ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ ; ಲಕ್ಷಾಂತರ ಕಾರ್ಯಕರ್ತರಿಗೆ ಅವಮಾನ, ಆರೋಪಿಗಳ ವಿರುದ್ಧ ಕ್ರಮಕ್ಕೆ ಸತೀಶ್ ಕುಂಪಲ ಆಗ್ರಹ

19-08-25 11:07 pm       Mangalore Correspondent   ಕರಾವಳಿ

ಧರ್ಮಸ್ಥಳ ಪ್ರಕರಣದ ನೆಪದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಅವಹೇಳನ ಮಾಡಲಾಗುತ್ತಿದ್ದು, ಇದನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ. ಸ್ವಾರ್ತಕ್ಕಾಗಿ ಏನೂ ಮಾಡದೆ, ತನ್ನ ಜೀವನವನ್ನು ರಾಷ್ಟ್ರಕ್ಕಾಗಿ ಅರ್ಪಿಸಿಕೊಂಡು ಪಕ್ಷ ಸಂಘಟನೆಗಾಗಿ ನಿಸ್ವಾರ್ಥ ಕೆಲಸ ಮಾಡುತ್ತಿರುವವರು ಸಂತೋಷ್.

ಮಂಗಳೂರು, ಆ.19 : ಧರ್ಮಸ್ಥಳ ಪ್ರಕರಣದ ನೆಪದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಅವಹೇಳನ ಮಾಡಲಾಗುತ್ತಿದ್ದು, ಇದನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ. ಸ್ವಾರ್ತಕ್ಕಾಗಿ ಏನೂ ಮಾಡದೆ, ತನ್ನ ಜೀವನವನ್ನು ರಾಷ್ಟ್ರಕ್ಕಾಗಿ ಅರ್ಪಿಸಿಕೊಂಡು ಪಕ್ಷ ಸಂಘಟನೆಗಾಗಿ ನಿಸ್ವಾರ್ಥ ಕೆಲಸ ಮಾಡುತ್ತಿರುವವರು ಸಂತೋಷ್. ಆದರೆ ಜಾಲತಾಣದಲ್ಲಿ ಸಂತೋಷ್ ಅವರನ್ನು ಅವಹೇಳನ ಮಾಡಿದ್ದು ವಿನಾಕಾರಣ ಎಳೆದು ತರಲಾಗಿದೆ. ಇದರ ಬಗ್ಗೆ ಪಕ್ಷದ ಕಡೆಯಿಂದ ಹಲವಾರು ಕಡೆಗಳಲ್ಲಿ ಪೊಲೀಸ್ ದೂರನ್ನೂ ನೀಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಧರ್ಮಸ್ಥಳದಲ್ಲಿ ಏನು ಎಸ್ಐಟಿ ತನಿಖೆ ಆಗುತ್ತಿದೆ, ಅದರ ಬಗ್ಗೆ ಬಿಜೆಪಿ ನಿಲುವು ಸ್ಪಷ್ಟ ಇದೆ. ಸತ್ಯಾಸತ್ಯತೆ ಹೊರ ತರುವುದಕ್ಕಾಗಿ ಎಸ್ಐಟಿ ತನಿಖೆ ಆಗುತ್ತಿದ್ದು ಅದನ್ನು ಬೆಂಬಲಿಸುತ್ತೇವೆ, ಆದರೆ ಇದರ ನೆಪದಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವುದನ್ನು ಸಹಿಸುವುದಿಲ್ಲ. ಇದರ ನೆಪದಲ್ಲಿ ನಮಗೆ ಮಾರ್ಗದರ್ಶಕರಾಗಿರುವ ಸಂತೋಷ್ ಅವರನ್ನು ಅವಹೇಳನ ಮಾಡುವುದು ಕರಾವಳಿ ಜಿಲ್ಲೆಗಳ ಲಕ್ಷಾಂತರ ಕಾರ್ಯಕರ್ತರಿಗೆ ಮಾಡಿದ ಅವಮಾನ. ಈ ರೀತಿಯ ಅವಹೇಳನ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತವನ್ನು ಆಗ್ರಹಿಸುತ್ತೇನೆ ಎಂದರು.

ಧರ್ಮಸ್ಥಳ ದೂರುದಾರನ ಬಗ್ಗೆ ನಮಗೆ ಸಂಶಯ ಇದೆ. ಯಾರದ್ದೋ ಒತ್ತಡದಿಂದ ದೂರು ನೀಡಿದ್ದಾಗಿ ಆತ ಹೇಳಿರುವುದಾಗಿ ಮಾಧ್ಯಮಗಳಲ್ಲಿ ಬರುತ್ತಿದೆ. ಮಾಜಿ ಜಿಲ್ಲಾಧಿಕಾರಿ ಸೆಂಥಿಲ್ ಹೆಸರೂ ಕೇಳಿಬರುತ್ತಿದೆ. ಎಡಪಂಥೀಯರ ಒತ್ತಡದಿಂದ ಎಸ್ಐಟಿ ರಚಿಸಿದ್ದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇದರಿಂದಾಗಿ ಜನಸಾಮಾನ್ಯರಲ್ಲಿ ನಾನಾ ರೀತಿಯ ಸಂಶಯ ವ್ಯಕ್ತವಾಗುತ್ತಿದ್ದು ಸರ್ಕಾರದಿಂದ ಸ್ಪಷ್ಟನೆ ಬಯಸುತ್ತಿದ್ದಾರೆ. ಆದರೆ ಸರಕಾರ ನಡೆಸುವವರ ವರ್ತನೆ ಹಿಂದುಗಳ ಮೇಲೆ ಸವಾರಿ ಮಾಡುತ್ತಿರುವಂತೆ ತೋರುತ್ತಿದೆ. ಜನಾರ್ದನ ಪೂಜಾರಿಯವರು ಧರ್ಮಸ್ಥಳ ಪರವಾಗಿ ಹೇಳಿಕೆ ನೀಡಿದ್ದಕ್ಕೆ ಪುತ್ತೂರಿನ ಕಾಂಗ್ರೆಸ್ ಮುಖಂಡ ಮಹಮ್ಮದಾಲಿ, ನಾರಾಯಣ ಗುರುಗಳ ಬಗ್ಗೆ ಟೀಕೆ ಮಾಡಿದ್ದಾರೆ. ಆಮೂಲಕ ನಾರಾಯಣ ಗುರುಗಳನ್ನು ಅವಮಾನಿಸುತ್ತಿದ್ದಾರೆ. ಇದರ ಬಗ್ಗೆ ಜಿಲ್ಲಾ ಕಾಂಗ್ರೆಸ್ ಏನು ಹೇಳುತ್ತದೋ, ನಾವು ಇದನ್ನೆಲ್ಲ ಕೇಳಿಕೊಂಡು ಸುಮ್ಮನಿರುವುದಕ್ಕೆ ಆಗಲ್ಲ ಎಂದರು. ಸುದ್ದಿಗೋಷ್ಟಿಯಲ್ಲಿ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಅರುಣ್ ಶೇಟ್, ವಸಂತ ಪೂಜಾರಿ ಮತ್ತಿತರರಿದ್ದರು.

JP district president Satish Kumpala has strongly condemned the alleged defamatory remarks made against B.L. Santhosh, the BJP’s National General Secretary (Organization), under the pretext of the ongoing Dharmasthala case investigation. He said the comments are not only baseless but an insult to the lakhs of BJP karyakartas (workers) across the coastal region.