ಹರೇಕಳ ಹಲ್ಲೆ ಪ್ರಕರಣ ; ಕೊಣಾಜೆ ಠಾಣೆಯಲ್ಲಿ ಕಾಂಗ್ರೆಸ್ - ಎಸ್ ಡಿಪಿಐ ದೂರು - ಪ್ರತಿದೂರು

23-12-20 02:58 pm       Mangalore Correspondent   ಕರಾವಳಿ

ಹರೇಕಳದಲ್ಲಿ ನಡೆದ ಹಲ್ಲೆ ಪ್ರಕರಣ ಸಂಬಂಧಿಸಿ ಎಸ್ ಡಿಪಿಐ ಕಾರ್ಯಕರ್ತರು, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರತಿದೂರು ನೀಡಿದ್ದಾರೆ. 

ಉಳ್ಳಾಲ, ಡಿ.23: ಪಂಚಾಯತ್ ಚುನಾವಣೆ ಸಂದರ್ಭ ಹರೇಕಳದಲ್ಲಿ ನಡೆದ ಹಲ್ಲೆ ಪ್ರಕರಣ ಸಂಬಂಧಿಸಿ ಎಸ್ ಡಿಪಿಐ ಕಾರ್ಯಕರ್ತರು, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರತಿದೂರು ನೀಡಿದ್ದಾರೆ. 

ಹರೇಕಳದ ರಾಮಕೃಷ್ಣ ಶಾಲೆಯ ಮತಗಟ್ಟೆ ಮುಂಭಾಗದಲ್ಲಿ ಚುನಾವಣಾ ಅಕ್ರಮದ ವಿಷಯ ಮುಂದಿಟ್ಟು SDPI - ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪರಸ್ಪರ ಕೈ ಮಿಲಾಯಿಸಿದ ಪರಿಣಾಮ ಪೊಲೀಸರು ಲಾಠಿ ಬೀಸಿದ್ದರು. ಈ ವೇಳೆ, ಎಸ್ ಡಿಪಿಐ ಕಾರ್ಯಕರ್ತರ ಹಲ್ಲೆಯಿಂದ ಗಾಯಗೊಂಡಿದ್ದಾಗಿ ಕಾಂಗ್ರೆಸ್ ಕಾರ್ಯಕರ್ತ ಝಕಾರಿಯಾ ಮಲಾರ್ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೆ ಎಸ್ ಡಿಪಿಐನ  ಐಬು, ನ್ಯೂಮನ್, ಮುಬಾರಕ್ ಎಂಬ ಮೂವರ ವಿರುದ್ಧ ದೂರು ನೀಡಿದ್ದು , ಪ್ರಕರಣ ದಾಖಲಾಗಿತ್ತು. 

ನಿನ್ನೆ ರಾತ್ರಿ ಶಾಸಕ ಯು.ಟಿ ಖಾದರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೊಣಾಜೆ ಠಾಣೆಗೆ ಮುತ್ತಿಗೆ ಹಾಕಿ ಆರೋಪಿಗಳ ಶೀಘ್ರ ಬಂಧನಕ್ಕೆ ಒತ್ತಾಯಿಸಿದ್ದರು. 

ಇದೇ ವೇಳೆ, ಎಸ್ ಡಿಪಿಐ ಕಾರ್ಯಕರ್ತ ಮುಬಾರಕ್ ಎಂಬವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಕಾಂಗ್ರೆಸ್ ಪಕ್ಷದ ನಾಲ್ವರು ಕಾರ್ಯಕರ್ತರಾದ ಝಕಾರಿಯ ಮಲಾರ್, ಇಮ್ತಿಯಾಝ್, ಬದ್ರುದ್ದೀನ್, ಇಮ್ತಿಯಾಝ್ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದಾರೆ. ಕೊಣಾಜೆ ಠಾಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧವೂ ಪ್ರತಿದೂರು ದಾಖಲಾಗಿದೆ.

ಇದನ್ನೂ ಓದಿ: ಪಂಚಾಯತ್ ಫೈಟ್ ; ಹರೇಕಳದಲ್ಲಿ ಕಾಂಗ್ರೆಸ್-SDPI ನಡುವೆ ಘರ್ಷಣೆ, ಗುಂಪು ಚದುರಿಸಲು ಲಾಠಿಚಾರ್ಜ್ !

                  ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ‌ ; ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಕೊಣಾಜೆ ಠಾಣೆಗೆ ಮುತ್ತಿಗೆ

SDPI has filed a complaint against Congress at Konaje Police Station over class between the both in Arekala, Konaje Panchayat Elections 2020 in which police had to Lati charge.