ಬ್ರೇಕಿಂಗ್ ನ್ಯೂಸ್
17-03-25 04:27 pm Mangalore Correspondent ಕರಾವಳಿ
ಮಂಗಳೂರು, ಮಾ.17 : ಹಿಂದು ಹುಡುಗರು ಹೆಣ್ಣು ಸಿಗದಿದ್ದರೆ ಅನ್ಯಧರ್ಮದ ಹೆಣ್ಮಕ್ಕಳನ್ನು ಮದುವೆಯಾಗಿ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಾ.9 ರಂದು ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರದಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ ಲವ್ ಜಿಹಾದ್ ಬಗ್ಗೆ ಉಲ್ಲೇಖಿಸುತ್ತ ಅನ್ಯಧರ್ಮದ ಹೆಣ್ಣುಗಳನ್ನು ಬರಸೆಳೆಯುವ ಕೆಲಸ ಮಾಡಿ ಎಂದು ಹೇಳಿದ್ದರು.
ಸೂಲಿಬೆಲೆ ಮಾತಿಗೆ ಮುಸ್ಲಿಂ ಸಂಘಟನೆಗಳು, ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಎಸ್ಡಿಪಿಐ ನಾಯಕರು ಬಂಟ್ವಾಳ ಮತ್ತು ಉಳ್ಳಾಲದಲ್ಲಿ ಸೂಲಿಬೆಲೆ ವಿರುದ್ಧ ದೂರು ನೀಡಿದ್ದರು. ಆನಂತರ, ಉಳ್ಳಾಲದ ಯುವ ಕಾಂಗ್ರೆಸ್ ಮುಖಂಡ ರಶೀದ್ ನೇತೃತ್ವದಲ್ಲಿ ಉಳ್ಳಾಲ ಪೊಲೀಸರಿಗೆ ದೂರು ನೀಡಲಾಗಿತ್ತು. ಇದೀಗ ಉಳ್ಳಾಲ ಪೊಲೀಸರು ಸೆಕ್ಷನ್ 192, 353 BNS (505(2) ಮತ್ತು 353IPC ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.
ಕೊರಗಜ್ಜನ ಕ್ಷೇತ್ರದಲ್ಲಿ ಭಾಷಣ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ ಮತಾಂತರದ ಬಗ್ಗೆ ಉಲ್ಲೇಖಿಸಿ, ಮತಾಂತರ ಆದವರನ್ನ ಮತ್ತೆ ಘರ್ ವಾಪಸಿ ಹೇಗೆ ಮಾಡೋದು ಎಂದು ನಮ್ಮ ಯುವಕರನ್ನ ತರಬೇತುಗೊಳಿಸಬೇಕು. ಎಲ್ಲಿಯ ವರೆಗೆ ಲವ್ ಜಿಹಾದ್ ಬಗ್ಗೆ ಮಾತಾಡ್ತ ಇರೋದು. ನಮ್ ಗಂಡು ಮಕ್ಕಳು ನಮ್ಮ ಹೆಣ್ಮಕ್ಕಳನ್ನೇ ನೋಡ್ತೀರಾ..?ನಮ್ಮಲ್ಲಿ ಹುಡ್ಗಿ ಸಿಕ್ಕಿಲ್ಲಂತ ಎಷ್ಟು ದಿನ ಹೇಳ್ತಿರೋದು. ಸ್ವಲ್ಪ ಬೇರೆಯವರನ್ನ ನೋಡ್ರಪ್ಪಾ.. ನಮ್ಮ ಗಂಡು ಮಕ್ಕಳಿಗೆ ಹೆಣ್ಣು ಸಿಗಲಿಲ್ಲವೆಂದು ಕೊರಗಬೇಡಿ. ಪಕ್ಕದ ಸಮಾಜದತ್ತ ನೋಡಿ, ಸವಾಲುಗಳನ್ನ ಎದುರಿಸಲು ಅಗ್ರೆಸಿವ್ ಆಗಿಯೇ ಮುನ್ನಡೆಯಬೇಕು. ಟೆಸ್ಟ್ ಮ್ಯಾಚ್ ನಿಂತೋಗಿದೆ, ಇಪ್ಪತ್ತು ಓವರಲ್ಲಿ ಬಡಿಯಬೇಕಷ್ಟೆ ಎನ್ನುವ ಮೂಲಕ ಹಿಂದು ಯುವಕರಿಗೆ ಕರೆ ನೀಡಿದ್ದರು.
A case has been registered against Chakravarthy Sulibele at Ullal Police Station for allegedly making a provocative statement against another religion during a religious event at Koragajja Kshetra in Kuthar. Congress leaders filed a complaint on Sunday, accusing Sulibele of delivering a communal hate speech aimed at disturbing social harmony. The complaint was lodged under the leadership of Ullal City Congress President Mustafa Abdulla.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm