ಬ್ರೇಕಿಂಗ್ ನ್ಯೂಸ್
07-01-21 06:04 pm Mangalore Correspondent ಕರಾವಳಿ
ಉಳ್ಳಾಲ, ಜ.7:ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ರಾ.ಹೆ. 66 ರ ತಲಪಾಡಿ- ಉಚ್ಚಿಲದ ಅಂಡರ್ ಪಾಸ್ ಸಂಪೂರ್ಣ ಜಲಾವೃತಗೊಂಡಿದ್ದು ಆಕ್ರೋಶಿತ ಉಚ್ಚಿಲ ಪ್ರದೇಶದ ನಾಗರಿಕರು ಅಂಡರ್ ಪಾಸ್ ಬಳಿಯ ಸರ್ವಿಸ್ ರಸ್ತೆಯನ್ನು ತಡೆದು ಪ್ರತಿಭಟಿಸಿದ್ದಾರೆ. ಈ ವೇಳೆ, ಸ್ಥಳಕ್ಕೆ ಬಂದ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಸಮಸ್ಯೆ ಪರಿಹರಿಸಲು ತನಗೆ ಇಬ್ಬರು ಸ್ಥಳೀಯ ತಾಂತ್ರಿಕ ತಜ್ಞರನ್ನು ನೀಡುವಂತೆ ಪ್ರತಿಭಟನಕಾರರಲ್ಲೇ ಕೇಳಿಕೊಂಡಿದ್ದು ನಗೆಪಾಟಲಿಗೀಡಾಗಿದೆ.
ಇಂದು ಬೆಳಗ್ಗಿನಿಂದಲೇ ಉಚ್ಚಿಲ ಹೈವೇ ಸರ್ವಿಸ್ ರಸ್ತೆಯನ್ನು ತಡೆದು ಸ್ಥಳೀಯ ನಾಗರಿಕರು ಪ್ರತಿಭಟಿಸಿದ್ದಾರೆ. ಉಚ್ಚಿಲ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಿಸಿದ್ದು ಕಳೆದ ನಾಲ್ಕೈದು ವರುಷಗಳಿಂದ ಇಲ್ಲಿ ಪ್ರತಿ ಮಳೆಗಾಲದಲ್ಲೂ ಕೃತಕ ನೆರೆ ಪರಿಸ್ಥಿತಿ ಉಂಟಾಗುತ್ತಿದೆ. ಸ್ಥಳೀಯ ಮದರಸ ಮತ್ತು ಶಾಲಾ ವಿದ್ಯಾರ್ಥಿಗಳ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸ್ಥಳೀಯರು ಹೆದ್ದಾರಿ ಪ್ರಾಧಿಕಾರಕ್ಕೆ ದೂರು ನೀಡಿದ್ದರೂ ಯಾವುದೇ ಫಲ ದೊರಕಿಲ್ಲ.

ನಂತೂರಿನಿಂದ ಕೇರಳದ ಗಡಿಭಾಗ ತಲಪಾಡಿಯ ವರೆಗೂ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದರೂ ತಲಪಾಡಿ ಟೋಲ್ ಗೇಟಲ್ಲಿ ಟೋಲ್ ಸಂಗ್ರಹ ಮಾತ್ರ ನಡೆಯತ್ತಲೇ ಇದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬರಲೇಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದ ಪರಿಣಾಮ ಸಂಜೆ ಹೊತ್ತಿಗೆ ಹೆದ್ದಾರಿ ಪ್ರಾಧಿಕಾರ ಯೋಜನಾಧಿಕಾರಿ ಶಿಶು ಮೋಹನ್ ಸ್ಥಳಕ್ಕೆ ಆಗಮಿಸಿದ್ದು ಹೆಸರಿಗೆ ತಕ್ಕಂತೆ ಶಿಶು ತರನೇ ವರ್ತಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಪ್ರತಿಭಟನಾಕಾರರಲ್ಲಿ ಮಾತನಾಡಿ ತಕ್ಷಣ ಅಂಡರ್ ಪಾಸ್ ನಲ್ಲಿ ಶೇಖರಣೆಯಾದ ನೀರನ್ನು ಖಾಲಿ ಮಾಡುತ್ತೇವೆ. ಅಂಡರ್ ಪಾಸ್ ನಲ್ಲಿ ನೀರು ಶೇಖರಣೆಯಾಗದ ಹಾಗೆ ತಡೆಯಲು ಶಾಶ್ವತ ಕಾಮಗಾರಿ ಕೈಗೊಳ್ಳುತ್ತೇವೆ. ಇದಕ್ಕೆ ಸಲಹೆ ನೀಡಲು ಸ್ಥಳೀಯ ಇಬ್ಬರು ಪರಿಣತ ತಂತ್ರಜ್ಞಾನ ತಿಳಿದಿರುವ ಅಥವಾ ಇಂಜಿನಿಯರ್ ಗಳನ್ನು ನಮಗೆ ನೀಡಿ ಎಂದು ಪ್ರತಿಭಟನಾಕಾರರಲ್ಲೇ ಕೇಳಿಕೊಂಡು ತಮ್ಮ ಇಲಾಖೆಯ ದೌರ್ಬಲ್ಯವನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಿದ್ದಾರೆ.

ಯೋಜನಾಧಿಕಾರಿ ಮಾತಿಗೆ ಮಣಿಯದ ಪ್ರತಿಭಟನಾಕಾರರು ಶಾಶ್ವತ ಪರಿಹಾರ ನೀಡುವುದಾಗಿ ಲಿಖಿತ ಹಿಂಬರಹ ನೀಡದಿದ್ದರೆ ಪ್ರತಿಭಟನೆ ಮುಂದುವರೆಸುವುದಾಗಿ ಪಟ್ಟು ಹಿಡಿದಿದ್ದಾರೆ. ಪ್ರತಿಭಟನಾಕಾರರಿಗೆ ತಕ್ಷಣ ಹಿಂಬರಹ ನೀಡುವುದಾಗಿ ಯೋಜನಾಧಿಕಾರಿ ಶಿಶು ಮೋಹನ್ ಅವರು ಕಚೇರಿಗೆ ವಾಪಸ್ ತೆರಳಿದ್ದು, ಹಿಂಬರಹ ಕೈಗೆ ತಲುಪುವ ತನಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಸ್ಥಳೀಯ ಮುಖಂಡರಾದ ಅಬ್ದುಲ್ ಸಲಾಂ ಯು, ಅಬ್ದುಲ್ ನಾಸಿರ್, ಅಬ್ದುಲ್ ಸಲಾಂ ಜಿ, ಯು.ಬಿ. ಎಂ.ರಹೀಂ,ಸಾಮಾಜಿಕ ಕಾರ್ಯಕರ್ತ ಸಲಾಂ ಉಚ್ಚಿಲ್ ,ಮೌಸಿನ್ ರಹಿಮಾನ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ರಮೇಶ್ ಬಾಬು, ನವಯುಗದ ಶಿವಪ್ರಸಾದ್ ,ರಾಮಕೃಷ್ಣ , ಆನಂದ , ಸಾರ್ವಜನಿಕ ಸಂಪರ್ಕಾಧಿಕಾರಿ ಭಾಸ್ಕರ್ ಶೆಟ್ಟಿ ಪ್ರತಿಭಟನಾ ಸ್ಥಳಕ್ಕಾಗಮಿಸಿದ್ದರು.
ಹೆದ್ದಾರಿ ಯೋಜನಾಧಿಕಾರಿ ಶಿಶುಮೋಹನ್ ಅವರಿಂದ ಹಿಂಬರಹ ಬಂದ ಹಿನ್ನಲೆಯಲ್ಲಿ, ಉಚ್ಚಿಲದ ನಾಗರಿಕರು ಪ್ರತಿಭಟನೆ ಕೈಬಿಟ್ಟಿದ್ದಾರೆ.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 02:39 pm
HK News Staffer
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
25-06-26 01:00 pm
HK News Staffer
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm