ಬ್ರೇಕಿಂಗ್ ನ್ಯೂಸ್
08-01-21 06:06 pm Mangalore Correspondent ಕರಾವಳಿ
ಮಂಗಳೂರು, ಜ.8: ಮಂಗಳೂರಿನಲ್ಲಿ ಕಸ ವಿಲೇವಾರಿಗೆ ಗುತ್ತಿಗೆ ಪಡೆದಿರುವ ಮುಂಬೈ ಮೂಲದ ಆಂಟನಿ ವೇಸ್ಟ್ ಕಂಪನಿ ಮಂಗಳೂರು ಮಹಾನಗರ ಪಾಲಿಕೆಯನ್ನೇ ಕುತ್ತಿಗೆ ಹಿಡಿದು ಅಲ್ಲಾಡಿಸಲು ಆರಂಭಿಸಿದೆ. ಯಾಕಂದ್ರೆ, ಮಂಗಳೂರಿನ ಪಾಲಿಕೆಯ ಅಧಿಕಾರಸ್ಥರು ಕಂಪನಿಯ ದಾಳಕ್ಕೆ ಬಲಿಯಾಗಿ, ಗಂಟು ಪಡೆದು ಜುಟ್ಟು ಹಿಡಿಸಿಕೊಂಡಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.
ಪ್ರತಿ ತಿಂಗಳು ಕಸ ತೆಗೆಯಲ್ಲ, ಒಣ ಕಸ- ಹಸಿ ಕಸದ ವಿಚಾರ, ನೌಕರರಿಗೆ ಸಂಬಳ ಕೊಟ್ಟಿಲ್ಲ ಹೀಗೆ ನಾನಾ ರೀತಿಯ ನೆಪ ಒಡ್ಡಿಕೊಂಡು ಆಂಟನಿ ವೇಸ್ಟ್ ಕಂಪನಿಯ ಕೆಲಸದಾರರು ಮುಷ್ಕರ ಹೂಡುತ್ತಿದ್ದಾರೆ. ಮನೆ ಮುಂದೆ ರಾಶಿ ಹಾಕಿರುವ ಕಸಗಳನ್ನು ತೆಗೆಯದೆ ಪಾಲಿಕೆಯ ಮೂಗುದಾರವೇ ತಮ್ಮಲ್ಲಿ ಇರುವಂತೆ ವರ್ತಿಸುತ್ತಾರೆ. ಈ ಬಗ್ಗೆ ಬಲ್ಲವರಲ್ಲಿ ಕೇಳಿದರೆ, ಪಾಲಿಕೆಯವರೇ ಮಾಡಿಕೊಂಡ ಎಡವಟ್ಟು ಇದಕ್ಕೆ ಕಾರಣ ಅನ್ನೋದನ್ನು ಹೇಳುತ್ತಾರೆ.
ಆಂಟನಿ ವೇಸ್ಟ್ ಮ್ಯಾನೇಜ್ಮೆಂಟ್ ಕಂಪನಿಗೆ 2014ರಲ್ಲಿ ಏಳು ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಆಗ ಪರಿಸರ ಇಂಜಿನಿಯರ್ ಆಗಿದ್ದ ಮಂಜುನಾಥ್ ಶೆಟ್ಟಿ ಮತ್ತು ಆಗ ಇದ್ದ ಕಾಂಗ್ರೆಸ್ ಆಡಳಿತ (ಬಿಜೆಪಿಯವರ ಸಹಕಾರವೂ ಇದೆ) ಗ್ಲೋಬಲ್ ಟೆಂಡರ್ ಕರೆದು ಮುಂಬೈ ಮೂಲದ ಕಂಪನಿಗೆ ಗುತ್ತಿಗೆ ನೀಡಿದ್ದರು. ಅದಕ್ಕಾಗಿ ಆರು ಕೋಟಿ ರೂಪಾಯಿ ಡಿಪಾಸಿಟ್ ಪಡೆದು ತಿಂಗಳಿಗೆ ನಾಲ್ಕು ಕೋಟಿ ರೂ. ಪಾಲಿಕೆಯಿಂದ ನೀಡಲು ಒಪ್ಪಂದ ಮಾಡಿಕೊಂಡಿದ್ದರು.
ನಿಜಕ್ಕಾದರೆ, ಪಾಲಿಕೆಯವರು ಕೆಲಸ ಸರಿಯಾಗಿ ಮಾಡದಿದ್ದರೆ ತಿಂಗಳ ಶುಲ್ಕವನ್ನು ನೀಡುವುದಿಲ್ಲ ಎಂಬ ಷರತ್ತು ವಿಧಿಸಬೇಕಿತ್ತು. ಆದರೆ, ಪಾಲಿಕೆಯಲ್ಲಿದ್ದ ಆಗಿನ ಆಡಳಿತದ ಉಸ್ತುವಾರಿಗಳು ಮತ್ತು ಅಧಿಕಾರಿಗಳು ಸೇರಿ ಕಂಪನಿಯ ದಾಳಕ್ಕೆ ಮಣಿದು ಅದಕ್ಕೆ ಬೇಕಾದ ರೀತಿ ಷರತ್ತುಗಳನ್ನು ಬರೆದು ಸಹಿ ಹಾಕಿದ್ದರು ಎನ್ನಲಾಗುತ್ತಿದೆ. ಆಂಟನಿಯವರು ಸರಿಯಾಗಿ ಕಸ ಎತ್ತದಿದ್ದರೂ, ತಿಂಗಳ ಶುಲ್ಕವನ್ನು ಕೊಡಲೇಬೇಕೆಂಬ ಷರತ್ತಿಗೆ ಒಪ್ಪಿಗೆ ಬರೆದಿದ್ದರು ಅನ್ನೋ ಮಾತನ್ನು ಹೇಳುತ್ತಿದ್ದಾರೆ.
ಮುಂಬೈನಲ್ಲಿ ಡಂಪಿಂಗ್ ಯಾರ್ಡ್ ನಲ್ಲಿ ತ್ಯಾಜ್ಯದಿಂದ ಗೊಬ್ಬರ ತಯಾರಿಸಲು ಸಾವಿರಾರು ಕೋಟಿಯ ಗುತ್ತಿಗೆ ಪಡೆದಿರುವ ಆಂಟನಿ ವೇಸ್ಟ್ ಮ್ಯಾನೇಜ್ಮೆಂಟ್ ಕಂಪನಿ ಮೂಲತಃ ಕೇರಳ ಮೂಲದ ಕ್ರಿಸ್ತಿಯನ್ನರದ್ದು. ಮಂಗಳೂರಿನಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಗುತ್ತಿಗೆ ಪಡೆದುಕೊಳ್ಳುವುದಕ್ಕೂ ಹಿಂದಿನಿಂದ ದೊಡ್ಡ ಲಾಬಿ ನಡೆದಿತ್ತು. ರಾಜ್ಯದ ಬೇರೆ ಯಾವುದೇ ಪಾಲಿಕೆಯ ಆಡಳಿತ ಗ್ಲೋಬಲ್ ಟೆಂಡರ್ ಕರೆಯಲು ನಿರಾಕರಿಸಿದ್ದರೂ ಮಂಗಳೂರಿನಲ್ಲಿ ಮಾತ್ರ ಈ ರೀತಿಯ ಟೆಂಡರ್ ಕರೆದು ಆಂಟನಿಯವರನ್ನು ಮಾತ್ರ ಕರೆಸಿ, ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ನೀಡಿದ್ದರ ಜೊತೆಗೆ ತಾವೇ ಕುತ್ತಿಗೆ ಹಿಡಿದುಕೊಳ್ಳುವ ಕಾರ್ಯವನ್ನೂ ಪಾಲಿಕೆಯವರು ಅಂದು ಮಾಡಿದ್ದರು. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆಯ ರೀತಿ ಅದಕ್ಕಾಗಿ ಗಿಂಬಳವನ್ನೂ ಪಡೆದಿದ್ದಾರೆ.
ಈ ಕಂಡಿಶನ್ ಪ್ರಕಾರ, ಆಯಾ ಸಂದರ್ಭದಲ್ಲಿ ಹೆಚ್ಚುತ್ತಿರುವ ಡೀಸೆಲ್ ದರ, ಲೇಬರ್ ಚಾರ್ಜ್, ಇಎಸ್ಐ, ಪಿಎಫ್ ಖರ್ಚು ಎಂದು ಎಕ್ಸ್ ಕಲೆಕ್ಷನ್ ಹೆಸರಲ್ಲಿ ಪಾಲಿಕೆಯಿಂದ ತಿಂಗಳಿಗೆ ಹೆಚ್ಚುವರಿಯಾಗಿ ಇಂತಿಷ್ಟು ಎಂದು ಆಂಟನಿ ಕಂಪನಿಗೆ ನೀಡುವುದಕ್ಕೂ ಒಪ್ಪಂದ ಆಗಿದೆ. ಇದೇ ಮೊತ್ತ ಈಗ 75 ಕೋಟಿ ಆಗಿದ್ದು, ಅದನ್ನು ನೀಡಬೇಕೆಂದು ಈಗಿನ ಪಾಲಿಕೆಯ ಆಡಳಿತಕ್ಕೆ ಒತ್ತಡ ಹೇರಲಾಗುತ್ತಿದೆ. ಅದಕ್ಕಾಗಿ ನೌಕರರ ಮೂಲಕ ಕೆಲಸ ಮಾಡಿಸದೆ, ಮುಷ್ಕರ ಹೂಡಿಸುವ ತಂತ್ರ ಹೆಣೆಯುತ್ತಿದೆ ಎನ್ನುವ ಅನುಮಾನ ಕೇಳಿಬಂದಿದೆ.
ಇಷ್ಟೊಂದು ಮೊತ್ತ ಕೊಡುವುದಕ್ಕೆ ಸದ್ಯ ಪಾಲಿಕೆಯ ಬಳಿ ಹಣ ಇಲ್ವಂತೆ. ಇದಕ್ಕಾಗಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿರುವ ಹಣವನ್ನು ಕೊಟ್ಟು ಡೈವರ್ಟ್ ಮಾಡುವ ಯೋಜನೆಯೂ ಈಗಿನ ಬಿಜೆಪಿ ಆಡಳಿತದ್ದು ಇದೆಯಂತೆ. ಜನರ ದುಡ್ಡು ಯಾರಿಗೆ ಹೋದರೇನು ಎಂಬ ಹುಂಬ ಚಿಂತನೆಯೋ ಏನೋ.. ವರ್ಷಕ್ಕೆ 40-50 ಕೋಟಿ ಕೊಟ್ಟು ಕಸ ಎತ್ತಿಸುವ ಈ ವಹಿವಾಟಿನಲ್ಲಿ ಎಷ್ಟೊಂದು ಕುಳಗಳು ಕೈಯಾಡಿಸಿದೆಯೋ ಏನೋ..?
ಈ ಆಂಟನಿ ವೇಸ್ಟ್ ಕಂಪನಿ ಬರುವುದಕ್ಕೂ ಮುನ್ನ ತಿಂಗಳಿಗೆ ಕೇವಲ 90 ಲಕ್ಷದಲ್ಲಿ ಎಲ್ಲವೂ ಆಗುತ್ತಿತ್ತಂತೆ. ಆಯಾ ಭಾಗದಲ್ಲಿ ಕೆಲವರಿಗೆ ಕಾಂಟ್ರಾಕ್ಟ್ ಕೊಟ್ಟು ಇಲ್ಲಿನವರಿಗೇ ಅದರ ಲಾಭವೂ ಸಿಗುತ್ತಿತ್ತು. ಆದರೆ, ದೊಡ್ಡ ಕಂಪನಿಗೆ ಗುತ್ತಿಗೆ ಕೊಟ್ಟು ಜನರ ದುಡ್ಡನ್ನು ದೊಡ್ಡ ಮಟ್ಟಿನಲ್ಲಿ ಬಾಚಲು ಪಾಲಿಕೆಯ ಆಡಳಿತ ಯೋಚನೆ ಮಾಡಿದ್ದೇ ಗ್ಲೋಬಲ್ ಟೆಂಡರ್ !
Mangalore antony waste Civic workers face critical problems by mcc
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 02:44 pm
Mangalore Correspondent
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
Naxal Vikram Gowda, Murdeshwar, Mangalore: ಪೊ...
24-11-24 03:21 pm
Mangalore, Someshwara Suicide; ಸೋಮೇಶ್ವರ ರುದ್ರ...
24-11-24 01:18 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm