ಸುಳ್ಯ, ಬೆಳ್ತಂಗಡಿ, ಪುತ್ತೂರಿನಲ್ಲಿ ಕಮಲ ದಳ ದಳ ; ಬಂಟ್ವಾಳ, ಮಂಗಳೂರು, ಮೂಡುಬಿದ್ರೆ ಬಹುತೇಕ ಕೈ ಬಲ !!

31-12-20 11:21 am       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿತರು ಅತ್ಯಧಿಕ ಸಂಖ್ಯೆಯಲ್ಲಿ ಗೆದ್ದುಕೊಂಡಿದ್ದಾರೆ.

ಮಂಗಳೂರು, ಡಿ. 31: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿತರು ಅತ್ಯಧಿಕ ಸಂಖ್ಯೆಯಲ್ಲಿ ಗೆದ್ದುಕೊಂಡಿದ್ದಾರೆ. ಬುಧವಾರ ರಾತ್ರಿ ವರೆಗೂ ಮತ ಎಣಿಕೆ ನಡೆದಿದ್ದು ಮಾಹಿತಿ ಪ್ರಕಾರ 1810 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆದ್ದುಕೊಂಡರೆ, 982 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ. ಎಸ್ ಡಿಪಿಐ 160 ಸ್ಥಾನಗಳನ್ನು ಮತ್ತು 40 ಮಂದಿ ಪಕ್ಷೇತರರು ಗೆಲುವು ಪಡೆದಿದ್ದಾರೆ. 

ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತೆ ಬಿಜೆಪಿ ಬೆಂಬಲಿತರು ಪಾರಮ್ಯ ಕಂಡಿದ್ದಾರೆ. ಸುಳ್ಯ, ಬೆಳ್ತಂಗಡಿ, ಪುತ್ತೂರು ಹಾಗೂ ಕಡಬ ತಾಲೂಕಿನ ಬಹುತೇಕ ಭಾಗದಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರ ಪಡೆದರೆ, ಮಂಗಳೂರು, ಬಂಟ್ವಾಳ ಮತ್ತು ಮೂಡುಬಿದ್ರೆಯಲ್ಲಿ ನೇರ ಹಣಾಹಣಿ ಏರ್ಪಟ್ಟಿದೆ. ಈ ಮೂಲಕ ನಗರ ಪ್ರದೇಶವಾದ ಈ ಮೂರು ತಾಲೂಕು ಭಾಗದಲ್ಲಿ ಹೆಚ್ಚಿನ ಕಡೆ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಪಡೆಯುವ ಸೂಚನೆ ಲಭಿಸಿದೆ.‌

ಉಡುಪಿ ಜಿಲ್ಲೆಯಲ್ಲೂ ಬಿಜೆಪಿ ಬೆಂಬಲಿತರು ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಕಂಡಿದ್ದಾರೆ. 1100 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಆಯ್ಕೆಯಾದರೆ, ಕಾಂಗ್ರೆಸ್ ಕೇವಲ 450 ಸ್ಥಾನಗಳನ್ನು ಗಳಿಸಿದೆ. ಎಸ್ ಡಿಪಿಐ ಬೆಂಬಲಿತರು ಎಂಟು ಸ್ಥಾನಗಳನ್ನು ಪಡೆದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 128 ಮಂದಿ ಅವಿರೋಧ ಆಯ್ಕೆಯಾಗಿದ್ದರು. 

ಹೀಗಿದ್ದರೂ, ಪೂರ್ತಿಯಾಗಿ ಫಲಿತಾಂಶ ಇನ್ನೂ ಲಭ್ಯವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3131 ಸ್ಥಾನಗಳಿಗೆ ಚುನಾವಣೆ ನಡೆದಿದ್ದು 2863 ಸ್ಥಾನಗಳ ಫಲಿತಾಂಶ ಬಂದಿದೆ. ಉಡುಪಿಯಲ್ಲಿ 2385 ಸ್ಥಾನಗಳಲ್ಲಿ 1750 ಸ್ಥಾನಗಳ ಫಲಿತಾಂಶ ಮಾತ್ರ ಹೊರಬಿದ್ದಿದೆ.

Gram Panchayat Elections 2020 BJP Bags major Victory in Sullia, Belthangady, Puttur, Moodbidri and Mangalore.