ಕ್ರಿಸ್ಮಸ್ ಸಂಭ್ರಮ ; ಈ ಬಾರಿ ಸಾಂತಾಕ್ಲಾಸ್ ಇರಲ್ಲ ! ಸರಳ ಆಚರಣೆಗೆ ಒತ್ತು

25-12-20 12:10 pm       Mangalore Correspondent   ಕರಾವಳಿ

ಏಸು ಕ್ರಿಸ್ತರ ಜನ್ಮದಿನ ಹಿನ್ನೆಲೆಯಲ್ಲಿ ಕರಾವಳಿಯ ಚರ್ಚ್, ಕ್ರಿಸ್ತಿಯನ್ನರ ಮನೆಗಳಲ್ಲಿ ಸಂಭ್ರಮ ಮನೆಮಾಡಿದೆ.

ಮಂಗಳೂರು, ಡಿ.24: ಏಸು ಕ್ರಿಸ್ತರ ಜನ್ಮದಿನ ಹಿನ್ನೆಲೆಯಲ್ಲಿ ಕರಾವಳಿಯ ಚರ್ಚ್, ಕ್ರಿಸ್ತಿಯನ್ನರ ಮನೆಗಳಲ್ಲಿ ಸಂಭ್ರಮ ಮನೆಮಾಡಿದೆ. ಕೊರೊನಾ ಕಾರಣ ಚರ್ಚ್ ಗಳಲ್ಲಿ ಸರಳ ಆಚರಣೆ ನಡೆಯಲಿದ್ದು ಸಾಮೂಹಿಕ ಪ್ರಾರ್ಥನೆಗೆ ಬ್ರೇಕ್ ಹಾಕಿ ಆಯಾ ಸಮಯಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. 

ಏಸು ಜನ್ಮದಿನದ ಮುನ್ನಾ ದಿನ ಡಿ.24ರಂದು ರಾತ್ರಿ ಕ್ರೈಸ್ತರು ಕ್ರಿಸ್ಮಸ್ ಜಾಗರಣೆ ಆಚರಿಸುತ್ತಾರೆ. ಗುರುವಾರ ರಾತ್ರಿ ವಿಶೇಷ ಪ್ರಾರ್ಥನೆ ನಡೆದಿದ್ದು ಕ್ರೈಸ್ತರು ಸರಳವಾಗಿ ಭಾಗವಹಿಸಿದ್ದಾರೆ. ಕ್ರಿಸ್ಮಸ್ ದಿನ ಬೆಳಗ್ಗೆ ಚರ್ಚ್‌ಗಳಲ್ಲಿ ಬಲಿ ಪೂಜೆಗಳನ್ನು ನಡೆಸುವುದು ವಾಡಿಕೆ. ಈ ಬಾರಿಯೂ ಸಂಪ್ರದಾಯ ಬಲಿಪೂಜೆಗಳು ನಡೆದಿದ್ದು, ಸೀಮಿತ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದಾರೆ. ಕೊರೊನಾ ಕಾರಣ ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಬದಲಿಗೆ, ಹೆಚ್ಚುವರಿ ಸಮಯಗಳನ್ನು ನಿಗದಿ ಮಾಡಲಾಗಿದೆ. ಹೀಗಾಗಿ ಕ್ರೈಸ್ತರು ಆಯಾ ಸಮಯಗಳಲ್ಲಿ ಬಂದು ಪ್ರಾರ್ಥನೆ ನೆರವೇರಿಸಲು ಅವಕಾಶ ನೀಡಲಾಗಿದೆ.

ಕ್ರಿಸ್ಮಸ್ ಹಿನ್ನೆಲೆ ಕರಾವಳಿಯ ಬಹುತೇಕ ಎಲ್ಲಾ ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಚರ್ಚ್ ಆವರಣದಲ್ಲಿ ಮತ್ತು ಕ್ರೈಸ್ತರ ಮನೆಗಳ ಆವರಣದಲ್ಲಿ ಆಕರ್ಷಕ ಕ್ರಿಬ್‌ಗಳನ್ನು ಮತ್ತು ನಕ್ಷತ್ರಗಳನ್ನು ಜೋಡಿಸಲಾಗಿದೆ.  

ಮಂಗಳೂರಿನ ರೊಜಾರಿಯೋ ಕೆಥೆಡ್ರಲ್‌ನಲ್ಲಿ ಗುರುವಾರ ರಾತ್ರಿ ಬಿಷಪ್ ರೆ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ನೇತೃತ್ವದಲ್ಲಿ ಹಬ್ಬದ ಬಲಿಪೂಜೆ ನಡೆಯಿತು. ಕೆಥೆಡ್ರಲ್‌ನ ರೆಕ್ಟರ್ ವಂ. ಆಲ್ಪ್ರೆಡ್ ಜೆ.ಪಿಂಟೋ, ಸಹಾಯಕ ಗುರು ವಂ. ವಿನೋದ್ ಲೋಬೋ, ರೊಸಾರಿಯೊ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ. ವಿಕ್ಟರ್ ಡಿಸೋಜ ಭಾಗವಹಿಸಿದ್ದರು.

ಕೊರೋನ ಕಾರಣ ಈ ಬಾರಿ ಸರಳವಾಗಿ ಹಬ್ಬದ ಆಚರಣೆ ಆಯೋಜಿಸಲಾಗಿದೆ. ಈ ಬಾರಿ ಸಾಂತಾಕ್ಲಾಸ್ ಸಂಭ್ರಮವೂ ಇರುವುದಿಲ್ಲ. ಹಬ್ಬದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು, ಸರಳ ಮಾದರಿಯಲ್ಲಿ ಶುಭಾಶಯ ಸಲ್ಲಿಸಲು ಆದ್ಯತೆ ನೀಡಲಾಗಿದೆ.

Christmas 2020 was celebrated with Simplicity amid Covid 19 rules in Mangalore. People in the mass were limited as the masses were online. Overall the Christmas couldn't be celebrated as it was the previous years.