ಬ್ರೇಕಿಂಗ್ ನ್ಯೂಸ್
15-11-25 01:51 pm Mangalore Correspondent ಕರಾವಳಿ
ಮಂಗಳೂರು, ನ.15 : ಬಿಹಾರದಲ್ಲಿ ಚುನಾವಣೆ ಸಮೀಪವಿರುವಾಗ ಮಹಿಳೆಯರ ಖಾತೆಗಳಿಗೆ 10 ಸಾವಿರ ಹಣ ಹಾಕಿದ್ದರಿಂದ ಬಿಜೆಪಿಗೆ ಗೆಲುವಾಗಿದೆ. ಚುನಾವಣಾ ಆಯೋಗ ಇದರ ಬಗ್ಗೆ ಕ್ರಮ ಕೈಗೊಳ್ಳದೆ ಹೋದರೆ ಮುಂದೆ ಎಲ್ಲಾ ಸರಕಾರಗಳು ಇದನ್ನೇ ಅನುಸರಿಸುತ್ತಾರೆ. ಚುನಾವಣೆ ಹತ್ತಿರವಿರುವಾಗ ದುಡ್ಡು ಕೊಟ್ಟು ನಮಗೆ ವೋಟ್ ಹಾಕಿ ಅನ್ನೋದು ಆಮಿಷ, ಆಶ್ವಾಸನೆಯಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ತರ ಭಾರತ ಹಾಗು ದಕ್ಷಿಣ ಭಾರತದ ಚುನಾವಣೆಗಳಿಗೆ ವ್ಯತ್ಯಾಸವಿದೆ. ಬಿಜೆಪಿ ಉತ್ತರ ಭಾರತದಲ್ಲಿ ಹಿಂದುತ್ವದ ಹೆಸರಿನಲ್ಲಿ ವಿಭಜನೆ ಮಾಡಿ ಅದನ್ನ ಚುನಾವಣೆಗೆ ಉಪಯೋಗಿಸುತ್ತಾರೆ. ದಕ್ಷಿಣ ಭಾರತದಲ್ಲಿ ಈ ತಂತ್ರಗಾರಿಕೆ ನಡೆಯೋದಿಲ್ಲ. ಕರ್ನಾಟಕದಲ್ಲೂ ಬಿಜೆಪಿಗೆ ಈ ವಿಚಾರ ಇಟ್ಟುಕೊಂಡು ಚುನಾವಣೆ ಗೆಲ್ಲಲು ಆಗಲಿಲ್ಲ. ಬಿಜೆಪಿ ಇಲ್ಲಿ ಯಾವತ್ತೂ ಬಹುಮತದಿಂದ ಗೆದ್ದಿಲ್ಲ. ಆದರೆ ಒಳ್ಳೆಯ ಫಲಿತಾಂಶ ಪಡೆದುಕೊಂಡಿದ್ದಾರೆ.
ಉತ್ತರ ಭಾರತದಲ್ಲಿ ಬೇರೆ ಬೇರೆ ವಿಷಯಗಳ ಮೂಲಕ ಜನರ ದಾರಿ ತಪ್ಪಿಸಿದ ಕಾರಣ ಯಶಸ್ಸು ಸಿಕ್ಕಿರಬಹುದು. ಚುನಾವಣೆ ಸಮೀಪವಿರುವಾಗ ಮಹಿಳೆಯ ಖಾತೆಗೆ 10 ಸಾವಿರ ಹಣ ಹಾಕಿದ್ದಾರೆ. ಇಂತಹದ್ದಕ್ಕೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳದೆ ಹೋದರೆ ಮುಂದೆ ಎಲ್ಲಾ ಸರಕಾರಗಳು ಇದನ್ನೇ ಅನುಸರಿಸುತ್ತಾರೆ. ಚುನಾವಣೆ ಹತ್ತಿರವಿರುವಾಗ ದುಡ್ಡು ಕೊಟ್ಟು ನಮಗೆ ವೋಟ್ ಹಾಕಿ ಅಂತಾರೆ. 10 ಸಾವಿರ ಹಣ ಹಂಚಿಕೆ ಮಾಡಿ ಬಿಹಾರದ 2.7% ಜಿಡಿಪಿಯ ಹಣವನ್ನ ಜನರಿಗೆ ಕೊಟ್ಟಿದ್ದಾರೆ. ಚುನಾವಣೆ ಆಯೋಗ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು.
ಚುನಾವಣೆಯನ್ನು ಯಾವ ರೀತಿ ನಡೆಸಿದ್ದಾರೆ ಅನ್ನೋದನ್ನ ರಾಹುಲ್ ಗಾಂಧಿ ಹತ್ತಿರದಿಂದ ನೋಡಿದ್ದಾರೆ. ಚುನಾವಣೆ ಆಯೋಗ ಸರ್ಕಾರಕ್ಕೆ ಹಾಗೂ ಬಿಜೆಪಿಗೆ ಯಾವ ರೀತಿ ಅನುಕೂಲ ಮಾಡಿದ್ದಾರೆ ಅನ್ನೋದು ಗೋಚರವಾಗಿದೆ. ಚುನಾವಣೆಗೆ ನಾಲ್ಕು ದಿನ ಮುಂಚೆ 10 ಸಾವಿರ ರೂಪಾಯಿ ನೀಡಿ ವೋಟ್ ಖರೀದಿ ಮಾಡಲಾಗಿದೆ. ಅದಕ್ಕೆ ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಅದೇ ರೀತಿ ಮಾಡಲು ಶುರು ಮಾಡಿದ್ರೆ? ನ್ಯಾಯಯುತವಾಗಿ ಚುನಾವಣೆ ನಡೆಯುವುದಾದರೂ ಹೇಗೆ ? ಚುನಾವಣೆ ಮೊದಲು ಯಾವುದೋ ಒಂದು ಸ್ಕೀಮ್ ನಲ್ಲಿ 10 , 20, 30 ಸಾವಿರ ಘೋಷಣೆ ಮಾಡಿದರೆ ನ್ಯಾಯಯುತ ಚುನಾವಣೆ ನಡೆಯುವುದು ಹೇಗೆ? ಇದರ ವಿರುದ್ಧ ಚುನಾವಣಾ ಆಯೋಗ ಯಾಕೆ ಕ್ರಮ ಕೈಗೊಂಡಿಲ್ಲ? ವೋಟ್ ಖರೀದಿಗೆ ಚುನಾವಣಾ ಆಯೋಗ ಸಹಾಯ ಮಾಡಿದೆ ಎಂದರ್ಥ ಅಲ್ಲವೇ ಎಂದು ಪ್ರಶ್ನಿಸಿದರು.
ನಮ್ಮ ವೈಫಲ್ಯ ಕೂಡ ಇದೆ, ನಮ್ಮ ವೈಫಲ್ಯ ಇಲ್ಲ ಅಂತ ಹೇಳಕ್ಕಾಗಲ್ಲ.
ನಮ್ಮಲ್ಲೂ ತಪ್ಪುಗಳಾಗಿದ್ದಾವೆ. ಒಕ್ಕೂಟದಲ್ಲಿ ಸೀಟ್ ವಿತರಣೆ ಗೊಂದಲ ನಿವಾರಣೆ ಆಗಿರಲಿಲ್ಲ. ಚುನಾವಣೆ ಫಲಿತಾಂಶಕ್ಕೆ ಇದೆಲ್ಲವೂ ಕಾರಣವಾಗಿರುತ್ತೆ. ಇದೆಲ್ಲದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಆದರೆ ನಮ್ಮ ಸೋಲನ್ನ ನಾವು ಒಪ್ಪಿಕೊಳ್ಳಬೇಕಾಗುತ್ತೆ ಎಂದರು.
ಕಾಂಗ್ರೆಸ್ ಒಕ್ಕೂಟವೂ ಗ್ಯಾರಂಟಿ ಆಮಿಷ ನೀಡಿತ್ತಲ್ಲವೇ ಎಂಬ ಪ್ರಶ್ನೆಗೆ, ಅಲ್ಲಿ ಆರ್ ಜೆ ಡಿ ಜನರಿಗೆ ನೀಡಿದ್ದು ಆಶ್ವಾಸನೆ, ಆದರೆ NDA ಆಮಿಷ ನೀಡಿದೆ. ಸರಕಾರದ ದುಡ್ಡನ್ನ ಚುನಾವಣೆಗೆ ಬಳಸಿ ಜನರಿಗೆ ಆಮಿಷ ನೀಡಿದ್ದಾರೆ. ಆರ್ ಜೆ ಡಿ ಅಧಿಕಾರಕ್ಕೆ ಬಂದಿದ್ರೆ ನೀಡಿದ ಆಶ್ವಾಸನೆ ಪ್ರಕಾರ ಮಾಡಿ ತೋರಿಸಬೇಕಾಗುತ್ತದೆ, ಅದು ಅವರ ಭರವಸೆ. ನಾವು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಆಶ್ವಾಸನೆ ನೀಡಿದ್ವಿ. ಅದನ್ನು ಅಧಿಕಾರಕ್ಕೆ ಬಂದ ಬಳಿಕ ಈಡೇರಿಸಿದ್ದೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡುತ್ತಿರುವ ವಿಚಾರದ ಪ್ರಶ್ನೆಗೆ, ಮುಖ್ಯಮಂತ್ರಿ ದೆಹಲಿ ಭೇಟಿ ಪೂರ್ವ ನಿಯೋಜಿತ. ಬಿಹಾರ ಚುನಾವಣೆ ಫಲಿತಾಂಶಕ್ಕು ಈ ಭೇಟಿಗೂ ಯಾವುದೇ ಸಂಬಂಧ ಇಲ್ಲ. ನವಂಬರ್ ಕ್ರಾಂತಿ ಅನ್ನೋದು ಮಾಧ್ಯಮ ಸೃಷ್ಟಿ ಮಾಡಿರುವುದು, ಅದಕ್ಕೆ ಯಾವುದೇ ಆಧಾರಗಳಿಲ್ಲ. ಚುನಾವಣೆಯ ಫಲಿತಾಂಶ ನಮ್ಮ ರಾಜ್ಯ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ಮಂಗಳೂರಿನ ಕುಂಪಲದಲ್ಲಿ ನಾಯಿ ದಾಳಿಗೆ ವ್ಯಕ್ತಿ ಬಲಿಯಾದ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ಸುಪ್ರೀಂ ಕೋರ್ಟ್ ಬೀದಿ ನಾಯಿ ಹಾವಳಿ ತಡೆಗಟ್ಟಲು ಹೊಸ ಕಾನೂನು ಘೋಷಣೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನ ಗಮನಿಸಿ ನಗರಾಭಿವೃದ್ಧಿ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಇದರ ಅನುಷ್ಠಾನ ಬಗ್ಗೆ ನಗರ ಪಾಲಿಕೆ, ಸಂಬಂಧಪಟ್ಟ ಇಲಾಖೆಗಳು ಚಿಂತನೆ ನಡೆಸುತ್ತದೆ. ಈ ಹಿಂದೆ ನಾಯಿಗಳನ್ನ ಹಿಡಿದು ಸಂತಾನ ಹರಣ ಚಿಕಿತ್ಸೆ ನೀಡಿ ವಾಪಸ್ ಅಲ್ಲೇ ಬಿಡಬೇಕಾಗಿತ್ತು. ಈಗ ಪ್ರತ್ಯೇಕ ಶೆಲ್ಟರ್ ಗಳನ್ನ ತಯಾರು ಮಾಡಿ ಅಲ್ಲೇ ನೋಡಿಕೊಳ್ಳಬೇಕು ಅನ್ನೋ ಸೂಚನೆ ಇದೆ. ಆ ನಿಯಮಗಳ ಅನ್ವಯ ನಗರಾಭಿವೃದ್ಧಿ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
Ahead of the Bihar elections, ₹10,000 was deposited into the bank accounts of women, which directly helped the BJP win, alleged Karnataka Health Minister Dinesh Gundu Rao. He strongly criticized the Election Commission (EC) for taking no action.
04-12-25 05:36 pm
HK News Desk
Bagalakote Accident, Four Killed: ಬಾಗಲಕೋಟೆ ;...
03-12-25 03:01 pm
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
04-12-25 05:39 pm
HK News Desk
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
05-12-25 12:24 pm
Mangalore Correspondent
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
ಅಜ್ಜನ ಕೈಹಿಡಿದು ಹೆದ್ದಾರಿ ದಾಟಿ ತಿಂಡಿಗೆ ಹೋಗಿದ್ದ...
04-12-25 12:38 pm
04-12-25 11:15 pm
Mangalore Correspondent
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm
ಬೆಂಗಳೂರು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ; ರಕ್ತಚ...
04-12-25 04:18 pm
ಹೊಸ ವರ್ಷದ ಸಂಭ್ರಮಾಚರಣೆಗೆ ಡ್ರಗ್ಸ್ ಮಾರಾಟ ಮಾಡಲು ಸ...
03-12-25 01:41 pm
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm