ಬ್ರೇಕಿಂಗ್ ನ್ಯೂಸ್
14-03-25 11:02 am Mangalore Correspondent ಕರಾವಳಿ
ಉಳ್ಳಾಲ, ಮಾ.14 : ಕಳೆದ ಕೆಲ ದಶಕಗಳಿಂದ ತುಳು ರಂಗಭೂಮಿಯಲ್ಲದೆ, ತುಳು ಚಿತ್ರರಂಗದಲ್ಲೂ ಕಲಾರಸಿಕರನ್ನ ತನ್ನ ಕುಬ್ಜ ದೇಹದಿಂದಲೇ ರಂಜಿಸುತ್ತಿದ್ದ ಪ್ರಚಂಡ ಕುಳ್ಳ ಖ್ಯಾತಿಯ ವಿವೇಕ್ ಮಾಡೂರು(52) ಇಂದು ಬೆಳಗ್ಗೆ ಹೃದಯಾಘಾತದಿಂದ ಮಾಡೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ನಿನ್ನೆ ರಾತ್ರಿ ಮನೆಯ ಶೌಚಾಲಯದಲ್ಲಿ ವಿವೇಕ್ ಅವರು ಬಿದ್ದಿದ್ದರಂತೆ. ಬಳಿಕ ವಿವೇಕ್ ಅವರು ನಿದ್ದೆಗೆ ಜಾರಿ ವಿಶ್ರಾಂತಿ ಪಡೆದಿದ್ದು ಬೆಳಗ್ಗೆ ಮನೆ ಮಂದಿ ಎಬ್ಬಿಸಲು ಹೋದಾಗ ಮೃತಪಟ್ಟಿದ್ದಾರೆ. ಮೃತ ವಿವೇಕ್ ಅವರು ಪತ್ನಿ ವೇದಾವತಿ ಜೊತೆ ಮಾಡೂರಿನ ಸಹೋದರನ ಮನೆಯಲ್ಲಿ ವಾಸವಾಗಿದ್ದರು. ಈ ಹಿಂದೆ ಟೆಲಿಫೋನ್ ಎಸ್ ಟಿಡಿ ಬೂತ್ ನಡೆಸುತ್ತಿದ್ದ ವಿವೇಕ್ ಅವರು ಬೂತ್ ಮುಚ್ಚಿದ ಬಳಿಕ ಅಣ್ಣನ ದಿನಸಿ ಅಂಗಡಿಯಲ್ಲೇ ಪ್ಲಾಸ್ಟಿಕ್ ಮನೆ ಬಳಕೆಯ ಸಾಮಾಗ್ರಿಗಳನ್ನ ಮಾರಾಟ ನಡೆಸುತ್ತಿದ್ದರು.

ವೃತ್ತಿಪರ ಹಾಸ್ಯ ಕಲಾವಿದರಾಗಿದ್ದ ವಿವೇಕ್ ಅವರು ಕರಾವಳಿಯ ಹೆಸರಾಂತ ನಾಟಕ ತಂಡಗಳಲ್ಲಿ ಅಭಿನಯಿಸಿದ್ದಲ್ಲದೆ, ತುಳು ಚಿತ್ರಗಳಲ್ಲಿ ಕೋಸ್ಟಲ್ ವುಡ್ ಮೇರು ಕಲಾವಿದರೊಂದಿಗೆ ನಟಿಸಿದ್ದಾರೆ. ತುಳು ನಾಟಕ ಕಲಾವಿದರ ಒಕ್ಕೂಟದಲ್ಲೂ ಅವರು ಸದಸ್ಯರಾಗಿದ್ದರು. ವಿವೇಕ್ ಅವರ ಕಲಾ ಪ್ರಾವೀಣ್ಯತೆಗೆ ಅನೇಕ ಸಂಘ, ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ. ಅವರ ಅಕಾಲಿಕ ಅಗಲಿಕೆಗೆ ತುಳು ರಂಗಭೂಮಿ, ಕೋಸ್ಟಲ್ ವುಡ್ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.
Tributes Pour In as Legendary Mangalore tulu Artist Vivek Madur Passes Away from Heart Attack.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm