ಬೆಂಗಳೂರು ಗಲಭೆಗೆ ಪೊಲೀಸರೇ ನೇರ ಕಾರಣ ; ಎಸ್ ಡಿ ಪಿ ಐ 

12-08-20 10:02 am       Bangalore Correspondent   ಕರಾವಳಿ

ಬೆಂಗಳೂರು ಗಲಭೆಗೆ ಸ್ಥಳೀಯ ಪೊಲೀಸರ ನಿರ್ಲಕ್ಷ್ಯವೇ ಕಾರಣ ಕಾರಣವೆಂದು ಎಸ್ ಡಿ ಪಿ ಐ ಆರೋಪಿಸಿದೆ. ಮಾಮೂಲಿಯಂತೆ ಎಸ್ ಡಿ ಪಿ ಐಯನ್ನು ಗಲಭೆಗೆ ಎಳೆದು ತರುವ ಪ್ರಯತ್ನ ನಡೆದಿದೆ.

ಮಂಗಳೂರು, ಆಗಸ್ಟ್ 12: ಬೆಂಗಳೂರು ಗಲಭೆಗೆ ಸ್ಥಳೀಯ ಪೊಲೀಸರ ನಿರ್ಲಕ್ಷ್ಯವೇ ಕಾರಣ ಕಾರಣವೆಂದು ಎಸ್ ಡಿ ಪಿ ಐ ಆರೋಪಿಸಿದೆ. ಬೆಂಗಳೂರು ಗಲಭೆ ಕುರಿತು ಪ್ರತಿಕ್ರಿಯಿಸಿರುವ ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಇಲ್ಯಾಸ್ ಮೊಹಮ್ಮದ್ ತುಂಬೆ ಗಲಭೆಗೆ ಪೊಲೀಸರ ಮೇಲೆ ಆರೋಪ ಮಾಡಿದ್ದಾರೆ.

ನವೀನ್ ಎಂಬಾತ ಪ್ರವಾದಿ ಹಾಗೂ ಇಸ್ಲಾಂ ಧರ್ಮದ ಬಗ್ಗೆ ಫೇಸ್ ಬುಕ್ ನಲ್ಲಿ  ಅವಹೇಳನ ಮಾಡಿದ್ದ.  ಈ ಬಗ್ಗೆ ಸ್ಥಳೀಯ ಯುವಕರು ಪೊಲೀಸ್ ಠಾಣೆಗೆ ದೂರು ಕೊಟ್ರೂ ಪೊಲೀಸರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ನವೀನ್, ಶಾಸಕ ಅಖಂಡ ಶ್ರೀನಿವಾಸ್ ರ ಸೋದರ ಅಳಿಯನಾಗಿರೋದ್ರಿಂದ ಪೊಲೀಸರು ಕ್ರಮ ಕೈಗೊಂಡಿಲ್ಲ. ಈ ಪರಿಣಾಮ ಮೊದಲೇ ಆಕ್ರೋಷದಿಂದ ಇದ್ದ ಜನ ಪೊಲೀಸರ ನಿರ್ಲಕ್ಷ್ಯದಿಂದ ರೊಚ್ಚಿಗೆದ್ದಿದ್ದಾರೆ. ಇದೇ ಘರ್ಷಣೆಗೆ ಕಾರಣ ಎಂದು ಅವರು ಆರೋಪಿಸಿದರು.

ಈ ಅಹಿತಕರ ಘಟನೆಗೆ ಹಾಗೂ ಮೂರು ಜೀವ ಬಲಿಯಾಗಲು ಪೊಲೀಸರ ನಿರ್ಲಕ್ಷ್ಯ ಕಾರಣ ಎಂದು ಕಿಡಿಕಾರಿದ ಅವರು ಘಟನೆಗೆ ನವೀನ್ ಎಂಬಾತನ ಕೋಮು ಪ್ರಚೋದನಾ ಫೇಸ್ ಬುಕ್ ಪೋಸ್ಟ್  ಕಾರಣ ಎಂದು ಅವರು ದೂರಿದರು.

ಎಸ್ ಡಿ ಪಿ ಐ ಮುಖಂಡರು ಪೊಲೀಸರ ಜೊತೆ ಸೇರಿ ಜನರನ್ನು ಸಮಾಧಾನಪಡಿಸಿದ್ದಾರೆ. ಆದರೆ ಗಲಭೆ ನಿಯಂತ್ರಿಸಲು ಬಂದ ಮುಝಮಿಲ್ ಪಾಷರನ್ನು ಪೊಲೀಸರು ಬಂಧಿಸಿದ್ದಾರೆ.ಇದು ಪೊಲೀಸರ ಹಾಗೂ ಸರ್ಕಾರದ ವೈಫಲ್ಯವನ್ನು ಮರೆಮಾಚಲು ಯತ್ನ ಎಂದು ಅವರು ಆರೋಪಿಸಿದರು.

ಮಾಮೂಲಿಯಂತೆ ಎಸ್ ಡಿ ಪಿ ಐಯನ್ನು ಗಲಭೆಗೆ ಎಳೆದು ತರುವ ಪ್ರಯತ್ನ ನಡೆದಿದೆ. ಜನರು ಯಾರೂ ಅಪಪ್ರಚಾರವನ್ನು ಗಣನೆಗೆ ತೆಗೆಯಬಾರದು. ಎಸ್ ಡಿ ಪಿ ಐ  ಯಾವುತ್ತೂ ನ್ಯಾಯ,ನೀತಿ,ಅಭಿವೃದ್ಧಿ ಪರ ಇರುತ್ತದೆ ಎಂದು ಅವರು ಹೇಳಿದರು.

Video: