ಬ್ರೇಕಿಂಗ್ ನ್ಯೂಸ್
15-03-25 10:00 pm Mangalore Correspondent ಕರಾವಳಿ
ಮಂಗಳೂರು, ಮಾ.15 : ಕೇಂದ್ರ ಸರಕಾರ ತರಲುದ್ದೇಶಿಸಿರುವ ನೂತನ ವಕ್ಫ್ ಕಾಯ್ದೆ ತಿದ್ದುಪಡಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದರೆ ವಿರೋಧ ಬಂದೇ ಬರುತ್ತದೆ. ಸಂವಿಧಾನ ವಿರೋಧಿಯಾಗಿದೆ ಎನ್ನುವ ಕಾರಣಕ್ಕೆ ಜೆಪಿಸಿ ಸದಸ್ಯರು ಕರಡು ಮಸೂದೆಗೆ ವಿರೋಧ ಸೂಚಿಸಿದ್ದರು. ಅದನ್ನು ಮೀರಿ ಮಸೂದೆ ತರಲು ಹೊರಟಿದ್ದಕ್ಕೆ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಸಂವಿಧಾನದ ಕಾನೂನು ಉಲ್ಲಂಘಿಸಿ ಕಾಯ್ದೆ ತರುವುದು ಸರಿಯಲ್ಲ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಟಿ ಸಂದರ್ಭದಲ್ಲಿ ವಕ್ಫ್ ಕಾಯ್ದೆ ವಿರೋಧಿಸಿ ಮುಸ್ಲಿಂ ಧರ್ಮ ಗುರುಗಳು ಪ್ರತಿಭಟನೆ ಮಾಡಿದ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಜನರ ಹಕ್ಕು. ಕಾನೂನು ಪ್ರಕಾರವೇ ವಿರೋಧ ಸೂಚಿಸಬೇಕು. ಆದರೆ ಉಲೆಮಾಗಳು, ಧಾರ್ಮಿಕ ನಾಯಕರ ಸಲಹೆಯಂತೆ ಮುನ್ನಡೆಯಬೇಕು. ವಿರೋಧ ಇದೆಯೆಂದು ಕಾನೂನು ಕೈಗೆತ್ತಿಕೊಳ್ಳುವ ಸ್ಥಿತಿಯಾಗಬಾರದು ಎಂದು ಹೇಳಿದರು. ದುರುದ್ದೇಶ ಇಟ್ಟುಕೊಂಡು ಕಾನೂನು ಮಾಡಿದರೆ ಅದರ ಪರಿಣಾಮ ಎಲ್ಲರಿಗೂ ಆಗುತ್ತದೆ ಎಂದು ಧ್ವನಿವರ್ಧಕ ರಾತ್ರಿ ನಿಷೇಧದಿಂದ ನಾಟಕ, ಯಕ್ಷಗಾನಕ್ಕೆ ತೊಂದರೆ ಆಗಿರುವುದನ್ನು ಉಲ್ಲೇಖಿಸಿದರು.
ದಿಗಂತ್ ನಾಪತ್ತೆ ಪ್ರಕರಣದಲ್ಲಿ ಬಿಜೆಪಿ ಶಾಸಕರು ಪ್ರಚೋದನಕಾರಿ ಹೇಳಿಕೆ ನೀಡಿರುವುದಕ್ಕೆ ಕೇಸು ಮಾಡಿಲ್ಲ ಏಕೆ ಎಂಬ ಪ್ರಶ್ನೆಗೆ, ಎಲ್ಲದಕ್ಕೂ ಸುಮೊಟೋ ಕೇಸು ಹಾಕಿದರೆ ಕೆಲವೊಮ್ಮೆ ಹೈಕೋರ್ಟಿನಲ್ಲಿ ಬಿದ್ದು ಹೋಗಿರುವುದನ್ನು ನೋಡಿರುತ್ತೀರಿ. ಹಾಗಾಗಿ ಸುಮೊಟೋ ಬದಲು ಯಾರಾದರೂ ದೂರು ಕೊಟ್ಟರೆ ಕೇಸು ದಾಖಲಿಸುವುದು ಸುಲಭವಾಗುತ್ತದೆ. ಆದರೂ ಯಾವ ಆಯಾಮದಲ್ಲಿ ಪ್ರಕರಣ ದಾಖಲಿಸಬಹುದು ಎಂದು ಪೊಲೀಸರು ಕಾನೂನು ಸಲಹೆ ಕೇಳಿದ್ದಾರೆ. ಸುಮೊಟೋ ಕೇಸು ಹಾಕಿ ಹೈಕೋರ್ಟಿನಲ್ಲಿ ಛೀಮಾರಿ ಹಾಕಿಸಿಕೊಳ್ಳುವ ಬದಲು ಮುನ್ನೆಚ್ಚರಿಕೆ ವಹಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಅಲ್ಲದೆ, ಪ್ರಾಣಿಗಳು ಕಚ್ಚುತ್ತವೆ ಎಂದು ಅದಕ್ಕೆ ಪ್ರತಿಯಾಗಿ ನಾವು ಕಚ್ಚುವುದಕ್ಕಾಗುತ್ತಾ.. ಅದನ್ನೆಲ್ಲ ನಿರ್ಲಕ್ಷ್ಯ ಮಾಡಿದರೇ ಉತ್ತಮ. ಕೆಲವೊಮ್ಮೆ ಇಂತದ್ದೇ ವಿಚಾರದಲ್ಲಿ ಪ್ರಚಾರ ಪಡ್ಕೊಂಡು ನಾಯಕರಾಗಲು ಯತ್ನಿಸುವವರಿದ್ದಾರೆ. ಅವರಿಗೆ ಈ ರೀತಿ ಕೇಸು ಹಾಕಿದರೂ ಅದನ್ನು ಹೇಳಿಕೊಂಡು ಪ್ರಚಾರ ಪಡೆಯುತ್ತಾರೆ. ಯಾಕೆ ಅಂಥವರಿಗೆ ಪ್ರಚಾರ ಕೊಡಬೇಕು. ಕೊರಗಜ್ಜನ ಕ್ಷೇತ್ರಕ್ಕೆ ಪ್ರತಿವರ್ಷ ನಡಿಗೆ ಮಾಡುತ್ತಾರೆ. ಕಳೆದ ಬಾರಿ ಚುನಾವಣೆ ಸಮಯ ಇದಕ್ಕಿಂತ ಹೆಚ್ಚಿನ ಪ್ರಚೋದನಕಾರಿ ಮಾತುಗಳನ್ನು ಆಡಿದ್ದರು. ನಾವು ಅದನ್ನೆಲ್ಲ ನಿರ್ಲಕ್ಷ್ಯ ಮಾಡಿಕೊಂಡು ಬಂದಿದ್ದೇವೆ, ಅದಕ್ಕಾಗಿ ದೇವರ ಮತ್ತು ಜನರ ಆಶೀರ್ವಾದ ಸಿಕ್ಕಿದೆ. ಆ ರೀತಿ ಮಾತನಾಡಿದವರೆಲ್ಲ ಈಗ ಮರೆಗೆ ಸರಿದಿದ್ದಾರೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ಇಟ್ಟರು.
ಫರಂಗಿಪೇಟೆಯಲ್ಲಿ ಹಿಂದು, ಮುಸ್ಲಿಂ ಎಲ್ಲ ಜಾತಿಯವರು ಒಟ್ಟಿಗಿದ್ದಾರೆ. ದಿಗಂತ್ ನಾಪತ್ತೆ ವಿಚಾರದಲ್ಲಿ ಎಲ್ಲ ಜೊತೆ ಸೇರಿಯೇ ಪ್ರತಿಭಟನೆ ನಡೆಸಿದ್ದರು. ಆದರೆ ಹೊರಗಿನವರು ಬಂದು ಅಲ್ಲಿ ಬೇಳೆ ಬೇಯಿಸಲು ನೋಡಿದ್ದಾರೆ. ಏನೇನೋ ಹೇಳಿಕೆ ಕೊಟ್ಟು ಪ್ರಚಾರ ಪಡೆದಿದ್ದಾರೆ. ಇವರ ಮಾತನ್ನು ಅಲ್ಲಿನ ಜನರು ಸ್ವೀಕರಿಸಿಲ್ಲ ಎಂದು ಖಾದರ್ ಹೇಳಿದರು. ನಿಷೇಧಿತ ಪಿಎಫ್ಐ ಮುಖಂಡರಿಗೆ ಪಿಸ್ತೂಲ್ ಒದಗಿಸಿದವರ ಬಂಧನ ಕುರಿತ ಪ್ರಶ್ನೆಗೆ, ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ, ಅವರಿಗೆ ಅಭಿನಂದನೆ ಹೇಳುತ್ತೇನೆ. ಪಿಸ್ತೂಲ್ ಎಲ್ಲಿಂದ ತರಿಸಿದ್ದಾರೆ, ಯಾರಿಗೆ ಕೊಡುತ್ತಿದ್ದಾರೆ, ಯಾರು ಕೊಡಿಸುತ್ತಿದ್ದಾರೆ ಎಲ್ಲವನ್ನೂ ತನಿಖೆ ಮಾಡಬೇಕು ಎಂದು ಹೇಳಿದರು.
Those hurt over alleged provocative statements of BJP MLAs following 17-year-old pre-university student Digant going missing from his house in Farangipet, near Mangaluru, recently, should file complaints with the police rather than expecting the police to register suo-motu cases, said Speaker and MLA U.T. Khader in Mangaluru on Saturday.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 02:45 pm
Mangalore Correspondent
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm