ಬ್ರೇಕಿಂಗ್ ನ್ಯೂಸ್
23-12-20 05:38 pm Mangalore Correspondent ಕರಾವಳಿ
ಉಳ್ಳಾಲ, ಡಿ.23: ಹರೇಕಳದ ಮತಗಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಝಕಾರಿಯಾ ಮೇಲೆ SDPI ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆಗೆ ಬಿಜೆಪಿಯೇ ಕಾರಣ. ಈ ಘಟನೆಗೆ ಬಿಜೆಪಿ ಸಹಾಯ ಹಸ್ತ ಇದ್ದು, ಬಜರಂಗದಳದಂತೆಯೇ ಎಸ್ ಡಿಪಿಐ ಕೂಡ ಬಿಜೆಪಿಯ ಅಂಗ ಸಂಘಟನೆಯಾಗಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಆರೋಪಿಸಿದ್ದಾರೆ.
ತೊಕ್ಕೊಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತ ಝಕಾರಿಯಾ ಮಲಾರ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಬಿಜೆಪಿ ಸಹಕಾರ ಕೊಟ್ಟಿರುವ ಸಂಶಯ ಇದ್ದು ಉಳ್ಳಾಲದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಇಲ್ಲದ ಭಾಗದಲ್ಲಿ ಎಸ್ ಡಿಪಿಐ ಅಭ್ಯರ್ಥಿಗಳಿಗೆ ಬೆಂಬಲ ನೀಡಿರುವುದು ಗಮನಕ್ಕೆ ಬಂದಿದೆ ಎಂದು ಆರೋಪಿಸಿದರು.
ಬಿಜೆಪಿಯವರು ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಒಂದು ರೀತಿ ವರ್ತಿಸಿದರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವರು ಎಸ್ ಡಿಪಿಐಯ ಜೊತೆಗೆ ಹೊಂದಾಣಿಕೆಗೆ ಹಿಂಜರಿಯುವುದಿಲ್ಲ. ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಎಸ್ ಡಿಪಿಐ ಇವರಿಗೆ ಆಗ್ತದೆ ಎಂಬುದೇ ದುರಂತ. ಪ್ರಸ್ತುತ ವಿದ್ಯಮಾನಗಳನ್ನು ನೋಡುವಾಗ ಬಜರಂಗದಳದಂತೆಯೇ ಎಸ್ ಡಿಪಿಐ ಬಿಜೆಪಿಯ ಅಂಗ ಪಕ್ಷ ಎಂದು ಅನಿಸ್ತಿದೆ. ಮತಗಟ್ಟೆಯ ಬಳಿ ನಡೆದ ಹಲ್ಲೆಯಲ್ಲಿ ಬಿಜೆಪಿ ಕುಮ್ಮಕ್ಕು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಅವಕಾಶವಾದಿ ರಾಜಕೀಯ ಮಾಡುತ್ತಿದೆ. ಕೊಣಾಜೆ ಗ್ರಾಮದ ಅಡ್ಕರೆಪಡ್ಪು ಪ್ರದೇಶದಲ್ಲಿ 150 ಬಿಜೆಪಿ ಮತಗಳಿದ್ದರೂ ಅಲ್ಲಿ ತನ್ನ ಪಕ್ಷದ ಬೆಂಬಲಿತ ಅಭ್ಯರ್ಥಿಯನ್ನು ನಿಲ್ಲಿಸದೆ ಎಸ್ ಡಿಪಿಐಗೆ ಸಹಕರಿಸಿದ್ದಾರೆ. ಅಂತಹ ಉದಾಹರಣೆ 10 ಗ್ರಾಮದಲ್ಲೂ ಕಂಡುಬಂದಿದೆ. ಹಾಗೆಯೇ ಹಲ್ಲೆ ಘಟನೆಯಲ್ಲಿ ಅಪರಾಧಿಗಳನ್ನು ಬಂಧಿಸಬೇಕು ಎಂದು ಶಾಸಕರ ನೇತೃತ್ವದಲ್ಲಿ ಠಾಣೆಗೆ ಮುತ್ತಿಗೆ ಹಾಕುವ ಮೂಲಕ ಕಾರ್ಯಕರ್ತರ ಜೊತೆಗೆ ಶಾಸಕರು ಸದಾ ಇದ್ದಾರೆ ಎಂದು ತೋರಿಸಿದ್ದೇವೆ ಎಂದರು.
ಪುರಸಭೆಯ ಮಾಜಿ ಉಪಾಧ್ಯಕ್ಷ ದಿನೇಶ್ ರೈ ಉಳ್ಳಾಲಗುತ್ತು ಮಾತನಾಡಿ ಎಸ್ ಡಿಪಿಐ ಹಾಗೂ ಬಿಜೆಪಿ ಉಳ್ಳಾಲ ನಗರಸಭೆಯ ಚುನಾವಣೆ ಸಂದರ್ಭ ಹಾಗೂ ಅಧಿಕಾರ ಪಡೆಯುವ ಯತ್ನದಲ್ಲಿ ಹಲವು ರೀತಿಯ ಹೊಂದಾಣಿಕೆ ಮಾಡಿದ್ದು ಜನರು ಮರೆತಿಲ್ಲ ಎಂದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೋಡಿಜಾಲ್, ಆಲ್ವಿನ್ ಡಿಸೋಜ, ದೇವಕಿ ರಾಘವ ಉಳ್ಳಾಲ್ ಹಾಗೂ ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.
BJP is the mastermind behind the fight between sdpi and congress in Arekala Konaje Panchyath Elections 2020 slams, Santosh Shetty.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm