ಸಿಎಂ, ಡಿಸಿಎಂ ಮಂಗಳೂರಿಗೆ ; ಒಂದೇ ದಿನ ಮಂಗಳೂರಿನಲ್ಲಿ ಕಾರ್ಯಕ್ರಮಗಳ ಗೌಜಿ, ವಾಹನ ಸಂಚಾರ ವ್ಯತ್ಯಯ ಸಾಧ್ಯತೆ, ವಾಹನ ಸವಾರರಿಗೆ ಪೊಲೀಸರ ಸೂಚನೆ 

09-01-26 09:18 pm       Mangalore Correspondent   ಕರಾವಳಿ

ನಗರದ ಅತ್ತಾವರದ ಹೋಟೆಲ್ ಅವತಾರ್ ನಲ್ಲಿ ಜ.10ರಂದು ನಡೆಯಲಿರುವ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ, ಪಿಲಿಕುಳದಲ್ಲಿ ನಡೆಯಲಿರುವ ಕಾರ್ಯಕ್ರಮ, ನರಿಂಗಾನ ಹಾಗೂ ಅಂಬ್ಲಮೊಗರುಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಭಾಗವಹಿಸಲಿದ್ದು, ಇದರಿಂದಾಗಿ ಇವರು ಸಂಚರಿಸುವ ರಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಬಹುದು. 

ಮಂಗಳೂರು, ಜ.9 : ನಗರದ ಅತ್ತಾವರದ ಹೋಟೆಲ್ ಅವತಾರ್ ನಲ್ಲಿ ಜ.10ರಂದು ನಡೆಯಲಿರುವ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ, ಪಿಲಿಕುಳದಲ್ಲಿ ನಡೆಯಲಿರುವ ಕಾರ್ಯಕ್ರಮ, ನರಿಂಗಾನ ಹಾಗೂ ಅಂಬ್ಲಮೊಗರುಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಭಾಗವಹಿಸಲಿದ್ದು, ಇದರಿಂದಾಗಿ ಇವರು ಸಂಚರಿಸುವ ರಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಬಹುದು. 

ಸಾರ್ವಜನಿಕರು ಸುಗಮ ಸಂಚಾರ ದೃಷ್ಟಿಯಿಂದ ತುರ್ತು ಸಂದರ್ಭದಲ್ಲಿ ಹೊರತುಪಡಿಸಿ ಕೆಳಕಂಡ ಮಾರ್ಗದಲ್ಲಿ ಬಾರದೇ ಆದಷ್ಟು ಬದಲಿ ಮಾರ್ಗ ಉಪಯೋಗಿಸುವಂತೆ ಕೋರಿದೆ.  

ಸಂಚಾರ ದಟ್ಟಣೆಯಾಗುವ ಮಾರ್ಗ 

  • ಕೆಂಜಾರು ಜಂಕ್ಷನ್ - ಮರವೂರು - ಕಾವೂರು - ಬೋಂದೆಲ್ - ಪದವಿನಂಗಡಿ - ಮೇರಿಹಿಲ್ - ಯೆಯ್ಯಾಡಿ - ಕೆ.ಪಿ.ಟಿ. ವೃತ್ತ - ಬಟ್ಟಗುಡ್ಡೆ - ಕದ್ರಿ ಕಂಬಳ - ಭಾರತ್ ಬೀಡಿ ಜಂಕ್ಷನ್ - ಬಂಟ್ಸ್ ಹಾಸ್ಟೆಲ್ - ಪಿ.ವಿ.ಎಸ್ - ನವಭಾರತ್ ವೃತ್ತ - ಅಂಬೇಡ್ಕರ್ ಜಂಕ್ಷನ್ - ಹಂಪನ್ ಕಟ್ಟೆ - ಕೈರಾಲಿ ಜಂಕ್ಷನ್ - ಅತ್ತಾವರ ಕಟ್ಟೆ - ಅವತಾರ್ ಹೋಟೆಲ್ ಎದುರಿನ ರಸ್ತೆ.
  • ಪದವು ಜಂಕ್ಷನ್ - ನಂತೂರು ವೃತ್ತ - ಪಂಪುವೆಲ್ - ಎಕ್ಕೂರು - ಜಪ್ಪಿನಮೊಗರು - ಕಲ್ಲಾಪು - ತೊಕ್ಕೊಟ್ಟು - ಕುತ್ತಾರ್‌ಪದವು - ದೇರಳಕಟ್ಟೆ - ನಾಟೆಕಲ್ - ಮಂಗಳಾಂತಿ - ಕಲ್ಕಟ - ಮಂಜನಾಡಿ - ನರಿಂಗಾನ.
  • ಕುತ್ತಾರ್‌ಪದವು - ಕೊರಗಜ್ಜನಕಟ್ಟೆ - ಉಳಿಯ - ಅಂಬ್ಲಮೊಗರು - ಮದಕ ಜಂಕ್ಷನ್ 
  • ಕೆಪಿ.ಟಿ. ಜಂಕ್ಷನ್ - ಕೊಟ್ಟಾರ ಚೌಕಿ - ಕೊಡಿಕಲ್ ಕ್ರಾಸ್ - ಕೂಳೂರು - ಕೆ.ಐ.ಓ.ಸಿ.ಎಲ್ ಜಂಕ್ಷನ್ - ತಣ್ಣೀರುಬಾವಿ - ಬ್ಲೂಪ್ಲ್ಯಾಗ್ ಬೀಚ್

ಮೇಲೆ ತಿಳಿಸಿರುವ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡತಕ್ಕುದಲ್ಲ. ಇವರು ಸಂಚರಿಸುವ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಯಾವುದೇ ವಾಹನಗಳು ಸಂಚರಿಸತಕ್ಕುದಲ್ಲ ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ. ತಣ್ಣೀರು ಬಾವಿಯಲ್ಲಿ ಬೀಚ್ ಫೆಸ್ಟಿವಲ್, ಕದ್ರಿ ಪಾರ್ಕಿನಲ್ಲಿ ಕಲಾಪರ್ಬ, ಟಿಎಂಎ ಪೈ ಹಾಲ್ ನಲ್ಲಿ ಲಿಟ್ ಫೆಸ್ಟ್ ಕಾರ್ಯಕ್ರಮ ಇರಲಿದ್ದು ಇದರ ನಡುವೆ ಸಿಎಂ ಮತ್ತು ಡಿಸಿಎಂ ಅವರು ಬಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಎರಡು ದಿನಗಳಲ್ಲಿ ಭಾರೀ ಸಂಚಾರ ವ್ಯತ್ಯಯ ಉಂಟಾಗಲಿದೆ.

Chief Minister Siddaramaiah and Deputy Chief Minister D.K. Shivakumar will attend multiple programs in Mangaluru on January 10, including tourism, development, and public events across the city and surrounding areas.