ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ ಗೆ ಅಣಕು ಲಸಿಕೆ 

08-01-21 08:38 pm       Mangaluru Correspondent   ಕರಾವಳಿ

ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲೂ ಅಣಕು ಲಸಿಕೆ ನೀಡುವ ಪ್ರಾತ್ಯಕ್ಷಿಕೆ ನಡೆಸಲಾಗಿದೆ ಎಂದು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮೇಜರ್ ಡಾ. ಶಿವಕುಮಾರ್ ಹಿರೇಮಠ ತಿಳಿಸಿದರು. 

ಉಳ್ಳಾಲ, ಜ.8: ದೇಶಾದ್ಯಂತ ಕೊರೊನಾಕ್ಕೆ ಲಸಿಕೆ ನೀಡುವ ರಿಹರ್ಸಲ್ ನಡೆಯುತ್ತಿದೆ. ಕರ್ನಾಟಕ ಸರಕಾರದಿಂದ ಬಿಡುಗಡೆ ಮಾಡಲಾದ ಕೋವಿಡ್ ಆ್ಯಪ್‍ನಲ್ಲಿ ದಾಖಲಿಸಿರುವ ಕೊರೊನಾ ವಾರಿಯರ್ಸ್ ಗೆ ಸರಕಾರದ ಯೋಜನೆಯಂತೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲೂ ಅಣಕು ಲಸಿಕೆ ನೀಡುವ ಪ್ರಾತ್ಯಕ್ಷಿಕೆ ನಡೆಸಲಾಗಿದೆ ಎಂದು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮೇಜರ್ ಡಾ. ಶಿವಕುಮಾರ್ ಹಿರೇಮಠ ತಿಳಿಸಿದರು. 

ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಕೋವಿಡ್ 19 ವ್ಯಾಕ್ಸಿನ್ ಡ್ರೈ ರನ್ ಕಾರ್ಯಕ್ರಮದಲ್ಲಿ ಆಯ್ದ ಕೊರೊನಾ ವಾರಿಯರ್ಸ್ ಗೆ ಅಣಕು ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಮೇಲುಸ್ತುವಾರಿ ವಹಿಸಿ ಮಾತನಾಡಿದರು. 

ಲಸಿಕೆ ಕೊಡುವುದು, ಲಸಿಕೆ ಹಾಕುವುದು ಹಾಗೂ ತೆಗೆದುಕೊಳ್ಳುವ ಹಂತದಲ್ಲಿ ತ್ರಿ ರೂಂ ಟೆಕ್ನಿಕ್ ಅನುಸರಿಸಲಾಗುತ್ತಿದೆ. ಸರಕಾರ ವಿಧಿಸಿರುವ ನಿಯಮದಂತೆ ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಹಾಗೂ ಮುಂಜಾಗ್ರತೆ ಕ್ರಮ ವಹಿಸಿದ್ದೇವೆ. ಸರಕಾರದ ಸೂಚನೆಯಂತೆ 25 ಜನರನ್ನು ನೋಂದಾಯಿಸಿ ಪ್ರಾಯೋಗಿಕವಾಗಿ ಅಣಕು ಲಸಿಕೆ ನೀಡಲಾಗಿದ್ದು, ಈ ವೇಳೆ ಸಂಬಂಧಪಟ್ಟ ದಾಖಲೆಗಳ ಪರಿಶೀಲನೆಯನ್ನು ನಡೆಸಲಾಗಿದೆ ಎಂದು ಹೇಳಿದರು. 

ಕ್ಷೇಮ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ನಂಜೇಶ್, ಪ್ರಾಧ್ಯಾಪಕಿ ಡಾ. ಅಂಕಿತಾ , ಕ್ಷೇಮ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಮಂತ್ ಶೆಟ್ಟಿ, ಮತ್ತು ನರ್ಸಿಂಗ್‍ ವಿಭಾಗದ ಸಿಬಂದಿಗಳು ಉಪಸ್ಥಿತರಿದ್ದರು.

A dry run for vaccination against COVID-19 was held at KS Hedge Hospital in Mangalore.