ಬ್ರೇಕಿಂಗ್ ನ್ಯೂಸ್
21-12-20 06:26 pm Mangalore Correspondent ಕರಾವಳಿ
ಪುತ್ತೂರು, ಡಿ.21: ಆರೆಸ್ಸೆಸ್ ಹಿರಿಯ ಮುಖಂಡ ವೆಂಕಟರಮಣ ಹೊಳ್ಳ ಬೈಕ್ ಸ್ಕಿಡ್ ಆಗಿ ರಸ್ತೆಗೆ ಎಸೆಯಲ್ಪಟ್ಟು ಮೃತಪಟ್ಟಿದ್ದಾಗಿ ಸುದ್ದಿಯಾಗಿತ್ತು. ಆದರೆ, ಅಪಘಾತದ ಬೆನ್ನತ್ತಿ ಹೋದ ಪುತ್ತೂರು ಸಂಚಾರಿ ಪೊಲೀಸರು ಟಿಪ್ಪರ್ ಚಾಲಕನನ್ನು ಬಂಧಿಸಿದ್ದಾರೆ. ಹೊಳ್ಳರು ಬರೀ ಸ್ಕಿಡ್ ಆಗಿ ಬಿದ್ದು, ಮೃತಪಟ್ಟಿದ್ದಲ್ಲ. ಘಟನೆಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದ್ದೇ ಕಾರಣ ಎನ್ನೋದನ್ನು ಪತ್ತೆ ಮಾಡಿದ್ದಾರೆ.
ವೆಂಕಟರಮಣ ಹೊಳ್ಳ, ಡಿ.15ರಂದು ನಸುಕಿನ ವೇಳೆಗೆ ಪುತ್ತೂರಿನಿಂದ ಬಂಟ್ವಾಳಕ್ಕೆ ಬೈಕಿನಲ್ಲಿ ಬರುತ್ತಿದ್ದರು. ಈ ವೇಳೆ, ಮಾಣಿ ಬಳಿಯ ಪೋಳ್ಯ ಎಂಬಲ್ಲಿ ಹೆದ್ದಾರಿ ಮಧ್ಯೆ ಅಪಘಾತ ನಡೆದಿತ್ತು. ರಸ್ತೆ ಬದಿಗೆ ಬಿದ್ದಿದ್ದ ವೆಂಕಟರಮಣ ಅವರನ್ನು ಯಾರೋ ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳೀಯರು ಸೇರಿ ಆಸ್ಪತ್ರೆಗೂ ದಾಖಲು ಮಾಡಿದ್ದರು. ಆದರೆ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟಿದ್ದರು. ಘಟನೆ ಹೇಗೆ ನಡೆದಿದೆ ಎನ್ನೋದನ್ನು ಯಾರೂ ನೋಡಿದವರು ಇರಲಿಲ್ಲ.
ಆಸ್ಪತ್ರೆಯಲ್ಲಿ ಹೊಳ್ಳರನ್ನು ಪರೀಕ್ಷೆ ನಡೆಸಿದ ವೈದ್ಯರು ಘಟನೆ ಬಗ್ಗೆ ಸಂಶಯ ಪಟ್ಟಿದ್ದರು. ಬೈಕ್ ಸ್ಕಿಡ್ ಆಗಿ ಬಿದ್ದ ಗಾಯದ ರೀತಿ ಇಲ್ಲ. ತಲೆಯ ಭಾಗಕ್ಕೆ ಬಲವಾದ ಏಟು ಬಿದ್ದಿರುವಂತೆ ಕಾಣುತ್ತಿದೆ. ಯಾವುದೋ ವಾಹನ ಡಿಕ್ಕಿಯಾಗಿರುವ ಸಾಧ್ಯತೆ ಇದೆ ಎನ್ನುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ವೈದ್ಯರ ಮಾಹಿತಿಯಂತೆ, ಪುತ್ತೂರು ಸಂಚಾರಿ ಪೊಲೀಸರು ಅಪಘಾತದ ಬೆನ್ನು ಬಿದ್ದು ತನಿಖೆ ನಡೆಸಿದಾಗ, ನಸುಕಿನ ವೇಳೆಗೆ ಮರಳು ಸಾಗಿಸುವ ಟಿಪ್ಪರ್ ಲಾರಿ ಅದೇ ದಾರಿಯಲ್ಲಿ ಸಂಚರಿಸಿದ್ದು ಕಂಡುಬಂದಿದೆ. ಮರಳು ಸಾಗಿಸುವ ಟಿಪ್ಪರ್ ಲಾರಿಗಳಿಗೆ ಜಿಪಿಎಸ್ ಅಳವಡಿಸಿದ್ದು ಮತ್ತು ಲಾರಿ ಚಾಲಕರ ಮೊಬೈಲ್ ಟ್ರೇಸ್ ಆಗುವುದರಿಂದ ಪೊಲೀಸರು ಲೊಕೇಶನ್ ನೋಡಿದ್ದರು. ಅದೇ ಸಮಯದಲ್ಲಿ ಲಾರಿ ಸಂಚರಿಸಿದ್ದು ಕಂಡುಬಂದಿದ್ದರಿಂದ ಚಾಲಕನನ್ನು ಬಂಧಿಸಿದ್ದಾರೆ. ಬಂಧಿತ ಚಾಲಕನನ್ನು ಪಾಣಾಜೆ ನಿವಾಸಿ ಚರಣ್ ಕುಮಾರ್ ಎಂದು ಪೊಲೀಸರು ಗುರುತಿಸಿದ್ದಾರೆ.
ಮೇಲ್ನೋಟಕ್ಕೆ ಹಿಟ್ ಅಂಡ್ ರನ್ ಮಾಡಿರುವ ರೀತಿ ಪ್ರಕರಣ ಕಂಡುಬಂದಿದೆ. ಆದರೆ, ಆರೆಸ್ಸೆಸ್ ಗ್ರಾಮ ವಿಕಾಸ ವಿಭಾಗದ ಸಂಚಾಲಕರಾಗಿ, ಪುತ್ತೂರು, ಕಾಸರಗೋಡು, ಮಂಗಳೂರು ಭಾಗದಲ್ಲಿ ಜನಪ್ರಿಯತೆ ಗಳಿಸಿದ್ದ ವೆಂಕಟರಮಣ ಹೊಳ್ಳ ಅವರನ್ನು ಉದ್ದೇಶಪೂರ್ವಕವಾಗಿ ಮುಗಿಸಲಾಗಿದೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಚಾಲಕನನ್ನು ವಿಚಾರಣೆ ನಡೆಸುತ್ತಿದ್ದಾರೆ. ಯಾರಿಗೂ ಗೊತ್ತಾಗದೇ ಮುಚ್ಚಿ ಹೋಗುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.
07-12-25 10:21 pm
HK News Desk
Dog Attack: ಪಾದಚಾರಿಗಳ ಮೇಲೆ ಹುಚ್ಚುನಾಯಿ ದಾಳಿ ;...
07-12-25 10:17 pm
Dog Attack, Davangere: ಮಹಿಳೆ ಮೇಲೆ ರಾಟ್ ವೀಲರ್...
06-12-25 12:33 pm
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
07-12-25 10:45 pm
Udupi Correspondent
Inayat Ali, Mangalore Notice: ನ್ಯಾಶನಲ್ ಹೆರಾಲ್...
07-12-25 03:02 pm
ತಡರಾತ್ರಿ ಮನೆಗೆ ನುಗ್ಗಿ ಕಡಬ ಹೆಡ್ ಕಾನ್ಸ್ ಟೇಬಲ್ ದ...
06-12-25 06:12 pm
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm