ಬ್ರೇಕಿಂಗ್ ನ್ಯೂಸ್
09-06-25 11:03 pm Mangalore Correspondent ಕರಾವಳಿ
ಮಂಗಳೂರು, ಜೂನ್ 9 : ಕೇರಳದ ಕೊಚ್ಚಿಯ ಬೇಪೂರ್ ಸಮುದ್ರ ತೀರದಿಂದ 78 ನಾಟಿಕಲ್ ಮೈಲು ದೂರದಲ್ಲಿ ಸಿಂಗಾಪುರ ಮೂಲದ ಕಂಟೇನರ್ ಹಡಗಿನಲ್ಲಿ ಬೆಂಕಿ ಹತ್ತಿಕೊಂಡಿದ್ದು, ಅದರಲ್ಲಿದ್ದ 18 ಮಂದಿಯನ್ನು ನೌಕಾಪಡೆ ಮತ್ತು ಇಂಡಿಯನ್ ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ. ನಾಲ್ವರು ಸಿಬಂದಿ ನಾಪತ್ತೆಯಾಗಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ.
ಐವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕ ಇದೆಯೆಂದು ಅಧಿಕಾರಿಗಳು ತಿಳಿಸಿದ್ದು, ಅವರನ್ನು ಐಎನ್ಎಸ್ ಸೂರತ್ ಶಿಪ್ ಮೂಲಕ ಪಣಂಬೂರು ಬಂದರಿಗೆ ತರಲಾಗಿದೆ. ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆಯಿದೆ. ಎಂವಿ ವ್ಯಾನ್ ಹೈ 503 ಹೆಸರಿನ ಸಿಂಗಾಪುರದ ಕಂಟೇನರ್ ಹಡಗು ಶ್ರೀಲಂಕಾದ ಕೊಲಂಬೋದಿಂದ ಮುಂಬೈ ತೆರಳುತ್ತಿದ್ದಾಗ ಕೇರಳ ಸಮುದ್ರ ತೀರದಲ್ಲಿ ದುರಂತಕ್ಕೀಡಾಗಿದೆ.




ಕೊಲಂಬೋದಿಂದ ಹಡಗು ಹೊರಟಿದ್ದಾಗ ಒಟ್ಟು 22 ಸಿಬಂದಿ ಇದ್ದರು. ಎಂಟು ಚೈನಾ, ನಾಲ್ಕು ತೈವಾನ್, ನಾಲ್ಕು ಮ್ಯಾನ್ಮಾರ್, ಇಬ್ಬರು ಇಂಡೋನೇಶ್ಯಾ ಮೂಲದವರು ಇದ್ದರು. ಈಗ 18 ಸಿಬಂದಿಯನ್ನು ರಕ್ಷಣೆ ಮಾಡಲಾಗಿದ್ದು ನಾಲ್ಕು ಮಂದಿ ಸಮುದ್ರದಲ್ಲಿ ನಾಪತ್ತೆಯಾಗಿದ್ದು ಅವರ ರಕ್ಷಣೆಗಾಗಿ ಹುಡುಕಾಟ ಮುಂದುವರಿದಿದೆ. ಮಂಗಳೂರು ಕೋಸ್ಟ್ ಗಾರ್ಡ್ ಪಡೆಯ ಐಸಿಜಿಎಸ್ ರಾಜದೂತ್, ಕೊಚ್ಚಿಯ ಐಸಿಜಿಎಸ್ ಅರ್ನ್ವೇಶ್, ಅಗತ್ತಿಯ ಐಸಿಜಿಎಸ್ ಸಾಚೆಟ್ ಹಡಗಿನ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ನಾಪತ್ತೆಯಾದವರಲ್ಲಿ ಇಬ್ಬರು ತೈವಾನ್, ಒಬ್ಬ ಇಂಡೋನೇಶ್ಯಾ ಮತ್ತು ಇನ್ನೊಬ್ಬ ಮ್ಯಾನ್ಮಾರ್ ಮೂಲದವರು ಇದ್ದಾರೆ. ಹಡಗಿನಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಎರಡನೇ ಹಡಗು ದುರಂತ
ಇತ್ತೀಚೆಗೆ ಮೇ 25ರಂದು ಕೇರಳ ಕರಾವಳಿಯಲ್ಲಿ ಲೈಬೀರಿಯಾ ಮೂಲದ 30 ವರ್ಷ ಹಳೆಯ ಬೃಹತ್ ಕಂಟೇನರ್ ಹಡಗು ಮುಳುಗಡೆಯಾಗಿತ್ತು. ಅದರಲ್ಲಿ 640 ಕಂಟೇನರ್ ಗಳಿದ್ದು, ಆ ಪೈಕಿ 12 ಕಂಟೇನರ್ ಗಳಲ್ಲಿ ಅತ್ಯಂತ ವಿಷಕಾರಿ ರಾಸಾಯನಿಕಗಳು ತುಂಬಿದ್ದವು. ಕೆಲವು ಕಂಟೇನರ್ ಗಳು ಕೇರಳ ಕರಾವಳಿ ದಡಕ್ಕೆ ತೇಲಿ ಬಂದಿದ್ದು ದಡಕ್ಕೆ ಬಡಿಯುತ್ತಲೇ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದ್ದವು. ಇದರಿಂದಾಗಿ ಕೇರಳದ ಕರಾವಳಿ ಸಮುದ್ರ ತೀರ ತೀವ್ರ ಮಲಿನಗೊಳ್ಳುವ ಆತಂಕ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಕಂಟೇನರ್ ಹಡಗು ದುರಂತಕ್ಕೀಡಾಗಿದೆ.
Fire Breaks Out on Singapore Container Ship Off Kerala Coast; 18 Crew Rescued, 4 Missing, Injured Brought to Mangalore by Coast Guard
22-07-26 06:00 pm
HK News Staffer
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
22-07-26 02:32 pm
HK News Staffer
ನೀಟ್ ಅಕ್ರಮ; ಮೋದಿ ರಾಜಿನಾಮೆ ಒತ್ತಾಯಿಸಿ ಪ್ರಧಾನಿ ನ...
21-07-26 09:03 pm
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
22-07-26 09:18 pm
HK News Desk
2,000 ರೂ. ಆಸೆಗೆ ಬಿದ್ದು ಬ್ಯಾಂಕ್ ಅಕೌಂಟ್ ಹಸ್ತಾಂತ...
21-07-26 11:02 pm
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
22-07-26 10:24 pm
HK News Desk
ಎಸ್ಐಆರ್ ಪರಿಷ್ಕರಣೆ ನೆಪದಲ್ಲಿ ಎಪಿಕೆ ಫೈಲ್ ಕಳುಹಿಸಿ...
22-07-26 09:03 pm
ಬಂಟ್ವಾಳ ; ಮಳೆ-ಗಾಳಿಗೆ ಶಾಲಾ ಬಸ್ಸಿಗೆ ಉರುಳಿ ಬಿದ್ದ...
22-07-26 07:37 pm
Mysuru Murder, Suicide: ನಾನಿಲ್ಲದೆ ನನ್ನ ಹೆಂಡತಿ...
22-07-26 04:21 pm
ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ವ್ಯಕ್ತಿಯಿಂದ ಕಳ್ಳತ...
22-07-26 10:55 am