ಬ್ರೇಕಿಂಗ್ ನ್ಯೂಸ್
26-12-20 07:10 pm Mangaluru Crime Correspondent ಕರಾವಳಿ
ಮಂಗಳೂರು, ಡಿ.26: ಮಂಗಳೂರಿನ ಗೋಡೆ ಬರಹದ ಕೃತ್ಯದಲ್ಲಿ ಹೈಲೆವೆಲ್ ನೆಟ್ವರ್ಕ್ ಕೈಯಾಡಿಸಿದೆ ಎಂಬ ಮಾಹಿತಿ ಇತ್ತು. ಇದೀಗ ಉನ್ನತ ಪೊಲೀಸ್ ಮೂಲಗಳಿಂದ ಮಹತ್ವದ ಮಾಹಿತಿ ಸೋರಿಕೆಯಾಗಿದೆ. ಎನ್ಐಎ ಘೋಷಿಸಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್, ಶಂಕಿತ ಉಗ್ರ ಅಬ್ದುಲ್ ಮತೀನ್ ಅಹ್ಮದ್ ತಾಹಾ ಮಂಗಳೂರಿನ ಗೋಡೆ ಬರಹ ಕೃತ್ಯದ ಹಿಂದಿರೋ ಮಾಸ್ಟರ್ ಮೈಂಡ್ ಅನ್ನೋ ವಿಚಾರ ಬೆಳಕಿಗೆ ಬಂದಿದೆ.
ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಕಳೆದ ಡಿ.6ರಂದು ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಮಾಝ್ ಮುನೀರ್ ಅಹ್ಮದ್ (21) ಮತ್ತು ಬಿಕಾಂ ಪದವೀಧರನಾಗಿದ್ದ ಮೊಹಮ್ಮದ್ ಶಾರೀಕ್ (22) ಎಂಬವರನ್ನು ಬಂಧಿಸಿದ್ದರು. ಆನಂತರ ಎರಡು ವಾರಗಳಿಂದ ಆರೋಪಿಗಳಿಬ್ಬರನ್ನು ಉನ್ನತ ಮಟ್ಟದ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದು, ಇಬ್ಬರಿಗೂ ಅಬ್ದುಲ್ ಮತೀನ್ ತಾಹಾ ಜೊತೆಗೆ ಲಿಂಕ್ ಇರುವ ಬಗ್ಗೆ ವಿಚಾರಣೆಯಲ್ಲಿ ಪತ್ತೆ ಮಾಡಿದ್ದಾರೆ.
ಮಂಗಳೂರಿನಲ್ಲಿ ಕಳೆದ ಬಾರಿ ನಡೆದಿದ್ದ ಗೋಲಿಬಾರ್ ಪ್ರಕರಣಕ್ಕೆ ಡಿ.19ರಂದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಉಗ್ರರ ಪರವಾದ ಗೋಡೆ ಬರಹಗಳನ್ನು ಬರೆಯಲು ಅಬ್ದುಲ್ ಮತೀನ್ ಪ್ರೇರಣೆ ನೀಡಿದ್ದ. ಈ ಮೂಲಕ ಮಂಗಳೂರಿನ ಜನರಲ್ಲಿ ಭಯ, ಆತಂಕ ಮೂಡಿಸಲು ಪ್ಲಾನ್ ಹಾಕಿದ್ದ. ಮೊಹಮ್ಮದ್ ಶಾರೀಕ್ ಮತ್ತು ಮುನೀರ್ ಅಹ್ಮದ್ ಮೂಲಕ ಈ ಕೆಲಸವನ್ನು ಮಾಡಿಸಿದ್ದಾನೆಂಬ ಮಾಹಿತಿ ಲಭ್ಯವಾಗಿದೆ. ಗೋಡೆ ಬರಹದಲ್ಲಿ ಲಷ್ಕರ್ ಜಿಂದಾಬಾದ್ ಎನ್ನುವ ಘೋಷಣೆಯ ಜೊತೆಗೆ ಬಲಪಂಥೀಯರನ್ನು ನೋಡಿಕೊಳ್ಳಲು ಐಸಿಸ್ ಉಗ್ರರನ್ನು ಕರೆಸಬೇಕಾದೀತು ಎಂಬ ರೀತಿಯ ಎಚ್ಚರಿಕೆಯನ್ನು ಬರೆಯಲಾಗಿತ್ತು.
ಯಾರೀತ ಅಬ್ದುಲ್ ಮತೀನ್ ತಾಹಾ ?
ಅಬ್ದುಲ್ ಮತೀನ್ ಅಹ್ಮದ್ ತಾಹ ಕೂಡ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನೇ.. ತೀರ್ಥಹಳ್ಳಿ ತಾಲೂಕಿನ ಫಿಶ್ ಮಾರ್ಕೆಟ್ ರಸ್ತೆಯ ಸೊಪ್ಪುಗುಡ್ಡೆ ಎಂಬಲ್ಲಿನ ನಿವಾಸಿ. ಈಗ ಗೋಡೆ ಬರಹ ಬರೆದು ಸಿಕ್ಕಿಬಿದ್ದಿರುವ ಮಾಝ್ ಮುನೀರ್ ಅಹ್ಮದ್ ಮತ್ತು ಮೊಹಮ್ಮದ್ ಶಾರೀಕ್ ಕೂಡ ತೀರ್ಥಹಳ್ಳಿಯವರೇ. ಬೆಂಗಳೂರಿನ ಐಸಿಸ್ ಪ್ರೇರಿತ ಸಂಘಟನೆ ಅಲ್ ಹಿಂದ್ ಟ್ರಸ್ಟ್ ಪ್ರಕರಣದಲ್ಲಿ ಆರೋಪಿಯಾಗಿರುವ ಅಬ್ದುಲ್ ಮತೀನ್ ಸದ್ಯಕ್ಕೆ ತಲೆಮರೆಸಿಕೊಂಡಿದ್ದು ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದೂ ಹೇಳಲಾಗುತ್ತಿದೆ. ಆದರೆ, ಈತ ತಲೆಮರೆಸಿಕೊಂಡಿದ್ದರೂ ಶಿವಮೊಗ್ಗ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಕೆಲವರ ಜೊತೆ ಸಂಪರ್ಕ ಇರಿಸಿಕೊಂಡಿದ್ದಾನೆಂಬ ಮಾಹಿತಿ ಎನ್ಐಐ ಅಧಿಕಾರಿಗಳಲ್ಲಿ ಇದೆ.
ಮತೀನ್ ಬಗ್ಗೆ ಮಾಹಿತಿ ಕೊಟ್ಟರೆ ಮೂರು ಲಕ್ಷ !
ಅಬ್ದುಲ್ ಮತೀನ್ ತಾಹಾ ತಲೆಮರೆಸಿಕೊಂಡ ಬಳಿಕ ಎನ್ಐಎ ಅಧಿಕಾರಿಗಳು ದೆಹಲಿ, ಚೆನ್ನೈ, ಬೆಂಗಳೂರು ಮುಂತಾದೆಡೆ ಹುಡುಕಾಟ ನಡೆಸಿದ್ದಾರೆ. ಈ ನಡುವೆ, ಕಳೆದ 2020ರ ಮೇ ತಿಂಗಳಲ್ಲಿ ಅಬ್ದುಲ್ ಮತೀನ್ ಬಗ್ಗೆ ಮಾಹಿತಿ ಕೊಟ್ಟವರಿಗೆ ಮೂರು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪ್ರಕಟಿಸಿದ್ದಾರೆ. 2014ರಲ್ಲಿ ಚೆನ್ನೈನಲ್ಲಿ ಸುರೇಶ್ ಎಂಬ ಆರೆಸ್ಸೆಸ್ ನಾಯಕನ ಹತ್ಯೆ ನಡೆದಿತ್ತು. ಪ್ರಕರಣದಲ್ಲಿ 12ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದು, ಈ ಪೈಕಿ ಮೆಹಬೂಬ್ ಪಾಷಾ ಮತ್ತು ಖಾಜಾ ಮೊಹಿಯುದ್ದೀನ್ ಜಲಾಲ್ ಎಂಬವರು ತಮಗೆ ಅಬ್ದುಲ್ ಮತೀನ್ ಜೊತೆಗೆ ಲಿಂಕ್ ಇರುವ ಬಗ್ಗೆ ಬಾಯ್ಬಿಟ್ಟಿದ್ದರು.
2019ರಲ್ಲಿ ಬೆಂಗಳೂರಿನ ಬನ್ನೇರುಘಟ್ಟದ ಗುರಪ್ಪನಪಾಳ್ಯದಲ್ಲಿ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ಅಬ್ದುಲ್ ಮತೀನ್ ಸಹಚರರಾಗಿದ್ದ ಅಬ್ದುಲ್ ಸಲೀಂ ಮತ್ತು ಜಾಯೇದ್ ಎಂಬವರನ್ನು ಬಂಧಿಸಿದ್ದರು. ಈ ಮೂವರೂ ಖಾಸಾ ದೋಸ್ತ್ ಗಳಾಗಿದ್ದು ಬೆಂಗಳೂರಿನಲ್ಲಿ ಅಲ್ ಹಿಂದ್ ಟ್ರಸ್ಟ್ ಎನ್ನುವ ಹೆಸರಿನಲ್ಲಿ ಚಟುವಟಿಕೆ ಮಾಡಿಕೊಂಡಿದ್ದರು. ಐಸಿಸ್ ನೆಟ್ವರ್ಕಿಗೆ ಯುವಕರನ್ನು ಸೇರಿಸಿಕೊಳ್ಳುವುದು, ಅದಕ್ಕಾಗಿ ಹಣದ ಸಹಾಯ ನೀಡುವುದು, ಯುವಕರನ್ನು ಸೇರಿಸಿ ಐಸಿಸ್ ನೆಟ್ವರ್ಕ್ ಬಗ್ಗೆ ಬ್ರೇನ್ ವಾಷ್ ಮಾಡೋ ಕೆಲಸವನ್ನು ಅಬ್ದುಲ್ ಮತೀನ್ ಮಾಡಿಕೊಂಡಿದ್ದ ಅನ್ನೋದು ತಿಳಿದುಬಂದಿತ್ತು. ಇದೇ ಕಾರಣಕ್ಕೆ ಈತನ ಪತ್ತೆಗಾಗಿ ರಾಷ್ಟ್ರೀಯ ತನಿಖಾ ದಳ ಬಹುಮಾನ ಘೋಷಣೆ ಮಾಡಿತ್ತು.
The most wanted fugitive terrorist of ISIS and SIMI, Abdul Matheen Ahmed Taahaa from Theerthahallli in Shivamogga, is reportedly after the pro-terror graffiti in Mangalore, said highly-placed sources.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm