ಬ್ರೇಕಿಂಗ್ ನ್ಯೂಸ್
13-12-25 11:02 pm Mangalore Correspondent ಕರಾವಳಿ
ಮಂಗಳೂರು, ಡಿ.13 : ಯಕ್ಷಗಾನ ಕಲೆಯನ್ನೇ ವೃತ್ತಿಯಾಗಿಸಿ ಬದುಕಿನಲ್ಲಿ ಯಶಸ್ಸು ಕಂಡ ಅನೇಕರಿದ್ದಾರೆ. ಯಕ್ಷಗಾನ ಕಲೆಯನ್ನೇ ಆರಾಧಿಸುತ್ತ ಸ್ಟಾರ್ ಆದವರಿದ್ದಾರೆ. ಆದರೆ ಇಲ್ಲೊಬ್ಬರು ಯಕ್ಷಗಾನದ ಪಾತ್ರಗಳನ್ನು ಅನುಸರಿಸುತ್ತ, ಕಲಾವಿದನೊಬ್ಬ ಪಾತ್ರ ಪೋಷಣೆಗೆ ಕಟ್ಟಿಕೊಟ್ಟ ಉದಾತ್ತ ಗುಣಗಳಿಂದ ಪ್ರೇರಿತನಾಗಿ ತಮ್ಮ ಬದುಕನ್ನೇ ಬದಲಿಸಿಕೊಂಡಿದ್ದಾರೆ. ಅಂದಹಾಗೆ, ಈ ವ್ಯಕ್ತಿಯ ಪಾಲಿಗೆ ತನ್ನ ಬದುಕನ್ನೇ ಬದಲಿಸಿದ್ದು ದೇವಿ ಮಹಾತ್ಮೆ ಪ್ರಸಂಗದ ರಕ್ತಬೀಜನ ಪಾತ್ರ.
ಕಟೀಲು ಮೇಳದಿಂದ ಅತ್ಯಧಿಕವಾಗಿ ಆಡಿಸಲ್ಪಡುವ ದೇವಿ ಮಹಾತ್ಮೆ ಪ್ರಸಂಗದಲ್ಲಿ ಕೊನೆಯದಾಗಿ ಬರುವ ರಕ್ತಬೀಜ ಸ್ವರೂಪದಲ್ಲಿ ಅಸುರನದ್ದಾದರೂ ಉದಾತ್ತ ಗುಣಗಳನ್ನು ಹೊಂದಿರುವ, ತನ್ನ ವಧೆಗಾಗಿ ಬಂದಿರುವ ದೇವಿಯನ್ನು ತಾಯಿ ಎಂದೇ ವರ್ಣಿಸುತ್ತ ತನ್ನ ರಕ್ಕಸ ಗುಣಗಳನ್ನೇ ಅವಲೋಕಿಸುವ ಪಾತ್ರ. ತನ್ನ ಅವಲಕ್ಷಣ, ಗುಣಲಕ್ಷಣಗಳನ್ನೇ ವಿಲಕ್ಷಣವಾಗಿ ವರ್ಣಿಸುತ್ತ ದೇವಿಯನ್ನು ಸ್ತುತಿಸುವ ಪಾತ್ರ. ಅಸುರೀ ಗುಣಕ್ಕಾಗಿ ದೇವಿಯ ಜೊತೆಗೆ ಕಾದಾಡಿಯೇ ತೀರುತ್ತೇನೆಂದು ಹೇಳುತ್ತ ತನ್ನ ವೀರ ತೇಜಸ್ಸನ್ನು ತೋರಿಸುತ್ತ ಮೋಕ್ಷಕ್ಕಾಗಿ ಕೇಳಿಕೊಳ್ಳುವ ಚಿತ್ರಣವೇ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ರಕ್ತಬೀಜನ ಪಾತ್ರದಲ್ಲಿ ಹಲವರು ಮಿಂಚು ಹರಿಸಿದ್ದು ಇದೆ. ಆದರೆ ಕಟೀಲು ಮೇಳದಲ್ಲಿ ಇತ್ತೀಚೆಗೆ ಮಧ್ಯ ವಯಸ್ಸಿನ ಕಲಾವಿದ ಗಣೇಶ ಶೆಟ್ಟಿ ಕನ್ನಡಿಕಟ್ಟೆ ತನ್ನ ವಾಕ್ಚಾತುರ್ಯದಿಂದಲೇ ರಕ್ತಬೀಜನ ಪಾತ್ರಕ್ಕೆ ಹೊಸ ಸ್ವರೂಪ ತುಂಬಿದ್ದಾರೆ.





ಬೆಳ್ತಂಗಡಿಯ ಕೇಶವ ಎನ್ನುವ ವ್ಯಕ್ತಿಯೊಬ್ಬರು ಅವರೇ ಹೇಳಿಕೊಂಡಂತೆ, ಎಲ್ಲ ದುರ್ಬುದ್ಧಿಗಳನ್ನೂ ಮೈಗೂಡಿಸಿಕೊಂಡಿದ್ದ ವ್ಯಕ್ತಿ. ತಾರುಣ್ಯದಲ್ಲಿ ಕುಡಿತದಿಂದ ತೊಡಗಿ ಅಹಂಕಾರ, ದಾರ್ಷ್ಟ್ಯ, ರೌಡಿಸಂ, ಪೊಲೀಸು, ಕೇಸು ಹೀಗೆ ಎಲ್ಲವನ್ನೂ ಕಂಡುಂಡವರು. ಇದೇ ಕಾರಣದಿಂದ ಬದುಕಿನಲ್ಲಿ ಎಲ್ಲ ಇದ್ದರೂ ಏನೂ ಇಲ್ಲದಂತವರಾಗಿ ಬದುಕನ್ನೇ ನರಕವಾಗಿಸಿಕೊಂಡಿದ್ದರು. ಆದರೆ ಕಟೀಲು ದೇವಿಯ ಭಕ್ತನಾಗಿದ್ದ ಕಾರಣಕ್ಕೆ ಕೇಶವ ಕಟೀಲು ಮೇಳದ ಯಕ್ಷಗಾನಗಳ ಬಗ್ಗೆ, ದೇವಿ ಮಹಾತ್ಮೆ ಪ್ರಸಂಗದ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದರು. ಆಟ ನೋಡಲು ಹೋಗುವಾಗಲೂ ಶುದ್ಧವಾಗಿಯೇ ಹೋಗಿ ಕುಳಿತುಬಿಡುತ್ತಿದ್ದರು.
ತಂದೆಯಿಂದ ಬಂದ ಬಿಲ್ಡಿಂಗ್ ಕಂಟ್ರಾಕ್ಟರ್ ಎನ್ನುವ ಬಿರುದಿನ ಕಾರಣದಿಂದ ಇವರಿಗೆ ಸಣ್ಣಂದಿನಲ್ಲೇ ಹಣಕ್ಕೇನೂ ಕೊರತೆ ಇರಲಿಲ್ಲ. ಹಲವಾರು ಮಂದಿಗೆ ಉದ್ಯೋಗ, ಮನೆ ಕಟ್ಟಿಕೊಟ್ಟಿದ್ದರೂ ಸ್ವಂತಕ್ಕೇನೂ ಮಾಡಲಾಗದೆ, ತನ್ನದೇ ದುರಾಭ್ಯಾಸ, ದುರುಳತನದಿಂದಾಗಿ ಬದುಕೇ ನರಕವಾಗಿದ್ದರೂ ಕೇಶವರಿಗೆ ಯಾರು ಏನು ಹೇಳಿದರೂ ಮನಸ್ಸು ಪಕ್ವ ಆಗಿರಲಿಲ್ಲ. ಆದರೆ ಯಕ್ಷಗಾನ ನೋಡುತ್ತಲೇ ರಕ್ತಬೀಜನ ಪಾತ್ರ ಮಾಡುತ್ತಿದ್ದ ಗಣೇಶ್ ಶೆಟ್ಟಿಯವರ ಮಾತುಗಾರಿಕೆ ಮನಸ್ಸು ಸೆಳೆದಿತ್ತು. ಬದುಕಿನ ತಪ್ಪು- ಒಪ್ಪುಗಳನ್ನು ಹೇಳುತ್ತ ಜೀವನದ ಅರ್ಥವನ್ನು ಕಟ್ಟಿಕೊಡುತ್ತಿದ್ದ ಅರ್ಥಗಾರಿಕೆಯ ಸೊಗಸು ಕೇಶವರಿಗೆ ತನ್ನದೇ ಬದುಕಿನ ಚಿತ್ರಣವನ್ನು ಕಲಾವಿದ ರಂಗದಲ್ಲಿ ಹೇಳಿದಂತೆ ಭಾಸವಾಗುತ್ತಿತ್ತು.
ದುರ್ಬುದ್ಧಿಯ ಕಾರಣಕ್ಕೆ ಅಸುರೀತನವನ್ನು ಮೈಗೂಡಿಸಿಕೊಂಡಿದ್ದ ಕೇಶವರಿಗೆ, ರಕ್ತಬೀಜನ ಮಾತುಗಳು ತನ್ನ ಬದುಕಿನ ಪಥವನ್ನೇ ಬದಲಿಸಲು ಪ್ರೇರಣೆ ನೀಡಿತ್ತು. ಸಹವಾಸ ದೋಷ, ಕುಡಿತದ ಚಟದಿಂದಾಗಿ ಬದುಕಿನ ಬಂಡಿಯನ್ನೇ ಓರೆಕೋರೆಯಾಗಿಸಿದ್ದ ಕೇಶವ, 4-5 ವರ್ಷದಲ್ಲಿ ಯೂಟ್ಯೂಬ್ ನಲ್ಲಿ ಗಣೇಶ ಶೆಟ್ಟಿಯವರು ನಡೆಸುತ್ತಿದ್ದ ಹಲವು ಬಗೆಯ ಪಾತ್ರಗಳನ್ನು ನೋಡುತ್ತಲೇ ಹೊಸ ಬದುಕಿಗೆ ಹೆಜ್ಜೆ ಇಟ್ಟಿದ್ದರು. ಎಲ್ಲ ಕೆಟ್ಟ ಚಟಗಳನ್ನು ಬದಿಗೊತ್ತಿ ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದು ಯಶಸ್ವೀ ಜೀವನ ನಡೆಸತೊಡಗಿದ್ದಾರೆ.
ತನ್ನ ಬದುಕಿನ ಬದಲಾವಣೆಗೆ ಗಣೇಶ್ ಶೆಟ್ಟಿಯವರೇ ಕಾರಣ, ಅವರೇ ನನ್ನ ಪಾಲಿಗೆ ದೇವರು, ಭಗವದ್ಗೀತೆ ಓದಿಲ್ಲ. ಆದರೆ ಅವರ ಮಾತುಗಳಿಂದಲೇ ಗೀತೆ, ವೇದಾಂತಗಳ ಸಾರವನ್ನು ತಿಳಿದುಕೊಂಡಿದ್ದೇನೆ ಎಂದು ಹೇಳುತ್ತಿರುವ ಕೇಶವರು ಇತ್ತೀಚೆಗೆ ಅವರನ್ನೇ ಹುಡುಕಿಕೊಂಡು ಹೋಗಿ ತಾಳಮದ್ದಲೆಯ ಮಧ್ಯದಲ್ಲೇ ಸನ್ಮಾನಿಸಿದ್ದಾರೆ.
ಇತ್ತೀಚೆಗೆ ಕಾರ್ಕಳದ ಹೊಸ್ಮಾರಿನಲ್ಲಿ ನಡೆದ ತಾಳಮದ್ದಲೆ ಕಾರ್ಯಕ್ರಮದಲ್ಲಿ ಗಣೇಶ್ ಶೆಟ್ಟಿಯವರ ಜೊತೆಗೆ, ಖ್ಯಾತ ಕಲಾವಿದ ಜಬ್ಬಾರ್ ಸಮೋ ಪಾಲ್ಗೊಂಡಿದ್ದರು. ವಿಷಯ ತಿಳಿದು ಕೇಶವರೂ ಅಲ್ಲಿಗೆ ತೆರಳಿದ್ದರು. ಸಂಯೋಜಕ ರಾಜವರ್ಮರ ಮೂಲಕ ಗಣೇಶ್ ಶೆಟ್ಟಿಯವರನ್ನು ಬದಿಗೆ ಕರೆದು ತಾನು ತಂದಿದ್ದ ಶಾಲು, ಹೂ ಹಣ್ಣಿನ ಸನ್ಮಾನವನ್ನು ಸ್ವೀಕರಿಸುವಂತೆ ಒಪ್ಪಿಸಿ ಕಾಲಿಗೆರೆಗಿದ್ದಾರೆ. ಈ ಪ್ರಸಂಗವನ್ನು ಸ್ವತಃ ಜಬ್ಬಾರ್ ಸಮೋ ಅವರೇ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು ಒಬ್ಬ ಕಲಾವಿದನೆಂದರೆ ವೃತ್ತಿ ಬದುಕಿಗಷ್ಟೇ ಸೀಮಿತನಲ್ಲ, ಅಭಿಮಾನಿಗಳ ಪಾಲಿಗೆ ಪರಿವರ್ತನೆಯನ್ನೂ ತರಬಲ್ಲ ಎಂಬುದನ್ನು ಈ ಪ್ರಸಂಗ ಬಿಚ್ಚಿಟ್ಟಿದೆ ಎಂದು ಅಚ್ಚರಿ ಹೊರಹಾಕಿದ್ದಾರೆ.
Yakshagana has transformed the lives of many artists who embraced it as a profession and rose to stardom. For some, it is a form of devotion; for others, a cultural identity. But in a rare and powerful story, Yakshagana has not just shaped an artist’s journey—it has completely transformed the life of an ordinary man who drew inspiration from a single character on stage.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm