ಬ್ರೇಕಿಂಗ್ ನ್ಯೂಸ್
21-08-25 11:57 am Mangalore Correspondent ಕರಾವಳಿ
ಮಂಗಳೂರು, ಆ 21 : ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಪೊಲೀಸರು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನ ಉಜಿರೆಯ ಅವರ ಮನೆಯಲ್ಲಿ ಗುರುವಾರ ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಭಾರಿ ಸಂಖ್ಯೆಯಲ್ಲಿ ಹಾಜರಿದ್ದ ಮಹೇಶ್ ಶೆಟ್ಟಿ ಬೆಂಬಲಿಗರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಮಹೇಶ್ ಶೆಟ್ಟಿ, 'ಎಸ್‌ಐಟಿ ತನಿಖೆ ಮುಚ್ಚಿಸಲು ಮಾಡಿರುವ ಷಡ್ಯಂತ್ರವಿದು. ಇದು ಬಿಜೆಪಿಯವರ ಪಾಪದ ಕೂಸು. ಅವರು ಸರ್ವ ನಾಶ ಆಗಿ ಹೋಗುತ್ತಾರೆ. ನಾನು ಪೊಲೀಸರಿಗೆ ಹೇಳಿಕೆ ನೀಡುತ್ತೇನೆ. ಸೌಜನ್ಯಾಗೆ ನ್ಯಾಯ ಸಿಗಬೇಕು. ನ್ಯಾಯ ಖಂಡಿತಾ ಸಿಗುತ್ತದೆ' ಎಂದು ಹೇಳಿದರು. 'ನನ್ನ ಜೀವಕ್ಕೆ ಏನಾದರೂ ಅಪಾಯ ಆದರೆ ಅದಕ್ಕೆ ಸರ್ಕಾರ ಮತ್ತು ಬಿಜೆಪಿ ಕಾರಣ' ಎಂದರು.
ಬಳಿಕ ಖಾಸಗಿ ಕಾರಿನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟೆಣ್ಣನವರ ಪೊಲೀಸರ ಜೊತೆ ತೆರಳಿದರು.
'ಬಿ. ಎಲ್.ಸಂತೋಷ್ ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿದ್ದಾರೆ. ಹಿಂದೂ ಧರ್ಮದ ನಾಯಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿ, ಬೇರೆ ಬೇರೆ ಧರ್ಮಗಳ ಹಾಗೂ ಸಮುದಾಯದ ನಡುವೆ ವೈಮನಸ್ಸು ಹಾಗೂ ದ್ವೇಷ ಭಾವನೆಯನ್ನು ಉಂಟು ಮಾಡಿದ್ದಾರೆ' ಎಂದು ಆರೋಪಿಸಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಬಿಜೆಪಿಯ ಉಡುಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಜೀವ ಕುಲಾಲ್ ಈಚೆಗೆ ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಮಹೇಶ್ ಶೆಟ್ಟಿ ಅವರಿಗೆ ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉಜಿರೆ ನಿವಾಸದಲ್ಲಿ ವಶಕ್ಕೆ ಪಡೆಯುವ ವೇಳೆ ಹೈಡ್ರಾಮಾ ;
ಅರ್ಧ ಗಂಟೆಗೂ ಹೆಚ್ಚು ಕಾಲ ಉಜಿರೆಯ ತಿಮರೋಡಿ ನಿವಾಸದ ಬಳಿ ಹೈಡ್ರಾಮಾ ಕೂಡಾ ನಡೆಯಿತು. ಅರೆಸ್ಟ್ ವಾರೆಂಟ್ ತೋರಿಸಿ ಎಂದು ತಿಮರೋಡಿ ಪರ ವಕೀಲ ಕೇಳಿದ್ದಾರೆ. ಬಳಿಕ ಪೊಲೀಸ್ ವಾಹನದಲ್ಲಿ ಬರುವುದಿಲ್ಲ ಎಂದು ತಿಮರೋಡಿ ನಿರಾಕರಿಸಿದ್ದಾರೆ. ನಂತರ ಅವರೇ ಬರುವುದಾಗಿ ಹೇಳಿದ್ದಾರೆ. ಹೀಗಾಗಿ ಪೊಲೀಸರ ಸುಪರ್ಧಿಯಲ್ಲೇ ತಿಮರೋಡಿಯವರು ಖಾಸಗಿ ವಾಹನದಲ್ಲೇ ಹೋಗಿದ್ದಾರೆ.
ಅನೇಕ ಕ್ರಿಮಿನಲ್ ಕೇಸ್ ಗಳು, ದ್ವೇಷ ಭಾಷಣ, ಬೆದರಿಕೆ ಪ್ರಕರಣಗಳಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹೆಸರಿದೆ. ಈ ಎಲ್ಲಾ ಕೇಸ್ ಗಳ ಬಗ್ಗೆಯೂ ಹೇಳಿಕೆ ಪಡೆಯುವ ಸಾಧ್ಯತೆ ಇದೆ.
ಬಿಎಲ್ ಸಂತೋಷ್ ಏನಂದಿದ್ದರು?
ಬಿಎಲ್ ಸಂತೋಷ್ ಅವರು, ಧರ್ಮಸ್ಥಳದ ಅಪಪ್ರಚಾರ ಆಗ್ತಿದೆ, ಧಾರ್ಮಿಕ ಶ್ರದ್ಧಾಕೇಂದ್ರದ ನಂಬಿಕೆ ಉಳಿಸಬೇಕು ಎಂದು ಫೇಸ್ ಬುಕ್ ಗೆ ಪೋಸ್ಟ್ ಹಾಕಿದ ಬೆನ್ನಲ್ಲೇ ಹೊಸ ಸಂಚಲನ ಹುಟ್ಟುಹಾಕಿತ್ತು. ಅನೇಕ ಬಿಜೆಪಿ ನಾಯಕರು ಧ್ವನಿ ಎತ್ತಿ, ಧರ್ಮಸ್ಥಳದತ್ತ ಜಾಥಾಗಳನ್ನು ನಡೆಸಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಬಿಎಲ್ ಸಂತೋಷ್ ಅವರ ವೈಯಕ್ತಿಕ ವಿಚಾರ ಹಾಗೂ ರಾಜಕೀಯದ ವಿಚಾರದ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ಯೂಟ್ಯೂಬ್ ಚಾನೆಲ್ ನಲ್ಲಿ ಟೀಕಿಸಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ದೂರು ದಾಖಲಾಗಿತ್ತು.ಈ ಸಂಬಂಧ ಉಲ್ಲಾಳ ಪೊಲೀಸ್ ಠಾಣೆ ಸೇರಿದಂತೆ ಹಲವೆಡೆ ಪ್ರಕರಣ ದಾಖಲಾಯಿತು. ಮೊದಲು ಪ್ರಕರಣ ಉಡುಪಿಯ ಬ್ರಹ್ಮಾವರದ ಠಾಣೆಯಲ್ಲಿ 352 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಹೀಗಾಗಿ ಈ ಸಂಬಂಧ ವಶಕ್ಕೆ ಪಡೆಯಲಾಗಿದೆ.
National Hindu Jagarana Vedike President Mahesh Shetty Timarodi was taken into custody by Udupi police on Thursday from his residence in Ujire, in connection with a case related to derogatory remarks made against BJP National General Secretary (Organization) B.L. Santhosh on social media.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್‌ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm