ಪೊಲೀಸ್ ಇನ್ಸ್ ಪೆಕ್ಟರ್ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದು ಹಣ ಪೀಕಿಸಲು ಯತ್ನ !

05-01-21 11:28 am       Udupi Correspondent   ಕರಾವಳಿ

ಉಡುಪಿ ನಗರ ಠಾಣೆ ವೃತ್ತ ನಿರೀಕ್ಷಕ ಮಂಜುನಾಥ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ತೆರದು ವಂಚಿಸಲು ಯತ್ನಿಸಿದ ಘಟನೆ ನಡೆದಿದೆ.

ಉಡುಪಿ, ಜ.5 : ಉಡುಪಿ ನಗರ ಠಾಣೆ ವೃತ್ತ ನಿರೀಕ್ಷಕ ಮಂಜುನಾಥ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದ ವ್ಯಕ್ತಿಯೊಬ್ಬ ಸ್ನೇಹಿತರಲ್ಲಿ ಹಣ ಕಳುಹಿಸುವಂತೆ ಕೇಳಿಕೊಂಡ ಬಗ್ಗೆ ದೂರು ದಾಖಲಾಗಿದೆ. ‌

ಈ ಬಗ್ಗೆ ವೃತ್ತ ನಿರೀಕ್ಷಕ ಮಂಜುನಾಥ್ ಉಡುಪಿಯ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಣ ಕೋರಿ ನಕಲಿ ಫೇಸ್‌ಬುಕ್ ಖಾತೆಯಿಂದ ಇಂತಹ ಯಾವುದೇ ಸಂದೇಶಗಳು ಬಂದಲ್ಲಿ ಅದನ್ನು ನಿರ್ಲಕ್ಷಿಸುವಂತೆ ಮಂಜುನಾಥ್ ತಮ್ಮ ಸ್ನೇಹಿತರಲ್ಲಿ ಕೋರಿದ್ದಾರೆ.

ಮಂಜುನಾಥ್ ಅವರಿಗೆ ತಿಳಿಯದಂತೆ ಫೇಸ್ಬುಕ್ ಖಾತೆ ತೆರೆಯಲಾಗಿದ್ದು ಅವರ ಸ್ನೇಹಿತ ವಲಯದಿಂದಲೇ ಹಣ ಪೀಕಿಸಲು ಯತ್ನಿಸಿದ್ದಾನೆ.‌ ಈ ಬಗ್ಗೆ ಸೈಬರ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ, ಮಂಜುನಾಥ್ ತಮ್ಮ ಅಸಲಿ ಖಾತೆಯಲ್ಲಿ ತಮ್ಮ ಹೆಸರಲ್ಲಿ ಯಾರೇ ಆಗಲಿ ಹಣ ಕೇಳಿದರೆ ಮಾಹಿತಿ ನೀಡುವಂತೆ ಹೇಳಿಕೊಂಡಿದ್ದಾರೆ. ‌

A fake Facebook account of a police inspector was created on Sunday, January 3 by an unidentified person, who used the platform to demand money from the former's friends.