ಬ್ರೇಕಿಂಗ್ ನ್ಯೂಸ್
05-08-26 09:08 pm HK News Staffer ಕ್ರೈಂ
ಉಳ್ಳಾಲ, ಆ.05: ಅವಿವಾಹಿತ ಯುವಕನೋರ್ವ ಮನೆಯಲ್ಲೇ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಸೋಮೇಶ್ವರ ಬಳಿಯ ಪಿಲಾರು ಸರಕಾರಿ ಶಾಲೆಯ ಬಳಿ ನಡೆದಿದ್ದು, ಮೃತ ಯುವಕ ಡೆತ್ ನೋಟಿನಲ್ಲಿ ಸಾವಿಗೆ ಕಾರಣರಾದ ಮೂವರು ಯುವಕರ ಹೆಸರನ್ನು ಉಲ್ಲೇಖಿಸಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿತಿನ್ ಕುಮಾರ್ ಯಾನೆ ನೀತು(35) ಆತ್ಮಹತ್ಯೆಗೈದ ಯುವಕ. ಮೂಲತಃ ಕೋಟೆಕಾರು ಕೊಂಡಾಣ ಮಿತ್ರನಗರ ನಿವಾಸಿಯಾಗಿರುವ ನಿತಿನ್, ಪಿಲಾರಿನ ಭಾವ (ಅಕ್ಕನ ಗಂಡ) ಪ್ರಶಾಂತ್ ಪಕ್ಕಳ ಅವರ ಮನೆಯಲ್ಲಿ ಮೂರು ವರ್ಷಗಳಿಂದ ವಾಸವಿದ್ದ. ತೊಕ್ಕೊಟ್ಟು ಕಾಪಿಕಾಡಿನ ಕ್ಯಾಟರಿಂಗ್ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದ ನಿತಿನ್ ಕಳೆದ ಐದು ವರುಷಗಳಿಂದ ಕಾಲಿನ ವೆರಿಕೋಸ್ ಸಮಸ್ಯೆಯಿಂದ ಬಳಲುತ್ತಿದ್ದನಂತೆ.
ಮೂರು ದಿನಗಳಿಂದ ನಿತಿನ್ ಜ್ವರ ಭಾದೆಯಿಂದಾಗಿ ಮನೆಯಲ್ಲೇ ಉಳಿದಿದ್ದು, ಮಂಗಳವಾರ ರಾತ್ರಿ ಊಟ ಮುಗಿಸಿ ಕೋಣೆಗೆ ಸೇರಿದ ಬಳಿಕ ಬುಧವಾರ ಬೆಳಗ್ಗೆ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನಿತಿನ್ ಧರಿಸಿದ್ದ ಪ್ಯಾಂಟ್ ಜೇಬಿನಲ್ಲಿ ಚೀಟಿಯೊಂದು ಸಿಕ್ಕಿದ್ದು ಅದರಲ್ಲಿ ನನ್ನ ಸಾವಿಗೆ ಚರಣ್, ಪುಟ್ಟ, ಕಾರ್ತಿಕ್ ಕಾರಣ ಎಂಬುದಾಗಿ ಮೂವರ ಹೆಸರನ್ನ ಉಲ್ಲೇಖಿಸಲಾಗಿದೆ. ಈ ಮೂವರ ದುಷ್ಪ್ರೇರಣೆಯಿಂದಲೇ ನಿತಿನ್ ಆತ್ಮಹತ್ಯೆಗೈಯಲು ಕಾರಣವಾಗಿದ್ದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿತಿನ್ ಅವರ ಬಾವ ಪ್ರಶಾಂತ್ ಪಕ್ಕಳ ಅವರು ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಉಳ್ಳಾಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
20-09-26 08:59 pm
HK News Staffer
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm