ಕೊಣಾಜೆ: ಜನವಸತಿ ಪ್ರದೇಶದಲ್ಲಿ ಶೌಚಾಲಯ ತ್ಯಾಜ್ಯ ಸುರಿದ ಸಕ್ಕಿಂಗ್ ಟ್ಯಾಂಕರ್, ಚಾಲಕ ಪೊಲೀಸ್ ವಶಕ್ಕೆ

30-12-20 11:23 am       Mangalore Correspondent   ಕರಾವಳಿ

ಜನವಸತಿ ಪ್ರದೇಶದಲ್ಲಿ ಶೌಚಾಲಯದ ತ್ಯಾಜ್ಯ ನೀರನ್ನು‌ ಸುರಿಯುತ್ತಿದ್ದ ಟ್ಯಾಂಕರ್ ಚಾಲಕನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

Photo credits : Representative Image

ಕೊಣಾಜೆ, ಡಿ.30: ಜನವಸತಿ ಪ್ರದೇಶದಲ್ಲಿ ಶೌಚಾಲಯದ ತ್ಯಾಜ್ಯ ನೀರನ್ನು‌ ಸುರಿಯುತ್ತಿದ್ದ ಸಕ್ಕಿಂಗ್ ಟ್ಯಾಂಕರ್ ಮತ್ತು ಟ್ಯಾಂಕರ್ ಚಾಲಕನನ್ನು ಕೊಣಾಜೆ ಪೊಲೀಸರು ನಿನ್ನೆ ರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ. 

ಬಂಟ್ವಾಳ ತಾಲೂಕಿನ ನರಿಂಗಾನ‌ ಗ್ರಾಮ‌ದ ಬೋಳದ ಪದವು, ಚರ್ಚ್ ಸಮೀಪದ ಹಿಂದು ರುದ್ರಭೂಮಿ‌ ಬಳಿಯ ಜನವಸತಿ ಪ್ರದೇಶದಲ್ಲಿ ಶೌಚಾಲಯದ ತ್ಯಾಜ್ಯ ನೀರು ಸುರಿಯುತ್ತಿರುವುದನ್ನು‌ ಸ್ಥಳೀಯರು ಕಂಡು ಪ್ರತಿಭಟಿಸಿದ್ದಾರೆ. ಈ ವೇಳೆ ಟ್ಯಾಂಕರ್ ಚಾಲಕ‌ ಹಾಗೂ ಆತನ‌ ಸಹಚರರು ಸ್ಥಳೀಯರ ಮೇಲೆ ಕಲ್ಲೆಸೆದು ಬೆದರಿಸಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಣಾಜೆ ಪೊಲೀಸರು ತಕ್ಷಣ ಆಗಮಿಸಿ ಅಲ್ಲಿಂದ ಪರಾರಿಯಾಗುತ್ತಿದ್ದ ಸಕ್ಕಿಂಗ್ ಯಂತ್ರ ಮತ್ತು ಚಾಲಕನನ್ನು ವಶಪಡಿಸಿಕೊಂಡಿದ್ದಾರೆ. ಚಾಲಕ ಕಲ್ಲರಕೋಡಿ ಸೈಟ್ ನಿವಾಸಿಯಾಗಿದ್ದು ವಾಹನ‌ ಪುತ್ತೂರಿನದ್ದಾಗಿದೆ. 

ಶೌಚಾಲಯದ ನೀರನ್ನು ಮಂಜೇಶ್ವರ ಭಾಗದಿಂದ ತಂದು ಸುರಿಯುತ್ತಿದ್ದರು ಎನ್ನಲಾಗಿದೆ. ತ್ಯಾಜ್ಯ ಸುರಿದ ಪರಿಸರದಲ್ಲಿ ಜನವಸತಿ ಇದ್ದರೂ ಚಾಲಕನ‌ ಅಹಂಕಾರ, ಉದ್ಧಟತನದ ವರ್ತನೆಗೆ ಕೊಣಾಜೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ.

A Sewage truck driver was taken into Police Custody for Excreating waste in a residential area in Konaje, Mangalore.