ಬ್ರೇಕಿಂಗ್ ನ್ಯೂಸ್
26-06-26 02:14 pm HK News Staffer ಕರಾವಳಿ
ಮಂಗಳೂರು, ಜೂನ್ 26: ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನ ವಿವಾದದ ಬೆನ್ನಲ್ಲೇ ದೆಹಲಿಗೆ ತೆರಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಲ್ಲಿಂದ ನೇರವಾಗಿ ಧರ್ಮಸ್ಥಳಕ್ಕೆ ಬಂದು ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ರಾಜಕೀಯ ಅಥವಾ ವ್ಯಾವಹಾರಿಕ ಸಂಬಂಧ ಹೊಂದಿದ್ದಾರೆ ಎಂಬ ಆರೋಪವನ್ನು ಕೆಲವರು ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷನಾಗಿ ಇಂತಹ ಕೀಳು ಮಟ್ಟದ ಯೋಚನೆ ಮಾಡೋದಿಲ್ಲ. ಸಿಎಂ ಡಿಕೆಶಿ ಮತ್ತು ನನ್ನ ನಡುವೆ ಯಾವುದೇ ರೀತಿಯ ಆತ್ಮೀಯತೆ, ವ್ಯವಹಾರ ಸಂಬಂಧಗಳಿಲ್ಲ ಎಂದು ಹೇಳಿದ್ದಾರೆ.
ಧರ್ಮಸ್ಥಳದ ಸನ್ನಿಧಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯೇಂದ್ರ, ಅಡ್ಡ ಮತದಾನ ವಿಚಾರ ನನ್ನನ್ನು ಸೇರಿದಂತೆ ಇಡೀ ರಾಜ್ಯದ ಕಾರ್ಯಕರ್ತರಿಗೆ ನೋವನ್ನುಂಟು ಮಾಡಿದೆ. ಬಿಜೆಪಿ ಶಾಸಕರಿಂದ ನಡೆದ ಅಡ್ಡ ಮತದಾನ ಬೇರೆ ಬೇರೆ ಚರ್ಚೆಗಳನ್ನು ಹುಟ್ಟು ಹಾಕಿದೆ. ಹೀಗಾಗಿ ಮಾರನೇ ದಿನವೇ ಆಣೆ ಪ್ರಮಾಣ, ಶಾಸಂಕಾಂಗ ಪಕ್ಷದ ಸಭೆ ಧರ್ಮಸ್ಥಳದಲ್ಲಿ ಆಗಬೇಕೇಂದು ಹೇಳಿದ್ದೆ. ನಾನೂ ಭಾವನಾತ್ಮಕ ವ್ಯಕ್ತಿ, ನನ್ನ ಮನಸ್ಸಿಗೆ ತೋಚಿದ್ದನ್ನು ಹೇಳಿದ್ದೇನೆ. ಆದರೆ ಪಕ್ಷದ ಹಿರಿಯರು ಧರ್ಮಸ್ಥಳದ ತನಕ ಹೋಗೋದು ಬೇಡ ಅಂತ ಹೇಳಿದ್ದರು. ಹೀಗಾಗಿ ದೇವರ ಭಕ್ತನಾಗಿ ಕ್ಷೇತ್ರಕ್ಕೆ ಬಂದು ತಪ್ಪು ಕಾಣಿಕೆ ಹಾಕಿದ್ದೇನೆ ಎಂದರು.
ಪ್ರಧಾನ ಮಂತ್ರಿ ಮೋದಿ, ಅಮಿತ್ ಷಾ ಅವರ ಆಶೀರ್ವಾದದಿಂದ ರಾಜ್ಯಾಧ್ಯಕ್ಷ ಆಗಿದ್ದೇನೆ. ರಾಜ್ಯಾಧ್ಯಕ್ಷನಾಗಿ ಒಳೊಪ್ಪಂದ ಮಾಡುವಷ್ಟು ಕೀಳು ಮಟ್ಟದ ಯೋಚನೆ ಮಾಡೋದಿಲ್ಲ. ಅಪಪ್ರಚಾರ ಮಾಡುವವರಿಗೆ ಭಗವಂತ ಒಳ್ಳೆಯದನ್ನು ಮಾಡಲಿ ಎಂದು ಹೇಳಿದರು. ಅಡ್ಡ ಮತದಾನಕ್ಕೆ ನಾನು ಸಹಕಾರ ನೀಡಿದ್ದೇನೆ ಎಂಬ ಆರೋಪ ಸಂಪೂರ್ಣ ಸುಳ್ಳು. ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ನಿಂತು ಹೇಳುತ್ತಿದ್ದೇನೆ, ನನ್ನ ವಿರುದ್ಧದ ಈ ಅಪಪ್ರಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ” ಎಂದು ಹೇಳಿದರು.
ಮುಖ್ಯಮಂತ್ರಿಯಾಗಿ ಹಾಗೂ ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ವ್ಯಕ್ತಿಗೆ ನೀಡಬೇಕಾದ ಸಾಂಸ್ಥಿಕ ಗೌರವವನ್ನು ಮಾತ್ರ ನೀಡುತ್ತಿದ್ದೇನೆ ಎಂದು ಹೇಳಿದ ವಿಜಯೇಂದ್ರ, ತಮ್ಮ ವಿರುದ್ಧ ಅಪಪ್ರಚಾರ ನಡೆಸಿದವರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಮಾರ್ಮಿಕವಾಗಿ ನುಡಿದರು.



ನನಗೆ ಪಕ್ಷದ ಸಂಘಟನೆ ಬಗ್ಗೆ, ಕಾರ್ಯಕರ್ತರ ಶಕ್ತಿಯ ಬಗ್ಗೆ ನಂಬಿಕೆ ಇದೆ. ರೈತರು, ಬಡವರು, ಯುವಕರ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತು ಹಾಕುವ ವಿಶ್ವಾಸ ಇದೆ. ಮೊನ್ನೆಯ ದಿನ ಸಾಕಷ್ಟು ಶಾಸಕರು ಕರೆ ಮಾಡಿದ್ದರು. 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇದ್ದಾಗ 17 ಶಾಸಕರು ರಾಜೀನಾಮೆ ಕೊಟ್ಟು ಯಡಿಯೂರಪ್ಪ ನಾಯಕತ್ವಕ್ಕಾಗಿ ಪಕ್ಷ ಸೇರಿದ್ದರು. ಯಡಿಯೂರಪ್ಪ ನೇತೃತ್ವದಲ್ಲಿ ಗೆದ್ದವರನ್ನು ಸೇರಿಸಿ ಒಳ್ಳೆಯ ಸರ್ಕಾರ ನೀಡಿದ್ರು. ಆದರೆ ಈಶ್ವರಪ್ಪ ಇದನ್ನೆಲ್ಲ ಮರೆತಿರಬಹುದು.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ 18 ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು. ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕಿ ಕುಗ್ಗಿಸುವ ಕೆಲಸವಾಗಿತ್ತು. ಅಂತಹ ಸಂಧರ್ಭದಲ್ಲಿ ಆ ಶಾಸಕರು ಕೈಜೋಡಿಸಿದ ಕಾರಣಕ್ಕೆ ಒಳ್ಳೆಯ ಸರ್ಕಾರ ಕೊಡೋಕೆ ಕಾರಣವಾಗಿತ್ತು. ಈಶ್ವರಪ್ಪ ಕೂಡ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಎಂಜಾಯ್ ಮಾಡಿದ್ರು. ಆದರೆ ಈಶ್ವರಪ್ಪ ಅವರಿಗೆ ಈಗ ಎಲ್ಲವೂ ಮರೆತುಹೋಗಿದೆ. ಬಿಜೆಪಿಯ 63 ಶಾಸಕರಿಗೆ ಒಂದು ಮಾತು ಹೇಳುತ್ತೇನೆ. ಕಾಂಗ್ರೆಸ್ ಬೇರೆ ಬೇರೆ ಹೆಸರನ್ನು ತೇಲಿ ಬಿಡುತ್ತಿದ್ದಾರೆ. ಇದರಿಂದ ಸ್ವಂತ ಕ್ಷೇತ್ರದ ಕಾರ್ಯಕರ್ತರೂ ಅನುಮಾನದಿಂದ ನೋಡುವಂತಾಗಿದೆ. ಸತ್ಯ ಇಂದಲ್ಲ ನಾಳೆ ಹೊರಗೆ ಬರುತ್ತದೆ. ಇವತ್ತಿಗೆ ಈ ಚರ್ಚೆಗೆ ಇತಿಶ್ರೀ ಹಾಡುತ್ತೇವೆ ಎಂದು ವಿಜಯೇಂದ್ರ ಹೇಳಿದರು.
ಡಿವಿ ಸದಾನಂದ ಗೌಡ ಅವರು ರಹಸ್ಯ ಸಭೆ ಬಗ್ಗೆ ಹೇಳಿದ್ದರೂ ರಾಜ್ಯ ನಾಯಕರು ನಿರ್ಲಕ್ಷ್ಯ ವಹಿಸಿದ್ದರು ಎಂದಿರುವುದಕ್ಕೆ, ಅಡ್ಡ ಮತದಾನ ಆದ್ಮೇಲೆ ಅವರು ಕರೆ ಮಾಡಿದ್ದರು. ನನ್ನ ಫೋನ್ ಸಿಕ್ಕಿಲ್ಲ, ಪ್ರಧಾನ ಕಾರ್ಯದರ್ಶಿಗೆ ಫೋನ್ ಮಾಡಿದ್ದೆ ಅಂತ ಹೇಳಿದ್ದರು. ಪ್ರಧಾನ ಕಾರ್ಯದರ್ಶಿಗೆ ಕೇಳಿದಾಗ ಸದಾನಂದ ಗೌಡ ಆ ರೀತಿಯ ಮಾಹಿತಿ ಹೇಳಿಲ್ಲ ಅಂತ ಹೇಳಿದ್ರು ಎಂದರು.
ಇದಕ್ಕೂ ಮುನ್ನ ದೇವರ ದರ್ಶನ ಪಡೆದ ವಿಜಯೇಂದ್ರ, ಆಣೆ ಪ್ರಮಾಣಕ್ಕಾಗಿ ಧರ್ಮಸ್ಥಳದ ಹೆಸರೆತ್ತಿದ ತಪ್ಪಿಗಾಗಿ ದೇವಸ್ಥಾನದಲ್ಲಿ 1001 ರೂಪಾಯಿ ತಪ್ಪು ಕಾಣಿಕೆ ಹಾಕಿದರು. ಇದರೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ಸಾಥ್ ನೀಡಿದ್ದರು. ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಕಿಶೋರ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ಹರೀಶ್ ಪೂಂಜ, ಗುರುರಾಜ್ ಗಂಟಿಹೊಳೆ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
04-08-26 09:12 pm
HK News Staffer
ಸಿದ್ದರಾಮಯ್ಯ ಆಪ್ತ ಎಂಬ ಕಾರಣಕ್ಕೆ ನನಗೆ ಅನ್ಯಾಯ ಆಗಿ...
04-08-26 09:10 pm
ರಾಜಕೀಯ ಡಬಲ್ ಗೇಮ್, ಮೋಸದಿಂದ ಕೂಡಿದೆ; ತಲೆ ಹೊಡೆದವ...
04-08-26 08:11 pm
ಸಂಪುಟ ಸಂಕಟ; ಸಚಿವ ಸ್ಥಾನ ಸಿಗದ್ದಕ್ಕೆ ರಾಜ್ಯಾದ್ಯಂತ...
04-08-26 03:53 pm
ಶಾಸಕರು ರಾಜೀನಾಮೆ ಕೊಟ್ರೆ ಎರಡೇ ನಿಮಿಷದಲ್ಲಿ ಅಂಗೀಕಾ...
04-08-26 03:15 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
05-08-26 08:08 pm
HK News Staffer
ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರ ; ಸಂಘ ನೋಂದಣಿ ಆಗಿಲ...
03-08-26 10:50 pm
Sweethin Harman, Latent Show, Mangalore: ಜನಪ್...
03-08-26 11:42 am
Mangalore Rain: ಭಾರೀ ಮಳೆಯ ನಡುವೆ ಬಂಟ್ವಾಳದಲ್ಲಿ...
02-08-26 09:42 pm
ಎಡಕುಮೇರಿ - ಸಿರಿಬಾಗಿಲು ನಡುವೆ ರೈಲ್ವೇ ಹಳಿಗೆ ಭೂಕು...
02-08-26 11:42 am
05-08-26 09:08 pm
HK News Staffer
ಯಾದಗಿರಿ ಔಷಧ ಕಂಪನಿಯಲ್ಲಿ ಭೀಕರ ದುರಂತ ; ರಾಸಾಯನಿಕ...
05-08-26 06:20 pm
ಬ್ರಾಹ್ಮಣರಿಗೆ ಮನೆ ಇದೆಯೇ? ನಾವು ಇನ್ಫೋಸಿಸ್ ಉದ್ಯೋಗ...
05-08-26 04:42 pm
ಕಾಡಾನೆ ಜೊತೆ ಸೆಲ್ಫಿ ತೆಗೆಯಲು ಹೋಗಿ ಜೀವ ಕಳೆದುಕೊಂಡ...
05-08-26 04:29 pm
Srinivas College Ragging, Mangalore: ಶ್ರೀನಿವಾ...
05-08-26 11:44 am