಚಿತ ಸುಳಿವು ಸಿಕ್ಕಿದ್ದರಿಂದ ನಿನ್ನೆ ರಾತ್ರಿಯೇ ಪೊಲೀಸರು ದಾಳಿ ನಡೆಸಿದ್ದು ಒಬ್ಬನನ್ನು ಬಂಧಿಸಿದ್ದಾರೆ. ಆತನ ಜೊತೆಗಿದ್ದ ಅಪ್ರಾಪ್ತ ಬಾಲಕ ತಪ್ಪಿಸಿಕೊಂಡಿದ್ದಾನೆ.

Also Read: ಮಂಗಳೂರು ; ಕರ್ತವ್ಯದಲ್ಲಿದ್ದ ಮುಖ್ಯಪೇದೆ ಮೇಲೆ ಹಾಡುಹಗಲೇ ತಲವಾರಿನಿಂದ ಹಲ್ಲೆ !!

Video: 

Police have succeeded in arresting one person in connection to sword attack on Head Constable of Bunder Station near New Chitra Talkies in Car Street, Mangalore. The arrested has been identified as Navaz (21) from Kudroli.