ಬ್ರೇಕಿಂಗ್ ನ್ಯೂಸ್
18-12-20 09:19 pm Mangaluru Correspondent ಕರಾವಳಿ
ಮಂಗಳೂರು, ಡಿ.18: ಪದ್ಮಾಸನ ಹಾಕಿ ಒಂದಷ್ಟು ಹೊತ್ತು ಕುಳಿತುಕೊಳ್ಳುವುದೇ ದೊಡ್ಡ ಕಷ್ಟದ ಕೆಲಸ. ಅಂತದ್ರಲ್ಲಿ ಪದ್ಮಾಸನ ಹಾಕಿ ಈಜಾಡುವುದನ್ನು ಊಹಿಸಲು ಸಾಧ್ಯವೇ.. ಆದರೆ, ಅಸಾಧ್ಯ ಎನ್ನುವ ಮಾತನ್ನು ಸಾಧ್ಯವಾಗಿಸಿದ್ದಾರೆ ಈಜು ಪಟು ನಾಗರಾಜು ಖಾರ್ವಿ.
ಮಂಗಳೂರಿನ ತಣ್ಣೀರುಬಾವಿಯ ಸಮುದ್ರದಲ್ಲಿ ನಾಗರಾಜು ಖಾರ್ವಿ ಅಪೂರ್ವ ಸಾಹಸ ಮೆರೆದಿದ್ದಾರೆ. ಪದ್ಮಾಸನ ಹಾಕಿ, ಕಾಲು ಬಿಚ್ಚಿಕೊಳ್ಳದಂತೆ ಸರಪಣಿಯಲ್ಲಿ ಕಟ್ಟಿಕೊಂಡು ಒಂದು ಕಿಮೀ ಉದ್ದಕ್ಕೆ ಈಜಿದ್ದಾರೆ. ಕಾಲನ್ನು ಕಟ್ಟಿಕೊಂಡು ಕೇವಲ ಕೈಯಲ್ಲೇ ಸಮುದ್ರದ ನೀರಿನಲ್ಲಿ ತೇಲಿಕೊಂಡು ಗುರಿ ತಲುಪಿರುವ ಅಪರೂಪದ ಸಾಹಸ ಮಾಡಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ನಾಗರಾಜು ಖಾರ್ವಿ ಜನ್ಮತಃ ಮೀನುಗಾರರು. ಹೀಗಾಗಿ ಸಣ್ಣಂದಿನಲ್ಲೇ ಸಮುದ್ರದಲ್ಲಿ ಈಜುವುದು ಹುಟ್ಟುಗುಣವಾಗೇ ಕರಗತವಾಗಿತ್ತು. 15 ವರ್ಷಗಳ ಕಾಲ ಮೀನುಗಾರಿಕೆಯನ್ನೇ ವೃತ್ತಿ ಮಾಡಿಕೊಂಡಿದ್ದ ನಾಗರಾಜ್ ಖಾರ್ವಿಗೆ ಆಬಳಿಕ ಬಂಟ್ವಾಳ ತಾಲೂಕಿನ ವಿಟ್ಲದ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕೆಲಸ ದೊರೆತಿತ್ತು. ಹೇಗೂ ಈಜುಗಾರನಾಗಿದ್ದರಿಂದ ಅಲ್ಲಿನ ಶಿಕ್ಷಕರು ಮಕ್ಕಳಿಗೆ ಈಜು ಕಲಿಸುವಂತೆ ಒತ್ತಾಯಿಸಿದ್ದರು. ಹಾಗಾಗಿ ಮಕ್ಕಳಿಗೆ ಈಜು ತರಬೇತಿಯನ್ನು ಕೊಡಿಸಿದ್ದರು.
ಈ ನಡುವೆ, ಯೋಗವನ್ನೂ ಕಲಿತುಕೊಂಡ ನಾಗರಾಜ್, ಯೋಗದಿಂದಲೇ ಈಜು ಮಾಡಬಾರದೇಕೆ ಎಂದು ಪ್ರಯತ್ನ ಮಾಡಿದ್ದಾರೆ. ಪದ್ಮಾಸನದ ಭಂಗಿಯಲ್ಲೇ ಈಜುವುದನ್ನು ಕಲಿತ ನಾಗರಾಜ್, ಅದರಲ್ಲಿ ಯಶಸ್ಸು ಪಡೆದಿದ್ದಾರೆ. ಬಳಿಕ ಸಮುದ್ರದಲ್ಲಿ ಪದ್ಮಾಸನದಲ್ಲಿ ಈಜುವುದನ್ನು ಅಭ್ಯಾಸ ಮಾಡಿದ್ದಾರೆ. ಇದೇ ಅಭ್ಯಾಸದ ಬಲದಿಂದ ಈಗ ರಾಷ್ಟ್ರ ಮಟ್ಟದಲ್ಲಿ ಅಪೂರ್ವ ಸಾಹಸ ಮೆರೆದಿದ್ದಾರೆ.
ತಣ್ಣೀರುಬಾವಿಯಲ್ಲಿ ಪದ್ಮಾಸನ ಮತ್ತು ಕಾಲಿಗೆ ತೊಡೆ ಸಂದಿನಿಂದಲೇ ಸರಪಳಿಯಲ್ಲಿ ಕಟ್ಟಿಕೊಂಡು ನೀರಿಗಿಳಿದ ನಾಗರಾಜು, ನೀರಿನಲ್ಲಿ ತೇಲಿಕೊಂಡೇ ಈಜಾಡಿದ್ದಾರೆ. ಅಲೆಗಳ ಏರಿಳಿತಗಳ ಮಧ್ಯೆಯೇ ಸಮುದ್ರ ಮಧ್ಯೆ ಹಾಕಿದ್ದ ಒಂದು ಕಿಮೀ ದೂರದ ಗಮ್ಯವನ್ನು 25 ನಿಮಿಷ 16 ಸೆಕೆಂಡಿನಲ್ಲಿ ಕ್ರಮಿಸಿದ್ದಾರೆ. ಈ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಸೇರುವ ನಿರೀಕ್ಷೆಯಲ್ಲಿದ್ದಾರೆ. ಈ ವೇಳೆ, ಮಂಗಳೂರಿನ ಯೋಜಕ ಇಂಡಿಯಾ ಸಂಘಟನೆಯ ಸದಸ್ಯರು, ಆಸಕ್ತ ಈಜು ಪಟುಗಳು, ಖಾರ್ವಿ ಕುಟುಂಬಸ್ಥರು, ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಖಾರ್ವಿ ಈಜುತ್ತಿದ್ದಂತೆಯೇ ಮತ್ತೊಂದು ದೋಣಿಯ ಮೂಲಕ ಮಾಧ್ಯಮ ಪ್ರತಿನಿಧಿಗಳು ಉದ್ದಕ್ಕೂ ನೀರಿನಲ್ಲಿ ಸಾಗುತ್ತಲೇ ಅಪೂರ್ವ ದಾಖಲೆಯನ್ನು ರೆಕಾರ್ಡ್ ಮಾಡಿದ್ದಾರೆ.
ಯೋಗದ ಮೂಲಕ ನೀರಿನಲ್ಲಿ ತೇಲುವುದನ್ನು ಕೇಳಿದ್ದೇನೆ. ಪದ್ಮಾಸನ ಅಥವಾ ಇನ್ನಾವುದೇ ಆಸನದ ಭಂಗಿಯಲ್ಲಿ ಈಜಾಡಿದ್ದನ್ನು ಕೇಳಿಲ್ಲ. ಇದೇ ಮೊದಲಿರಬೇಕು. ಗುರು ಸ್ಥಾನದಲ್ಲಿ ನಿಂತು ಗೋಪಾಲ ಖಾರ್ವಿಯವರು ನನಗೆ ತರಬೇತು ನೀಡಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನವರಿಗೆ ಹೇಳಿದ್ದೇನೆ. ಅನುಮತಿ ಪಡೆದೇ ಈ ಸಾಹಸಕ್ಕಿಳಿದಿದ್ದೆ ಎಂದು ಹೇಳುತ್ತಾರೆ, ನಾಗರಾಜ್ ಖಾರ್ವಿ.
Video:
A teacher displayed extraordinary skill and courage and swam one km in the sea in Padmasana position with his legs tied by chain. Teacher by profession Nagaraja Kharvi Kanchugodu, who is already renowned for his swimming skills is the one who created a new record.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm