ಬಡ ಕುಟುಂಬಕ್ಕೆ ತಿಂಗಳ ದಿನಸಿ ಕಿಟ್ ; ಉಳ್ಳಾಲ ಪೊಲೀಸ್ ರಂಜಿತ್ ಮಾನವೀಯ ಸೇವೆ

04-01-21 11:51 am       Mangalore Correspondent   ಕರಾವಳಿ

ಆದಾಯವಿಲ್ಲದೆ ಸೊರಗಿರುವ ಬಡ ಕುಟುಂಬದ ಬಗ್ಗೆ ಅರಿತ ಉಳ್ಳಾಲ ಪೊಲೀಸ್ ಠಾಣೆ ಸಿಬ್ಬಂದಿ ರಂಜಿತ್ ಕುಮಾರ್ ಅವರು ತಿಂಗಳ ದಿನಸಿ ಕಿಟ್ಟನ್ನು ನೀಡಿದ್ದಾರೆ.

ಉಳ್ಳಾಲ, ಜ.4: ಇಲ್ಲಿನ ತೊಕ್ಕೊಟ್ಟು, ಚೆಂಬುಗುಡ್ಡೆ ವೈದ್ಯನಾಥ ಭಜನಾ ಮಂದಿರದ ಬಳಿಯ ನಿವಾಸಿ ಸಂಜೀವ(64) ಅಧಿಕ ರಕ್ತದೊತ್ತಡಕ್ಕೊಳಗಾಗಿ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಧಕ್ಕೆಯಲ್ಲಿ ಬೋಟ್ ಕಾರ್ಮಿಕರಾಗಿದ್ದ ಸಂಜೀವರು ಕಳೆದ ಒಂದು ವರ್ಷದಿಂದ ಪಾರ್ಶ್ವವಾಯು ಪೀಡಿತರಾಗಿದ್ದಾರೆ. ಪತ್ನಿ ಸುಮತಿಯವರ ಆರೈಕೆಯಲ್ಲೇ ಇರುವ ಸಂಜೀವರಿಗೆ ಸಂತಾನ ಭಾಗ್ಯವಿಲ್ಲ. ಸುಮತಿಯವರು ಚೆಂಬುಗುಡ್ಡೆ ಬಳಿಯ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಆದಾಯವಿಲ್ಲದೆ ಸೊರಗಿರುವ ಬಡ ಕುಟುಂಬದ ಬಗ್ಗೆ ಅರಿತ ಉಳ್ಳಾಲ ಪೊಲೀಸ್ ಠಾಣೆ ಸಿಬ್ಬಂದಿ ರಂಜಿತ್ ಕುಮಾರ್ ಅವರು ತಿಂಗಳ ದಿನಸಿ ಕಿಟ್ಟನ್ನು ನೀಡಿದ್ದಾರೆ. ಪ್ರತಿ ತಿಂಗಳು ಬಡ ಕುಟುಂಬಗಳಿಗೆ ರಂಜಿತ್ ಅವರು ರೇಷನ್ ಕಿಟ್ಟನ್ನು ನೀಡುತ್ತಾ ಬಂದಿದ್ದಾರೆ. ತೊಕ್ಕೊಟ್ಟು ಶ್ರೀ ಸಾಯಿ ಪರಿವಾರ್ ಟ್ರಸ್ಟ್ ನ ಸದಸ್ಯರು ಜೊತೆಗೂಡಿ ಧನ ಸಹಾಯವನ್ನು ನೀಡಿದ್ದಾರೆ.

ತೊಕ್ಕೊಟ್ಟು ಶ್ರೀ ಸಾಯಿ ಪರಿವಾರ್ ಟ್ರಸ್ಟ್ ನ ಪುರುಷೋತ್ತಮ ಕಲ್ಲಾಪು, ಪ್ರವೀಣ್ ಎಸ್ ಕುಂಪಲ, ಕಿಶೋರ್ ಮಂಚಿ, ಸತೀಶ್ ಭಟ್ನಗರ, ಗಣೇಶ್ ಅಂಚನ್, ಜಗದೀಶ್ ಆಚಾರ್ಯ, ಪ್ರಕಾಶ್ ಸಿಂಪೋನಿ, ಶವಿತ್ ಉಚ್ಚಿಲ್, ರೂಪೇಶ್ ಉಚ್ಚಿಲ್ ಜತೆಗಿದ್ದರು.

Ullal Police Personnel Ranjith Kumar lends Helping Hand to a cancer patient with Grocessory Kit for a month to the poor family.