ಬ್ರೇಕಿಂಗ್ ನ್ಯೂಸ್
21-06-25 11:04 pm Mangaluru Correspondent ಕರಾವಳಿ
ಮಂಗಳೂರು, ಜೂ. 21: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದು 18 ದಿನ ಜೈಲು ವಾಸ ಅನುಭವಿಸಿದರೂ, ಜಾಮೀನಿನಲ್ಲಿ ಹೊರಬಂದು ಮತ್ತೆ ಕರ್ತವ್ಯಕ್ಕೆ ಮರಳಿದ್ದ ದಕ್ಷಿಣ ಕನ್ನಡ ಜಿಲ್ಲಾ ಗಣಿ ಇಲಾಖೆಯ ಉಪ ನಿರ್ದೇಶಕಿ ಕೃಷ್ಣವೇಣಿ ಅವರನ್ನು ಸಾರ್ವಜನಿಕ ಟೀಕೆ, ಮಾಧ್ಯಮಗಳ ಸುದ್ದಿಯ ಬಳಿಕ ಕೊನೆಗೂ ರಾಜ್ಯ ಸರಕಾರ ಅಮಾನತುಗೊಳಿಸಿ ಆದೇಶ ಮಾಡಿದೆ.
ಮೇ 28ರಂದು 50 ಸಾವಿರ ಲಂಚ ಪಡೆಯುವ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದು ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕೃಷ್ಣವೇಣಿ 18 ದಿನಗಳ ಜೈಲು ವಾಸದ ಬಳಿಕ ಹೈಕೋರ್ಟಿನಿಂದ ಕೇಸಿಗೆ ಮಧ್ಯಂತರ ತಡೆಯಾಜ್ಞೆ ತರುವ ಮೂಲಕ ಜೈಲಿನಿಂದ ಹೊರಬಂದಿದ್ದರು. ಅದರ ಬೆನ್ನಲ್ಲೇ ಎಂದಿನಂತೆ, ತನ್ನ ಗಣಿ ಇಲಾಖೆ ಕಚೇರಿಯಲ್ಲಿ ಕರ್ತವ್ಯಕ್ಕಿಳಿದು ಮತ್ತೆ ಸುಲಿಗೆ ಮಾಡುವುದಕ್ಕೆ ಮುಂದಾಗಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದು, ರಾಜ್ಯ ಸರಕಾರ ಆಕೆಯನ್ನು ಹುದ್ದೆಯಿಂದ ಅಮಾನತು ಮಾಡದೇ ಇರುವುದನ್ನು ಎತ್ತಿಹಿಡಿದು 'ಹೆಡ್ ಲೈನ್ ಕರ್ನಾಟಕ' ಸರ್ಕಾರದ ಗಮನ ಸೆಳೆದಿತ್ತು.
ಯಾವುದೇ ಸರ್ಕಾರಿ ಸಿಬಂದಿ ಬಂಧನವಾಗಿ 48 ಗಂಟೆ ಕಾಲ ಜೈಲಿನಲ್ಲಿದ್ದರೆ, ಆ ವ್ಯಕ್ತಿಯನ್ನು ಕೂಡಲೇ ಹುದ್ದೆಯಿಂದ ಅಮಾನತು ಮಾಡಬೇಕೆಂದು ಕಾನೂನು ಹೇಳುತ್ತದೆ. ಆದರೆ ಈ ನಿಯಮವನ್ನು ಪಾಲನೆ ಮಾಡದೇ ಇದ್ದುದರ ಬಗ್ಗೆ ಮತ್ತು ಗಣಿ ಅಧಿಕಾರಿ ಕೃಷ್ಣವೇಣಿ ಒಂದು ವರ್ಷದಲ್ಲಿ ಎರಡು ಬಾರಿ ಸಿಕ್ಕಿಬಿದ್ದರೂ ಮೇಲಿನ ಅಧಿಕಾರಿಗಳು ಮೃದು ಧೋರಣೆ ತೋರಿದ್ದಕ್ಕೆ ಟೀಕೆ ಕೇಳಿಬಂದಿತ್ತು. ಹೆಡ್ ಲೈನ್ ಕರ್ನಾಟಕ ರಾಜ್ಯ ಸರಕಾರದ ಅಸಡ್ಡೆಯ ಬಗ್ಗೆ ಸುದ್ದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಇಂಪ್ಯಾಕ್ಟ್ ಆಗಿದ್ದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕೃಷ್ಣವೇಣಿ ಅವರನ್ನು ಅಮಾನತುಗೊಳಿಸುವಂತೆ ಶಿಫಾರಸು ಮಾಡಿದ್ದರು. ಜೈಲು ಪಾಲಾಗಿದ್ದರೂ ಸದರಿ ಅಧಿಕಾರಿಯನ್ನು ಅಮಾನತು ಮಾಡದೇ ಇರುವುದು ಸರ್ಕಾರದ ಇಮೇಜಿಗೆ ಧಕ್ಕೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ ಗಣಿ ಇಲಾಖೆ ಅಧೀನ ಕಾರ್ಯದರ್ಶಿ ಕೃಷ್ಣವೇಣಿ ಅವರನ್ನು ಮೇ 28ರಿಂದಲೇ ಅನ್ವಯಗೊಳಿಸಿ ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ. ಇದಲ್ಲದೆ, ಉಡುಪಿ ಜಿಲ್ಲಾ ಹಿರಿಯ ಭೂವಿಜ್ಞಾನಿ ಸಂದೀಪ್ ಜಿ.ಯು. ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಗಣಿ ಇಲಾಖೆಯ ಹೆಚ್ಚುವರಿ ಪ್ರಭಾರ ಹೊಣೆಯನ್ನು ವಹಿಸಿ ಆದೇಶಿಸಿದ್ದಾರೆ. ಗಣಿ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಆಗುತ್ತಿರುವುದು ಸರ್ಕಾರದ ಗಮನದಲ್ಲಿದ್ದರೂ, ಅಧಿಕಾರಿಗಳು ಅಪರೂಪಕ್ಕೆ ಒಮ್ಮೆ ಅನ್ನುವಂತೆ ರೆಡ್ ಹ್ಯಾಂಡಾಗಿ ಸಿಕ್ಕಿಬೀಳುತ್ತಾರೆ. ಅಂತಹ ಸಂದರ್ಭದಲ್ಲಿಯೂ ಭ್ರಷ್ಟ ಅಧಿಕಾರಿಗಳನ್ನು ಅಮಾನತುಗೊಳಿಸದೆ ರಕ್ಷಣೆಗೆ ನಿಲ್ಲುವುದು ಅಕ್ಷಮ್ಯ. ರಾಜ್ಯ ಸರಕಾರ ಈ ರೀತಿಯ ನಿರ್ಲಕ್ಷ್ಯ ಮಾಡಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದಂತೆ, ಸರ್ಕಾರದ ಘನತೆಗೆ ಕುಂದು ತಂದಂತಾಗುತ್ತದೆ.
Mangalore Mining Officer Krishnaveni has been suspended from her position following a damning exposé by Headline Karnataka, which revealed that she continued to hold office even after being jailed for 18 days following her arrest by the Lokayukta. The report questioned how Krishnaveni remained in her role despite facing serious corruption allegations and judicial custody. The Lokayukta had arrested her in connection with an ongoing investigation into alleged irregularities in mining operations, yet she resumed official duties soon after her release on bail.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am