ಬ್ರೇಕಿಂಗ್ ನ್ಯೂಸ್
28-12-20 07:07 pm Mangalore Correspondent ಕರಾವಳಿ
ಮಂಗಳೂರು, ಡಿ.28: ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯ ರೀತಿಯಲ್ಲೇ ಮಂಗಳೂರಿನಲ್ಲಿ ಐಟಿ ಹಬ್ ಮಾಡಬೇಕು ಅನ್ನೋದು ಬಹುಕಾಲದ ಕನಸು. ಆದರೆ, ಕಾಲ ಕೂಡಿ ಬಂದಿರಲಿಲ್ಲ. ಈಗ ಮಂಗಳೂರಿನವರೇ ಆದ ಹರಿಕೃಷ್ಣ ಬಂಟ್ವಾಳ್ ಕಿಯೋನಿಕ್ಸ್ ಅಧ್ಯಕ್ಷರಾಗಿದ್ದು ಐಟಿ ಹಬ್ ಮಾಡಬೇಕೆಂದು ಒತ್ತಾಯ ಮುಂದಿಟ್ಟಿದ್ದಾರೆ. ಕರ್ನಾಟಕದಲ್ಲಿ ಕಿಯೋನಿಕ್ಸ್ ಸ್ಥಾಪಿಸಿ, ಬೆಂಗಳೂರನ್ನು ಇಲೆಕ್ಟ್ರಾನಿಕ್ ಸಿಟಿಯಾಗಿ ಪರಿವರ್ತಿಸಿ, ವಿಶ್ವದಲ್ಲೇ ಗಮನ ಸೆಳೆಯುವಂತೆ ಮಾಡಿದ್ದ ರಾಮಕೃಷ್ಣ ಬಾಳಿಗಾ ಹೆಸರಲ್ಲಿ ಮಂಗಳೂರಿನಲ್ಲಿ ಐಟಿ ಹಬ್ ಮಾಡಬೇಕೆಂಬ ಒತ್ತಾಯ ಮಾಡಿದ್ದಾರೆ.
ರಾಮಕೃಷ್ಣ ಬಾಳಿಗಾ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. 1929ರಲ್ಲಿ ಆಗಿನ ಮೈಸೂರು ಸರಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಬಂಟ್ವಾಳದ ವೈಕುಂಠ ಬಾಳಿಗಾ ಪುತ್ರನಾಗಿರುವ ರಾಮಕೃಷ್ಣ ಬಾಳಿಗಾ ಮೂಲತಃ ಇಲೆಕ್ಟ್ರಾನಿಕಲ್ ಇಂಜಿನಿಯರ್. ಅಮೆರಿಕದಲ್ಲಿ ಐಟಿ ಸಿಟಿಯಲ್ಲಿದ್ದು 70ರ ದಶಕದಲ್ಲೇ ಹಲವು ಕಂಪೆನಿಗಳಲ್ಲಿ ಇಲೆಕ್ಟ್ರಾನಿಕ್ ಇಂಜಿನಿಯರ್ ಆಗಿದ್ದವರು. ಆಬಳಿಕ ಭಾರತಕ್ಕೆ ಬಂದಿದ್ದ ಬಾಳಿಗಾ, ಮಣಿಪಾಲ್ ಇನ್ಸ್ ಸ್ಟಿಟ್ಯೂಟ್ ನಲ್ಲಿ ಇಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪಾರ್ಟ್ಮೆಂಟ್ ಹೆಡ್ ಆಗಿ ಸೇರಿದ್ದರು. ಇಂಥ ಅದ್ಭುತ ಪ್ರತಿಭೆಯನ್ನು ತಮ್ಮತ್ತ ಸೆಳೆದುಕೊಂಡಿದ್ದು 1978ರಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು. ಮೊಟ್ಟಮೊದಲ ಬಾರಿಗೆ ಕಿಯೋನಿಕ್ಸ್ ಎಂಬ ಐಟಿ ತಂತ್ರಜ್ಞಾನ ಪ್ರಣೀತ ಸಂಸ್ಥೆಯನ್ನು ರಾಜ್ಯದಲ್ಲಿ ಹುಟ್ಟುಹಾಕಿ ಮೊದಲ ಅಧ್ಯಕ್ಷರಾಗಿ ರಾಮಕೃಷ್ಣ ಬಾಳಿಗಾರನ್ನು ನಿಯೋಜನೆ ಮಾಡಿದ್ದರು ಅರಸು.
