Mangalore, Dharmasthala Case: ಧರ್ಮಸ್ಥಳ ಪ್ರಕರಣ ; ಬೆಳ್ತಂಗಡಿ ಕೋರ್ಟಿಗೆ ಎಸ್ಐಟಿ ತನಿಖಾ ವರದಿ ಸಲ್ಲಿಕೆ, ಮುಂದಿನ ನಡೆ ಬಗ್ಗೆ ಕುತೂಹಲ 

20-11-25 10:08 pm       Mangalore Correspondent   ಕರಾವಳಿ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪದ ಪ್ರಕರಣ ಸಂಬಂಧಿಸಿ ಎಸ್ಐಟಿ ಪೊಲೀಸರು ಕೊನೆಗೂ ಬೆಳ್ತಂಗಡಿ ಕೋರ್ಟಿಗೆ ಈವರೆಗಿನ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ನಾಲ್ಕು ತಿಂಗಳ ತನಿಖೆ- ಹೈಡ್ರಾಮಾ ಬಳಿಕ ಎಸ್ಐಟಿ ತನಿಖಾಧಿಕಾರಿ ಎಸ್ಪಿ ಜಿತೇಂದ್ರ ದಯಾಮ ಗುರುವಾರ ತನಿಖಾ ವರದಿಯನ್ನು ಬೆಳ್ತಂಗಡಿ ಕೋರ್ಟ್​ಗೆ ಸಲ್ಲಿಸಿದ್ದು ಕುತೂಹಲ ಮೂಡಿಸಿದ್ದಾರೆ. 

ಮಂಗಳೂರು, ನ.20 : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪದ ಪ್ರಕರಣ ಸಂಬಂಧಿಸಿ ಎಸ್ಐಟಿ ಪೊಲೀಸರು ಕೊನೆಗೂ ಬೆಳ್ತಂಗಡಿ ಕೋರ್ಟಿಗೆ ಈವರೆಗಿನ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ನಾಲ್ಕು ತಿಂಗಳ ತನಿಖೆ- ಹೈಡ್ರಾಮಾ ಬಳಿಕ ಎಸ್ಐಟಿ ತನಿಖಾಧಿಕಾರಿ ಎಸ್ಪಿ ಜಿತೇಂದ್ರ ದಯಾಮ ಗುರುವಾರ ತನಿಖಾ ವರದಿಯನ್ನು ಬೆಳ್ತಂಗಡಿ ಕೋರ್ಟ್​ಗೆ ಸಲ್ಲಿಸಿದ್ದು ಕುತೂಹಲ ಮೂಡಿಸಿದ್ದಾರೆ. 

ಜಿತೇಂದ್ರ ಕುಮಾರ್ ದಯಾಮ ನೇತೃತ್ವದ ಪೊಲೀಸರ ತಂಡವು ಏಳು ಫೈಲ್​ಗಳನ್ನು ಒಳಗೊಂಡ 3,932 ಪುಟಗಳ ತನಿಖಾ ವರದಿಯನ್ನ ಕೋರ್ಟಿಗೆ ಸಲ್ಲಿಸಿದೆ. ದೂರುದಾರ ಚಿನ್ನಯ್ಯ ಸೆಕ್ಷನ್ 164 ಅಡಿ ನೀಡಿರುವ ಹೇಳಿಕೆ, ಆನಂತರ 17 ಕಡೆ ನಡೆದಿದ್ದ ಸಮಾಧಿ ಶೋಧ ಮತ್ತು ಇನ್ನಿತರ ಬೆಳವಣಿಗೆ ಕುರಿತಾಗಿ ವರದಿಯನ್ನು ಕೋರ್ಟಿಗೆ ಸಲ್ಲಿಸಿದ್ದು ಮುಂದಿನ ನಿರ್ದೇಶನ ಕೇಳಿದ್ದಾರೆ. ತನಿಖಾ ವರದಿ ಆಧರಿಸಿ ನ್ಯಾಯಾಧೀಶರು ಪ್ರಕರಣದಲ್ಲಿ ಮುಂದೇನು ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ನಿರ್ದೇಶನ ನೀಡಲಿದ್ದಾರೆ. 

ಪ್ರಕರಣ ಸಂಬಂಧ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಇನ್ನುಳಿದವರ ವಿಚಾರಣೆಗೆ ಎಸ್ಐಟಿ ನೋಟಿಸ್ ಕೊಟ್ಟಿದ್ದು, ಸದ್ಯ ವಿಚಾರಣೆಗೆ ಬಾಕಿ ಇದೆ. ಇದರ ನಡುವಲ್ಲೇ ಎಸ್​ಐಟಿ ತನಿಖಾ ವರದಿಯನ್ನು ಬೆಳ್ತಂಗಡಿ ಕೋರ್ಟಿಗೆ ನೀಡಿದ್ದು ಕ್ಲೈಮ್ಯಾಕ್ಸ್ ತೋರಿಸಿದೆ. ಸಂಪೂರ್ಣ ತನಿಖೆ ಬಳಿಕ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆಯಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ. ಕೋರ್ಟಿಗೆ ಸಲ್ಲಿಸಿದ ವರದಿಯನ್ನು ಇನ್ನೆರಡು ದಿನದಲ್ಲಿ ರಾಜ್ಯದ ಗೃಹ ಸಚಿವರಿಗೂ ಸಲ್ಲಿಸಲಿದ್ದಾರೆ. 

ಈವರೆಗಿನ ತನಿಖಾ ಪ್ರಗತಿ ಕುರಿತ ವರದಿ ಪರಿಗಣಿಸಿ ಮುಂದಿನ ತನಿಖೆಗೆ ಎಸ್ಐಟಿ ಅಧಿಕಾರಿಗಳು ನಿರ್ದೇಶನ ಕೋರಿದ್ದಾರೆ ಎನ್ನಲಾಗಿದೆ. ಎಸ್ಐಟಿ ಪರ ವಕೀಲರ ವಾದ ಆಲಿಸಿ ವಿಚಾರಣೆ ಮುಂದೂಡಿದ್ದು, ಶುಕ್ರವಾರ ಎಸ್ಐಟಿಗೆ ನಿರ್ದೇಶ ನೀಡುವ ಸಾಧ್ಯತೆ ಇದೆ. ಕೆಲವು ವಿಶೇಷ ಪ್ರಕರಣದಲ್ಲಿ ಕೋರ್ಟ್ ತನಿಖೆ ನಡೆಸಿ ವರದಿ ನೀಡುವಂತೆ ಹೇಳಿದರೆ, ಅದೇ ಪ್ರಕಾರ ತನಿಖಾಧಿಕಾರಿಗಳು ವರದಿಯನ್ನು ನೀಡುತ್ತಾರೆ. ಇದೇ ನೀತಿಯನ್ನು ಧರ್ಮಸ್ಥಳ ಪ್ರಕರಣದಲ್ಲಿಯೂ ಅನುಸರಿಸಲಾಗಿದೆ ಎನ್ನುವ ಮಾಹಿತಿ ಇದೆ.

In the high-profile Dharmasthala case involving allegations of hundreds of bodies being buried illegally, the Special Investigation Team (SIT) has finally submitted its investigation progress report to the Belthangady court. After nearly four months of inquiry and intense public attention, SIT Investigating Officer SP Jitendra Dayama submitted the report on Thursday, raising curiosity about the court’s next move.