ಧರ್ಮಸ್ಥಳದ ಬಂಡಿ ಕಾರಿನ ಬಗ್ಗೆ ಆನಂದ್ ಮಹಿಂದ್ರಾ ವಿಡಿಯೋ ಟ್ವೀಟ್

26-12-20 12:23 pm       Mangalore Correspondent   ಕರಾವಳಿ

ಧರ್ಮಸ್ಥಳ ಲಕ್ಷದೀಪೋತ್ಸವ ಸಂದರ್ಭದಲ್ಲಿ ಜನರ ಗಮನ ಸೆಳೆದಿದ್ದ ಎತ್ತಿನ ಬಂಡಿಯ ಕಾರು ಈಗ ರಾಷ್ಟ್ರದ ಗಮನ ಸೆಳೆದಿದೆ.

ಮಂಗಳೂರು, ಡಿ.26: ಧರ್ಮಸ್ಥಳ ಲಕ್ಷದೀಪೋತ್ಸವ ಸಂದರ್ಭದಲ್ಲಿ ಜನರ ಗಮನ ಸೆಳೆದಿದ್ದ ಎತ್ತಿನ ಬಂಡಿಯ ಕಾರು ಈಗ ರಾಷ್ಟ್ರದ ಗಮನ ಸೆಳೆದಿದೆ. ಧರ್ಮಸ್ಥಳದ ಬಂಡಿಯ ಕಾರಿನ ಚಿತ್ರವವನ್ನು ಮಹೀಂದ್ರಾ ಕಂಪನಿಯ ಅಧ್ಯಕ್ಷ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಂಧನ ಮಿತವ್ಯಯದ ಕಾರು ಇದಕ್ಕಿಂತ ಶ್ರೇಷ್ಠವಾದ್ದು ಇನ್ನೊಂದಿಲ್ಲ ಎಂದಿದ್ದಾರೆ.

ಧರ್ಮಸ್ಥಳದಲ್ಲಿ ಅಂಬಾಸಿಡರ್ ಕಾರಿನ ಹಿಂಭಾಗದ ರಚನೆಯ ರೀತಿಯಲ್ಲಿ ಬಂಡಿಯನ್ನು ತಯಾರಿಸಿ, ಅದನ್ನು ಎತ್ತಿನ ಗಾಡಿಯ ರೀತಿ ಪರಿವರ್ತಿಸಿದ್ದು ಜನರ ಗಮನ ಸೆಳೆದಿತ್ತು. ಎರಡು ಎತ್ತುಗಳನ್ನು ಕಟ್ಟಿಕೊಂಡು ರೈತನೊಬ್ಬ ಬಂಡಿ ಚಲಾಯಿಸುತ್ತಿದ್ದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಈ ವಿಡಿಯೋವನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಬಂಡಿಯ ಕಾರಿನ ವಿಡಿಯೋ ಜೊತೆಗೆ ಟಿಪ್ಪಣಿಯನ್ನೂ ಬರೆದಿದ್ದಾರೆ.

ಇದಕ್ಕಿಂತ ಕಡಿಮೆ ಖರ್ಚಿನಲ್ಲಿ ಕಾರನ್ನು ಮಾಡಬಹುದೆಂದು ಅನಿಸುತ್ತಿಲ್ಲ. ನವೀಕರಿಸಬಹುದಾದ ಇಂಧನ ಹೊಂದಿರುವ ಕಾರು ಇದಾಗಿದ್ದು ಮಿಥೇನ್ ಗೆ ಹೋಲಿಸಿದರೆ ಇದರಲ್ಲಿ ಹೊಗೆ ಉಗುಳುವುದಿಲ್ಲ ಎಂದು ಇಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಿರುವ ಟೆಲ್ಸಾ ಕಂಪನಿಯ ಸಿಇಓ ಅಲಾನ್ ಮಸ್ಕ್ ಅವರನ್ನು ಹಾಸ್ಯಧಾಟಿಯಲ್ಲಿ ಪ್ರಶ್ನೆ ಮಾಡಿದ್ದಾರೆ.

ದೆಹಲಿಯಲ್ಲಿ ವಿಪರೀತ ಮಾಲಿನ್ಯದ ವಿಚಾರ ಚರ್ಚೆಯ ವಸ್ತುವಾಗಿರುವಾಗಲೇ ಆನಂದ್ ಮಹೀಂದ್ರಾ ಬರೆದ ಸಾಲುಗಳು ದೇಶದ ಗಮನ ಸೆಳೆಯುವಂತೆ ಮಾಡಿದೆ. 

Anand Mahindra director of the giant Mahindra company tweets looking at the video of Dharmasthalas Invention of renewable energy fuelled the car.