ಅಮೆರಿಕ, ಲಂಡನ್ನಲ್ಲಿ ಐಟಿ ಹಬ್ ಗಳನ್ನು ನೋಡಿ ಬಂದಿದ್ದ ರಾಮಕೃಷ್ಣ ಬಾಳಿಗಾ, ಭಾರತದಲ್ಲಿ ಇಲೆಕ್ಟ್ರಾನಿಕ್ ಯುಗದ ಕೂಸು ಹುಟ್ಟುವ ಮೊದಲೇ ಅದಕ್ಕೊಂದು ಕುಲಾವಿ ಹೊಲಿಸುವ ಯೋಜನೆ ಹಾಕಿದ್ದರು. ಬೆಂಗಳೂರಿನಲ್ಲಿ 322 ಎಕ್ರೆ ಜಾಗವನ್ನು ಪಡೆದು ಇಲೆಕ್ಟ್ರಾನಿಕ್ ಸಿಟಿ ಮಾಡಬೇಕೆಂಬ ಕನಸು ಕಂಡಿದ್ದು ರಾಮಕೃಷ್ಣ ಬಾಳಿಗಾ. ಎಲ್ಲ ಮೂಲಸೌಕರ್ಯಗಳನ್ನು ಒದಗಿಸಿಕೊಟ್ಟು ಜಗತ್ತಿನಾದ್ಯಂತ ಇರುವ ಐಟಿ ಕಂಪನಿಗಳು ಬೆಂಗಳೂರಿಗೆ ಬರುವಂತೆ ವೇದಿಕೆ ಸೃಷ್ಟಿಸಿದ್ದರು. ಈಗ ಬೆಂಗಳೂರಿನ ಐಟಿ ಪಾರ್ಕ್ 800 ಎಕ್ರೆಗೂ ಹೆಚ್ಚು ದೊಡ್ಡದಾಗಿ ವಿಸ್ತಾರಗೊಂಡಿದೆ. 400ಕ್ಕೂ ಹೆಚ್ಚು ಕಂಪನಿಗಳಿದ್ದು, ಎರಡು ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗದಲ್ಲಿದ್ದಾರೆ. ಜಗತ್ತಿನಲ್ಲೀಗ ರಾಮಕೃಷ್ಣ ಬಾಳಿಗಾ ಅಂದರೆ ಯಾರೆಂದು ಗೊತ್ತಿರಲಿಕ್ಕಿಲ್ಲ. ಆದರೆ, ಐಟಿ ಸಿಟಿ, ಸಿಲಿಕಾನ್ ಸಿಟಿ ಅಂದರೆ ಬೆಂಗಳೂರು ಅನ್ನೋದನ್ನು ಜಗತ್ತಿನ ಯಾವ ಮೂಲೆಗೆ ಹೋದರೂ ಹೇಳುತ್ತಾರೆ. ಆಧುನಿಕ ಇಲೆಕ್ಟ್ರಾನಿಕ್ ಸಿಟಿಯ ಪಿತಾಮಹರಾಗಿರುವ ರಾಮಕೃಷ್ಣ ಬಾಳಿಗಾ ತಮ್ಮ 58ರ ವಯಸ್ಸಿನಲ್ಲಿ ತೀರಿಕೊಂಡ ಬಳಿಕ ನಮ್ಮ ಸ್ಮರಣೆಯಿಂದ ದೂರವಾಗಿದ್ದಾರೆ. ರಾಜ್ಯ ಸರಕಾರವೂ ಬಾಳಿಗಾ ಹೆಸರನ್ನು ಸ್ಮರಿಸುವ ಕೆಲಸ ಮಾಡಿಲ್ಲ.
1988ರಲ್ಲಿ ರಾಮಕೃಷ್ಣ ಬಾಳಿಗಾ ನಿಧನರಾಗಿದ್ದು 32 ವರ್ಷಗಳು ಸಂದಿವೆ. ಬಾಳಿಗಾ ಹೆಸರಲ್ಲಿ ಅವರ ಹುಟ್ಟೂರಾದ ಮಂಗಳೂರಿನಲ್ಲಿ ಆರ್.ಕೆ. ಬಾಳಿಗಾ ಇಲೆಕ್ಟ್ರಾನಿಕ್ ಸಿಟಿ ಅನ್ನು ಸ್ಥಾಪನೆ ಮಾಡಬೇಕು. ಆಮೂಲಕ ಬಾಳಿಗಾ ಹೆಸರನ್ನು ಚಿರಸ್ಥಾಯಿ ಮಾಡಬೇಕು. ಇಸ್ರೇಲ್ ಮಾದರಿಯ ಆಧುನಿಕ ರೀತಿಯಲ್ಲಿ ಐಟಿ ಹಬ್ ಮಾಡಲು ಕನಿಷ್ಠ ನೂರು ಎಕ್ರೆ ಜಾಗದ ಅಗತ್ಯವಿದೆ. ಇಂಥ ಅತ್ಯಪೂರ್ವ ಯೋಜನೆಗೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವಕಾಶ ಮಾಡಿಕೊಡಬೇಕು. ಇದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರವಲ್ಲದೆ, ಸಂಸದ ನಳಿನ್ ಕುಮಾರ್, ಐಟಿ ಬಿಟಿ ಸಚಿವ ಅಶ್ವತ್ಥ್ ನಾರಾಯಣ ಅವರಿಗೂ ದೊಡ್ಡ ಶ್ರೇಯಸ್ಸು ಲಭಿಸುತ್ತದೆ ಎಂದು ಹರಿಕೃಷ್ಣ ಬಂಟ್ವಾಳ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಆರ್.ಕೆ.ಬಾಳಿಗಾ ಐಟಿ ಹಬ್ ಬರೀಯ ಸಾಫ್ಟ್ ವೇರ್ ಸಂಬಂಧಿತ ಹಬ್ ಮಾತ್ರ ಆಗಬಾರದು. ಇಸ್ರೇಲ್ ಮಾದರಿಯಲ್ಲಿ ಲೇಸರ್, ರೋಬೊಟಿಕ್ಸ್, ಅರೆ ವಾಹಕಗಳು, ಚಿಪ್, ಫೈಬರ್ ಆಪ್ಟಿಕ್ಸ್ ಮುಂತಾದ ಅತ್ಯಾಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಕೇಂದ್ರವಾಗಿ ಬೆಳೆಯುವಂತೆ ಯೋಜನೆ ರೂಪಿಸಬೇಕು. ಬಿಯಾಂಡ್ ಬೆಂಗಳೂರು ಎಂಬ ಚಿಂತನೆಯಲ್ಲಿ ಐಟಿ ಪಾರ್ಕ್ ಮಾಡಲು ಎಲ್ಲ ಮೂಲಸೌಕರ್ಯಗಳೂ ಇರುವ ಮಂಗಳೂರು ಸೂಕ್ತವಾಗಿದೆ ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
KEONICS chairman Harikrishna Bantwal in his maiden press meet as a chairman, on Thursday, December 28, in Mangalore said that he will submit a memorandum to chief minister B S Yediyurappa urging him to sanction a model Information Technology (IT) Park in memory of the first chairman of KEONICS Bantwal Ramakrishna Baliga.
24-11-24 08:39 pm
Bangalore Correspondent
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
Karnataka Bypolls Live Updates Congress: ಉಪ ಚ...
23-11-24 11:35 am
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
24-11-24 09:13 pm
Mangalore Correspondent
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
Naxal Vikram Gowda, Murdeshwar, Mangalore: ಪೊ...
24-11-24 03:21 pm
Mangalore, Someshwara Suicide; ಸೋಮೇಶ್ವರ ರುದ್ರ...
24-11-24 01:18 pm
MP Captian Brijesh Chowta, Mangalore: ಐಬಿಆರ್...
23-11-24 10:37 pm
24-11-24 04:33 pm
Bangalore Correspondent
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm