ಬ್ರೇಕಿಂಗ್ ನ್ಯೂಸ್
25-12-20 08:44 pm Special Crime Correspondent ಕರಾವಳಿ
ಮಂಗಳೂರು, ಡಿ.25: ಇತ್ತೀಚೆಗೆ ಬಂದರು ಠಾಣೆಯ ಕರ್ತವ್ಯ ನಿರತ ಪೊಲೀಸರಿಗೆ ಹಲ್ಲೆ ನಡೆದಿತ್ತು. ರಥಬೀದಿ ಬಳಿಯ ನ್ಯೂಚಿತ್ರಾ ಟಾಕೀಸ್ ಮುಂಭಾಗದಲ್ಲಿ ನಿಂತಿದ್ದ ಹೆಡ್ ಕಾನ್ಸ್ ಟೇಬಲ್ ಮೇಲೆ ಕತ್ತಿಯಿಂದ ಕಡಿದು ಪರಾರಿಯಾಗಿದ್ದ ಘಟನೆ ನಡೆದಿತ್ತು. ಘಟನೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದೂ ಆಗಿದೆ.
ಘಟನೆ ಸಂಬಂಧಿಸಿ ಒಬ್ಬ 21 ವರ್ಷದ ನವಾಜ್ ಮತ್ತು ಇನ್ನೊಬ್ಬ 16 ವರ್ಷದ ಅಪ್ರಾಪ್ತ ಯುವಕನನ್ನು ಪೊಲೀಸರು ಬಂಧಿಸಿದ್ದರು. ಇವರು ಕೃತ್ಯ ನಡೆಸಿದ್ದು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಿದ ಬಳಿಕ ವಿಚಾರಣೆಯನ್ನೂ ನಡೆಸಿದ್ದಾರೆ. ಆದರೆ, ಯಾವೊಂದು ವಿಚಾರಗಳನ್ನೂ ಅವರು ಬಾಯಿ ಬಿಟ್ಟಿಲ್ಲವಂತೆ.
ಪೊಲೀಸರಿಗೆ ಹಲ್ಲೆ ಮಾಡಲು ಕಾರಣ ಏನಿತ್ತು ? ನಿಮಗೆ ಯಾರಾದ್ರೂ ಪ್ರಚೋದನೆ ನೀಡಿದ್ದರೇ ? ಈ ಕೃತ್ಯದ ಹಿಂದೆ ಯಾರಿದ್ದಾರೆ ? ಹೀಗೆ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟು ಉತ್ತರ ಪಡೆಯಲು ಯತ್ನಿಸಿದ್ದಾರೆ. ಆದರೆ, ಯಾವುದೇ ಪ್ರಶ್ನೆಗೂ ಅವರು ಉತ್ತರ ನೀಡಿಲ್ಲ ಎನ್ನುತ್ತದೆ, ಪೊಲೀಸ್ ಮೂಲಗಳು.
ಪೊಲೀಸರು ಆರೋಪಿಗಳನ್ನು ಕಸ್ಟಡಿ ಪಡೆದು ಈ ಬಗ್ಗೆ ಉತ್ತರ ಪಡೆಯುವ ಕೆಲಸ ಮಾಡಬೇಕಿತ್ತು. ಆದರೆ, ನಮ್ಮ ಪೊಲೀಸ್ ಅಧಿಕಾರಿಗಳು ತಮಗೆ ಯಾಕೆ ಊರ ಉಸಾಬರಿ ಅಂತ ಆ ಪ್ರಕರಣದಿಂದಲೇ ದೂರ ಇದ್ದಾರೆ ಅನ್ನೋ ವಿಚಾರ ಕೇಳಿಬರುತ್ತಿದೆ. ಹಾಗಾಗಿ, ಆರೋಪಿಗಳನ್ನು ಕಸ್ಟಡಿ ಪಡೆದು ವಿಚಾರಿಸುವ ಗೋಜಿಗೆ ಹೋಗಿಲ್ಲ. ಸದ್ಯಕ್ಕೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಲೆಗೆ ಬೀಳ್ತಿದ್ದ ಏಟು ಸ್ವಲ್ಪದರಲ್ಲಿ ತಪ್ಪಿತ್ತು !
ಆವತ್ತು ಹೆಡ್ ಕಾನ್ಸ್ ಟೇಬಲ್ ಗಣೇಶ್ ಕಾಮತ್ ತಲೆಗೇ ಏಟು ಬೀಳುತ್ತಿತ್ತು. ಕತ್ತಿ ಹಿಡಿದುಕೊಂಡು ಕಳ್ಳ ಹೆಜ್ಜೆ ಇಟ್ಟಿದ್ದ ಹುಡುಗ ಪೊಲೀಸ್ ಪೇದೆ ಆ ಕಡೆಗೆ ತಿರುಗಿದ್ದಾಗ ಹಿಂಬದಿಯಿಂದ ತಲೆಗೆ ಹೊಡೆಯಲು ಹೋಗಿದ್ದ. ಆದರೆ, ಅದೇ ಹೊತ್ತಿನಲ್ಲಿ ಪೊಲೀಸ್ ಗೆ ಯಾರದ್ದೋ ಫೋನ್ ಬಂದಿತ್ತು. ಫೋನ್ ರಿಸೀವ್ ಮಾಡಿ, ಇತ್ತ ತಿರುಗಿದ್ದೂ ಈ ಕಡೆಯಿಂದ ಕತ್ತಿ ಬೀಸಿದ್ದೂ ಒಂದೇ ಸಮಯದಲ್ಲಾಗಿತ್ತು. ಹೀಗಾಗಿ ತಲೆಗೆ ಬೀಳುತ್ತಿದ್ದ ಏಟು ಕೈಗೆ ಬಿದ್ದಿತ್ತು. ದೊಡ್ಡ ಆಪತ್ತಿನಿಂದ ಪೊಲೀಸ್ ಪಾರಾಗಿದ್ದರು. ತಲೆಗೆ ಬೀಳುತ್ತಿದ್ದರೆ ಮಾತ್ರ ಮಂಗಳೂರು ಪೊಲೀಸರು ಎಚ್ಚತ್ತುಕೊಳ್ತಿದ್ದರೋ ಏನೋ..

ಗೋಲಿಬಾರ್ ಘಟನೆಗೇ ಪ್ರತೀಕಾರ !
ಕೆಲವರ ಮಾಹಿತಿ ಪ್ರಕಾರ, ಆರೋಪಿಗಳಲ್ಲಿ ಒಬ್ಬ ಕಳೆದ ಬಾರಿ ಗೋಲಿಬಾರ್ ಘಟನೆಯಲ್ಲಿ ಮೃತಪಟ್ಟಿದ್ದ ನೌಶೀನ್ ಕುಟುಂಬಸ್ಥರಿಗೆ ಸಂಬಂಧಿಕನಂತೆ. ಹೀಗಾಗಿ ಗೋಲಿಬಾರ್ ಘಟನೆಗೆ ವರ್ಷ ತುಂಬುವ (ಡಿ.19) ಹೊತ್ತಿನಲ್ಲೇ ಪೊಲೀಸರ ಮೇಲೆ ಹಗೆ ತೀರಿಸುವ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಗೋಲಿಬಾರ್ ಘಟನೆಯ ವರ್ಷಾಚರಣೆಗೂ ಮುನ್ನ ಡಿ.16ರಂದು ಈ ಘಟನೆ ನಡೆದಿತ್ತು.

ಇದಕ್ಕೂ ಮುನ್ನ ಮಂಗಳೂರಿನಲ್ಲಿ ಉಗ್ರರ ಪರವಾದ ಗೋಡೆ ಬರಹದ ಕೃತ್ಯ ಕಂಡುಬಂದಿತ್ತು. ಬಳಿಕ ಗೋಡೆ ಬರಹ ಬರೆದವರನ್ನು ಪೊಲೀಸರು ಸೆರೆಹಿಡಿದ್ರು. ಆದರೆ, ಪೊಲೀಸರ ಮೇಲಿನ ಹಲ್ಲೆ ಘಟನೆಗೂ, ಗೋಡೆ ಬರಹಕ್ಕೂ ಸಂಬಂಧ ಇದೆಯೇ ಎನ್ನುವ ಬಗ್ಗೆ ತನಿಖೆ ನಡೆಸಿಲ್ಲ. ಎರಡು ಘಟನೆಗಳೂ ಸುಮಾರು ಒಂದೇ ಸಂದರ್ಭದಲ್ಲಿ ನಡೆದಿದ್ದರಿಂದ ಗೋಲಿಬಾರ್ ಘಟನೆಯ ಪ್ರತೀಕಾರಕ್ಕಾಗಿ ಈ ಬೆಳವಣಿಗೆ ನಡೆದಿದೆಯೇ ಎನ್ನುವ ಬಗ್ಗೆ ಸಾರ್ವಜನಿಕರಲ್ಲಿ ಸಂಶಯಗಳಿದ್ದವು.
ನಮ್ಮ ಕಮಿಷನರ್ ಸಾಹೇಬ್ರು ಮನಸ್ಸು ಮಾಡಿದ್ದರೆ ಈ ಸಂಶಯ, ಪ್ರಶ್ನೆಗಳಿಗೆಲ್ಲ ಉತ್ತರ ಪಡೆಯಬಹುದಿತ್ತು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಸತ್ಯ ಹೊರ ತೆಗೆಯಬಹುದಿತ್ತು. ಗೋಡೆ ಬರಹ ಪ್ರಕರಣದಲ್ಲಿ ಕೇಂದ್ರ ಇಂಟೆಲಿಜೆನ್ಸಿ ಅಧಿಕಾರಿಗಳು ಬಂದು ತನಿಖೆ ನಡೆಸಿ ಹೋಗಿದ್ದಾರೆ. ಎನ್ಐಎ ಅಧಿಕಾರಿಗಳು ತನಿಖೆಗೆ ಬರಲಿದ್ದಾರೆ ಎನ್ನಲಾಗಿತ್ತು. ಅದೇನಾಗಿದೆ ಅನ್ನುವ ಪ್ರಶ್ನೆಗೆ, ಕಮಿಷನರ್ ಬಳಿ ಉತ್ತರ ಇಲ್ಲ. ಇದೇನಿದ್ದರೂ, ಹಾಗೆ ಖಡಕ್ ನಿಲುವಿನಿಂದ ವಿಚಾರಣೆ ಮಾಡಲು, ಏನೇ ಅಡ್ಡಿ ಬಂದರೂ ಆರೋಪಿಗಳನ್ನು ಒದ್ದು ಒಳಗೆ ಹಾಕಲು ಇವರೇನು, ಈ ಹಿಂದೆ ಮಂಗಳೂರಿನಲ್ಲಿ ದುರುಳರ ಚಳಿ ಬಿಡಿಸಿದ್ದ ಚಂದ್ರಸೇಖರ್ ಸಾಹೇಬ್ರು ಅಲ್ಲ ಅಲ್ವೇ ಅನ್ನುವ ಮಾತು ಕೇಳಿಬರುತ್ತಿದೆ.
Bunder Police Constable who was sword attacked my miscreant in Car Street Mangalore was a revenge for the Golibar that took place in Mangalore on Dec 16th, 2019.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm