ಬ್ರೇಕಿಂಗ್ ನ್ಯೂಸ್
27-04-25 01:00 pm Mangalore Correspondent ಕರಾವಳಿ
ಮಂಗಳೂರು, ಎ.27 : ಕೆಲವು ಶಾಸಕರಿಗೆ ಏನಾದರೂ ಮಾತನಾಡುವುದು ಚಾಳಿ ಆಗಿಬಿಟ್ಟಿದೆ. ಮಾರ್ಕೆಟ್ ನಲ್ಲಿ ಟಿ.ಆರ್.ಪಿ ಸಿಗ್ತದೆ ಎಂದು ಮಾತನಾಡ್ತಾರೆ. ಸಂವಿಧಾನಕ್ಕೆ ತಕ್ಕಂತೆ ನಮ್ಮ ಮಾತು, ನಡೆ ಇರಬೇಕು. ಕೆಲವೊಮ್ಮೆ ಹೆಚ್ಚು ಕಮ್ಮಿ ಆಗುತ್ತೆ. ಹಾಗಂತ, ಅದೇ ಚಾಳಿಯಾಗಬಾರದು. ಶಾಸಕ ಮಿತ್ರರು ಹಕ್ಕುಚ್ಯುತಿಗೆ ದೂರು ಕೊಟ್ಟಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಹಕ್ಕುಚ್ಯುತಿ ಕಮಿಟಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಯುಟಿ ಖಾದರ್ ಹೇಳಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಬಿಜೆಪಿಯ 18 ಶಾಸಕರ ಅಮಾನತು ವಿಚಾರದಲ್ಲಿ ಸ್ಪೀಕರ್ ಧರ್ಮದ ಬಗ್ಗೆ ಪ್ರಶ್ನೆಯೆತ್ತಿ ವಿವಾದಾತ್ಮಕ ಹೇಳಿಕೆ ನೀಡಿದ ಬಗ್ಗೆ ಕಾಂಗ್ರೆಸ್ ಶಾಸಕರು ಹಕ್ಕುಚ್ಯುತಿ ನೋಟಿಸ್ ನೀಡಿರುವ ಬಗ್ಗೆ ಸ್ಪೀಕರ್ ಖಾದರ್ ಸುದ್ದಿಗೋಷ್ಟಿ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ಸಂವಿಧಾನ ಪೀಠದ ಗೌರವ ಉಳಿಸಲು ಬಿಜೆಪಿಯ 18 ಶಾಸಕರ ಅಮಾನತು ಮಾಡಲಾಗಿದೆ. ಆರು ತಿಂಗಳ ವರೆಗೆ ಅಮಾನತು ಆದೇಶ ಮಾಡಲಾಗಿದೆ. ಸಮಿತಿ ಸಭೆಯಲ್ಲೂ ಭಾಗವಹಿಸಬಾರದು ಎಂದು ಸೂಚಿಸಲಾಗಿದೆ. ಈ ಬಗ್ಗೆ ವಿಪಕ್ಷ ನಾಯಕರ ಹೇಳಿಕೆಯನ್ನು ಗಮನಿಸಿದ್ದೇನೆ. ಧನ ವಿನಿಯೋಗ ವಿಧೇಯಕ ಇರುವಾಗ ಅಡ್ಡಿಪಡಿಸಬಾರದು ಎಂಬ ತಿಳುವಳಿಕೆ ಇಲ್ಲ. ಆದರೆ ಇದು ಸದನ ಕಮಿಟಿ ತೆಗೆದುಕೊಂಡ ತೀರ್ಮಾನ ಆಗಿರುವ ಕಾರಣ ನನಗೊಬ್ಬನಿಗೆ ತೀರ್ಮಾನ ತೆಗೆದುಕೊಳ್ಳಲು ಆಗಲ್ಲ.
ಸರ್ಕಾರದ ಜೊತೆ ಈ ಬಗ್ಗೆ ಚರ್ಚೆ ನಡೆಸುತ್ತೇನೆ. ತಮ್ಮ ತಪ್ಪಿನ ಅರಿವು ಅವರಿಗೆ ಆಗಬೇಕು. ಸಂವಿಧಾನ ಪರವಾಗಿ ನಾವು ನಿಂತಿದ್ದೇವೆ. ಶಾಸಕರು ಮುಂದಿನ ದಿನ ಉತ್ತಮ ನಾಯಕರಾಗಲಿ ಎಂದು ಅವರಿಗೆ ಟಾಸ್ಕ್ ಕೊಟ್ಟಿರೋದು. ಇದು ಅವರಿಗೆ ಕೊಟ್ಟಿರುವ ಶಿಕ್ಷೆಯಲ್ಲ, ಟ್ರೈನಿಂಗ್ ಎಂದು ಖಾದರ್ ಹೇಳಿದರು.
ಕಾಶ್ಮೀರದ ಭಯೋತ್ಪಾದಕ ಕೃತ್ಯದ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗೆ, ನಾವು ಇಡೀ ದೇಶ ಒಗ್ಗಟ್ಟಾಗಿರಬೇಕು. ನಮ್ಮ ದೇಶದ ಏಕತೆ, ಒಗ್ಗಟ್ಟನ್ನು ಮುರಿಯಬೇಕೆಂಬುದೇ ಈ ಸಂಚಿನ ಉದ್ದೇಶ. ಅದಕ್ಕೆ ನಾವು ಯಾರು ಸಹ ಅವಕಾಶ ಮಾಡಿಕೊಡಬಾರದು. ದೇಶವನ್ನು ದುರ್ಬಲಗೊಳಿಸಲು ಪ್ರಯತ್ನ ಪಟ್ಟರೆ ಸಂಚುಕೋರರಿಗೆ ಸಹಾಯ ಮಾಡಿದಂತಾಗುತ್ತದೆ. ಉಗ್ರ ಕೃತ್ಯ ಎಸಗಿದರನ್ನು, ಅದಕ್ಕೆ ಬೆಂಬಲ ನೀಡಿದವರನ್ನು ಮಟ್ಟ ಹಾಕಬೇಕು. ಯುದ್ದ ನಡೆಸುವ ಬಗ್ಗೆ ಸರ್ವಪಕ್ಷ ಸಭೆ, ಅಧಿಕಾರಿಗಳು, ಕೇಂದ್ರ ಸರ್ಕಾರ ನಿರ್ಧಾರ ಮಾಡಬೇಕಾಗುತ್ತದೆ ಎಂದು ಖಾದರ್ ಹೇಳಿದರು.
ಸಾಕ್ಷ್ಯ ಇದ್ದರೆ ತನಿಖಾ ಸಂಸ್ಥೆಗೆ ಕೊಡಲಿ
ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣದಲ್ಲಿ ಪಿ.ಎಫ್.ಐ ಕೈವಾಡದ ಬಗ್ಗೆ ನಿವೃತ್ತ ಡಿವೈಎಸ್ಪಿ ಅನುಪಮಾ ಶೆಣೈ ಸ್ಪೀಕರ್ ಗೆ ಪತ್ರ ಬರೆದಿರುವ ವಿಚಾರದ ಪ್ರಶ್ನೆಗೆ, ನಾನು ತನಿಖಾ ಏಜೆನ್ಸಿ ಅಲ್ಲ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಿ. ನನ್ನ ಹೆಸರನ್ನು ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಉಲ್ಲೇಖ ಮಾಡ್ತಾರೆ. ನಾನು ಪಬ್ಲಿಕ್ ಪ್ರಾಪರ್ಟಿ. ಕೆಟ್ಟವರಿಂದ ಹಿಡಿದು ಒಳ್ಳೆಯವರ ವರೆಗೂ ಎಲ್ಲರೂ ನಮ್ಮ ಹೆಸರನ್ನು ಬಳಸಿಕೊಳ್ಳುತ್ತಾರೆ. ಪತ್ರ ಕಚೇರಿಗೆ ಬಂದಿದೆಯಾ ನೋಡಬೇಕು. ಸಾಕ್ಷ್ಯ ಇದ್ರೆ ತನಿಖಾ ಸಂಸ್ಥೆಗೆ ಕೊಡಲಿ ಎಂದು ಹೇಳಿದರು.
Following the demand for suspension of BJP MLA Harish Poonja, Karnataka Legislative Assembly Speaker U.T. Khader commented that for some leaders, making irresponsible statements has become a routine habit. Speaking to the media in Mangalore, Khader clarified that the decision on what action to take next will be left to the privileges committee of the Assembly.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm