ಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆ ಮೊದಲೇ ನೀರಿನ ಸಮಸ್ಯೆ ; ಕೂಡಲೇ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಶಾಸಕ ಕಾಮತ್ ಸೂಚನೆ 

02-01-26 11:00 pm       Mangalore Correspondent   ಕರಾವಳಿ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆಗೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್ ಸೂಚನೆ ನೀಡಿದರು. 

ಮಂಗಳೂರು, ಜ.2 : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆಗೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್ ಸೂಚನೆ ನೀಡಿದರು. 

ಪಾಲಿಕೆಯ ವಾರ್ಡ್ ಸಂಖ್ಯೆ 25, 26, 27, 41 ಹಾಗೂ 53 ರಲ್ಲಿ ಕುಡಿಯುವ ನೀರಿನ ಅಭಾವ ವುಂಟಾಗಿದ್ದು ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆಂದು ಬಿಜೆಪಿ ಮಾಜಿ ಕಾರ್ಪೊರೇಟರುಗಳು, ಪಕ್ಷದ ಮುಖಂಡರು ಶಾಸಕರಿಗೆ ದೂರು ನೀಡಿದ್ದು ಈ ವೇಳೆ ಪಾಲಿಕೆಯ ಅಧಿಕಾರಿಗಳನ್ನು ಕರೆದು ಈ ಸೂಚನೆ ನೀಡಿದ್ದಾರೆ.‌

ಪಾಲಿಕೆಯಲ್ಲಿ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ಕುಡಿಯುವ ನೀರಿನ ಸಮಸ್ಯೆ ಎದುರಾದ ತಕ್ಷಣ ಜನರ ಸಮಸ್ಯೆಗೆ ತುರ್ತಾಗಿ ಸ್ಪಂದನೆ ಸಿಗುತ್ತಿತ್ತು. ಯಾವಾಗ ಬಿಜೆಪಿಯ ಅವಧಿ ಅಂತ್ಯವಾಯಿತೋ ಅಲ್ಲಿಂದ ಜನರ ಸಮಸ್ಯೆಯನ್ನು ಕೇಳುವವರೇ ಇಲ್ಲವಾಗಿದೆ. ಸದ್ಯ ಪಾಲಿಕೆ ಕಾಂಗ್ರೆಸ್ ನೇತೃತ್ವದ ಆಡಳಿತಾಧಿಕಾರಿ ಮೂಲಕ ನಡೆಯುತ್ತಿದ್ದು ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವಾಗಿದೆ. ಅಧಿಕಾರಿಗಳು ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸದೇ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸೂಚನೆ ನೀಡಿದರು.

ಬಿಜೆಪಿಯ ನಿಕಟಪೂರ್ವ ಪಾಲಿಕೆ ಸದಸ್ಯರುಗಳಾದ ಪೂರ್ಣಿಮಾ ಎಂ, ಗಣೇಶ್ ಕುಲಾಲ್, ಜಯಲಕ್ಷ್ಮಿ ಶೆಟ್ಟಿ, ಜಗದೀಶ್ ಶೆಟ್ಟಿ, ಬಿಜೆಪಿ ಪ್ರಮುಖರಾದ ಚಂದ್ರಶೇಖರ್ ಬಜಾಲ್ ತಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಜನರು ಅನುಭವಿಸುತ್ತಿರುವ ತೊಂದರೆಯ ಬಗ್ಗೆ ವಿವರಿಸಿದರು. ಪಾಲಿಕೆಯ ಕಾರ್ಯಪಾಲಕ ಹಿರಿಯ ಇಂಜಿನಿಯರ್ ನರೇಶ್ ಶೆಣೈ, ವಿವಿಧ ಅಧಿಕಾರಿಗಳು, ಮುರಲೀಧರ್ ನಾಯಕ್, ಸ್ಥಳೀಯರು ಉಪಸ್ಥಿತರಿದ್ದರು.

With drinking water shortages emerging even before the summer, MLA Vedavyas Kamath instructed Mangaluru City Corporation officials to visit the affected areas and take immediate corrective action. Residents from Wards 25, 26, 27, 41, and 53 have been facing severe water scarcity, prompting former BJP corporators and party leaders to raise the issue with the MLA. Kamath criticized the present Congress-led administrative setup of the corporation for failing to address public grievances and urged officials not to neglect the issue. Senior engineers, party leaders, and local residents were present during the discussion.