ಕೊರೊನಾ ವಾರಿಯರ್ ಆಶಾ ಕಾರ್ಯಕರ್ತೆಗೆ ಪೊರಕೆಯಿಂದ ಹಲ್ಲೆ 

27-12-20 11:57 am       Mangaluru Correspondent   ಕರಾವಳಿ

ಕರ್ತವ್ಯದಲ್ಲಿದ್ದ ಕೊರೊನಾ ವಾರಿಯರ್ಸ್​ ಮಹಿಳೆಗೆ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಪೊರಕೆಯಿಂದ ಹಲ್ಲೆಗೈದ ಘಟನೆ ನಡೆದಿದೆ. 

ಪುತ್ತೂರು, ಡಿ.27: ಕರ್ತವ್ಯದಲ್ಲಿದ್ದ ಕೊರೊನಾ ವಾರಿಯರ್ಸ್​ ಮಹಿಳೆಗೆ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಪೊರಕೆಯಿಂದ ಹಲ್ಲೆಗೈದ ಘಟನೆ ನಡೆದಿದೆ. 

ಕಡಬ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕುಟ್ರುಪಾಡಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜೀವಿ ಬಿ.ಎಸ್. ಹಲ್ಲೆಗೊಳಗಾದವರು. ಡಿ.16ರಂದು ಅಲ್ಲಿನ ನಿವಾಸಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ 21ರಂದು ಆರೋಗ್ಯ ಕಾರ್ಯಕರ್ತೆ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಸೋಂಕಿತ ವ್ಯಕ್ತಿಯು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅವರ ಪತ್ನಿ ಪೊರಕೆಯಿಂದ ಆಶಾ ಕಾರ್ಯಕರ್ತೆಗೆ ಯದ್ವಾತದ್ವಾ ಹೊಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಜಿಲ್ಲಾಧಿಕಾರಿಗೆ ಆಶಾ ಕಾರ್ಯಕರ್ತೆ ದೂರು 

ಬಳಿಕ ಕಡಬ ಆಸ್ಪತ್ರೆಯ ವೈದ್ಯಾಧಿಕಾರಿಗೆ ಮಾಹಿತಿ ಡಿ. 21ರಂದು ಆಶಾ ಕಾರ್ಯಕರ್ತೆ ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸೋಂಕಿತರ ಕ್ವಾರಂಟೈನ್ ಮುಗಿದ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿದ್ದರು. ಇದೀಗ ಕ್ವಾರಂಟೈನ್ ಅವಧಿ ಮುಗಿದು ವ್ಯಕ್ತಿ ಹೊರಗಡೆ ತಿರುಗಾಡುತ್ತಿದ್ದಾರೆ. ಪೊರಕೆಯಿಂದ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದರೂ ಆಸ್ಪತ್ರೆಯಿಂದ ಆಗಲಿ, ಠಾಣೆಯಿಂದ ಆಗಲಿ ತನಗೆ ಯಾವುದೇ ರಕ್ಷಣೆ ಸಿಕ್ಕಿಲ್ಲ. ಕರ್ತವ್ಯ ನಿರ್ವಹಿಸಲು ಮಾನಸಿಕ ವೇದನೆಯಿಂದ ಕಷ್ಟವಾಗುತ್ತಿದೆ. ಅಲ್ಲದೆ ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ಕೆಲವರು ಒತ್ತಡ ಹೇರುತ್ತಿದ್ದಾರೆ ಎಂದು ರಾಜೀವಿ ದ.ಕ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

Despite a stringent law to protect Asha workers, a lady was attacked by a corona patient in broom using vulgar language in Puttur, Mangalore.