ಬ್ರೇಕಿಂಗ್ ನ್ಯೂಸ್
09-01-21 04:50 pm Mangalore Correspondent ಕರಾವಳಿ
ಮಂಗಳೂರು, ಜ.9: ಸಾಮಾನ್ಯವಾಗಿ ಮೀನುಗಾರಿಕಾ ಬೋಟ್ ಗಳನ್ನು ರಿಪೇರಿ ಮಾಡಲು ನೀರಿನಿಂದ ಮೇಲಕ್ಕೆ ಎಳೆದು ತರಲೇಬೇಕು. ಬೋಟ್ ಅಡಿಭಾಗದಲ್ಲಿ ತೊಂದರೆಗಳಾದರೆ ನೀರಿನಲ್ಲಿ ಮುಳುಗಿ ಸರಿಪಡಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈಗ ಅಂಥದ್ದೊಂದು ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಮಂಗಳೂರಿನಲ್ಲಿ ಮೊದಲ ಬಾರಿಗೆ ಅಂಡರ್ ವಾಟರ್ ಗ್ಯಾರೇಜ್ ಒಂದನ್ನು ಕಾರ್ಯರೂಪಕ್ಕೆ ತರಲಾಗಿದೆ.
ಮೀನುಗಾರಿಕಾ ಬೋಟ್ ಅಡಿಭಾಗದಲ್ಲಿ ಹೆಚ್ಚಾಗಿ ಕಪ್ಪೆ ಚಿಪ್ಪುಗಳು ಮುತ್ತಿಕೊಂಡಿರುತ್ತವೆ. ಅಲ್ಲಿನ ಲೋಹದ ಪ್ರೊಪೆಲ್ಲರ್ ಮತ್ತು ಅಡಿಭಾಗದಲ್ಲಿರುವ ಪದರಕ್ಕೆ ಚಿಪ್ಪುಗಳು ಅಂಟಿಕೊಂಡು ನಿಂತರೆ, ಸಮುದ್ರ ನೀರಿನಲ್ಲಿ ಬೋಟ್ ಸಾಗುವುದಕ್ಕೆ ಅಡ್ಡಿಯಾಗುತ್ತವೆ. ಬೋಟಿನ ವೇಗಕ್ಕೆ ತಡೆಯಾಗಿ, ಹೆಚ್ಚು ಡೀಸೆಲ್ ಖರ್ಚಾಗುತ್ತದೆ. ಅದಲ್ಲದೆ, ಅಡಿಭಾಗದಲ್ಲಿ ಪ್ರೊಪೆಲ್ಲರ್ ಅಥವಾ ಇನ್ನಾವುದೇ ತಾಂತ್ರಿಕ ತೊಂದರೆಗಳು ಎದುರಾದರೆ, ಸುಲಭದಲ್ಲಿ ಸರಿಪಡಿಸಲು ಸಾಧ್ಯವಾಗುತ್ತಿರಲಿಲ್ಲ. ಇಂಥ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಸರಿಪಡಿಸುವ ತಂತ್ರಜ್ಞರು ಬೇಕಾಗುತ್ತದೆ. ಆದರೆ, ಈಗ ಅಸ್ತಿತ್ವಕ್ಕೆ ಬಂದಿರುವ ಗ್ಯಾರೇಜ್ ನಲ್ಲಿ ಸ್ಕೂಬಾ ಡೈವರ್ ಗಳ ರೀತಿ ನೀರಿನಲ್ಲಿ ಮುಳುಗಿಕೊಂಡೇ ಬೋಟ್ ಗಳನ್ನು ಸರಿಪಡಿಸಲಾಗುತ್ತದೆ.
ಮಂಗಳೂರಿನ ಮೀನುಗಾರಿಕಾ ಉದ್ಯಮಿ ರಾಜರತ್ನ ಸನಿಲ್, ಬೋಟ್ ಮಾಲಕರ ಸಂಕಷ್ಟವನ್ನು ಮನಗಂಡೇ ಹೊಸ ಮಾದರಿಯ ತಂತ್ರಜ್ಞಾನವನ್ನು ಮಂಗಳೂರಿಗೆ ತಂದಿದ್ದಾರೆ. ಅದಕ್ಕಾಗಿ ಇಬ್ಬರು ಸಿಬಂದಿಯನ್ನು ನೇಮಕ ಮಾಡಿದ್ದಾರೆ. ಉಸಿರಾಟಕ್ಕೆ ಆಕ್ಸಿಜನ್ ಸಿಲಿಂಡರ್ ಮತ್ತು ದೇಹ ಮುಚ್ಚುವ ಜಾಕೆಟ್ ಅನ್ನು ರೆಡಿ ಮಾಡಿದ್ದಾರೆ. ಇದನ್ನು ಧರಿಸಿಕೊಂಡು ಸಿಬಂದಿ, ಬೋಟ್ ನೀರಿನಲ್ಲಿ ಇರುವಾಗಲೇ ಅಡಿಭಾಗಕ್ಕೆ ತೆರಳಿ ತೊಂದರೆಗಳನ್ನು ಸರಿಪಡಿಸುತ್ತಾರೆ. ಕೇವಲ ಕಪ್ಪೆ ಚಿಪ್ಪುಗಳು ಅಂಟಿಕೊಂಡು ತೊಂದರೆಗಳಾಗಿದ್ದರೆ, ಅದನ್ನು ಮೂರು ಗಂಟೆಯಲ್ಲಿ ತೆರವು ಮಾಡುತ್ತಾರೆ. ಇತರೇ ತಾಂತ್ರಿಕ ತೊಂದರೆಗಳಿದ್ದಲ್ಲಿ ತಂತ್ರಜ್ಞಾನ ಅನುಸರಿಸಿಕೊಂಡು ಸಮಯ ಬೇಕಾಗುತ್ತದೆ. ಒಂದು ಸಲ ಬೋಟ್ ಅಡಿಭಾಗವನ್ನು ಪೂರ್ತಿ ಕ್ಲೀನ್ ಮಾಡುವುದಕ್ಕೆ 20 ಸಾವಿರ ರೂ. ಚಾರ್ಜ್ ಮಾಡುತ್ತೇವೆ ಎನ್ನುತ್ತಾರೆ, ರಾಜರತ್ನ ಸನಿಲ್.
ದೊಡ್ಡ ಬೋಟ್ ಗಳನ್ನು ನೀರಿನಿಂದ ಮೇಲಕ್ಕೆಳೆದು ಸರಿಪಡಿಸಬೇಕಿದ್ದರೆ, ಒಂದೂವರೆ ಲಕ್ಷ ಖರ್ಚು ತಗಲುತ್ತದೆ. ಕಾರ್ಮಿಕರು ಮತ್ತು ದೊಡ್ಡ ಬೋಟ್ ಗಳನ್ನು ಮೇಲಕ್ಕೆಳೆಯುವ ಕ್ರೇನ್ ಇನ್ನಿತರ ಕಾರಣಕ್ಕೆ ಭಾರೀ ಖರ್ಚು ಬೇಕಾಗುವುದರಿಂದ ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ಈ ರೀತಿಯ ಕೆಲಸ ಮಾಡುತ್ತಾರೆ. ಆದರೆ, ಈಗ ಸ್ಕೂಬಾ ಡೈವರ್ ಗಳು ಬಂದ ಬಳಿಕ ಸಣ್ಣಮಟ್ಟಿನ ತೊಂದರೆಗಳಿಗೆ ಬೋಟ್ ಗಳನ್ನು ಮೇಲಕ್ಕೆಳೆಯುವ ಅಗತ್ಯ ಬೀಳಲ್ಲ.
ಆರು ತಿಂಗಳ ತರಬೇತಿ ಅಗತ್ಯ
ಸಾಮಾನ್ಯ ಈಜುಗಾರರಿಗೆ ಈ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ನೀರಿನ ಅಡಿಭಾಗದಲ್ಲಿ ಒಂದೂವರೆ ಗಂಟೆ ಕಾಲ ನಿಂತು ಕೆಲಸ ಮಾಡಲು ಸೂಕ್ತ ತರಬೇತಿ ಬೇಕಾಗುತ್ತದೆ. ನುರಿತ ತಂತ್ರಜ್ಞರಿಂದ ಸ್ಕೂಬಾ ಡೈವಿಂಗ್ ಟ್ರೈನಿಂಗ್ ಮತ್ತು ಬೋಟ್ ಅಡಿಭಾಗದಲ್ಲಿ ನೀರಿನಲ್ಲೇ ಇದ್ದುಕೊಂಡು ರಿಪೇರಿ ಮಾಡಲು ತರಬೇತಿಯನ್ನು ನೀಡಲಾಗುತ್ತದೆ. ಸ್ವತಃ ರಾಜರತ್ನ ಸನಿಲ್ ಕೂಡ ಈ ತರಬೇತಿಯನ್ನು ಪಡೆದಿದ್ದು, ತನ್ನ ಬಳಗದ ಐವರಿಗೆ ತರಬೇತಿ ನೀಡಿದ್ದಾರೆ. ಈಗ ಇಬ್ಬರು ಸಿಬಂದಿಯನ್ನು ರೆಡಿ ಮಾಡಿ, ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ಬೋಟ್ ಗ್ಯಾರೇಜ್ ಆರಂಭಿಸಿದ್ದಾರೆ. ಅಂದಹಾಗೆ, ಬೋಟ್ ನೀರಿನಲ್ಲಿ ನಿಂತಿರುವಾಗಲೇ ಅಡಿಭಾಗದಲ್ಲಿ ಕೆಲಸ ಮಾಡುವ ಬೋಟ್ ಗ್ಯಾರೇಜ್ ಕರಾವಳಿಯಲ್ಲಿ ಮೊದಲ ಬಾರಿಗೆ ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಅಸ್ತಿತ್ವಕ್ಕೆ ಬಂದಿದೆ.
Trained Scooba Divers are Ready to Repair Fishing Boats in Underwater Garage at Mangalore Fish Port
01-09-25 05:03 pm
HK News Desk
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
R. Ashoka: ಸೆ.01 ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಎ...
31-08-25 07:17 pm
Siddaramaiah, Banumustak: ನಾಡಹಬ್ಬ ದಸರಾ ಎಲ್ಲರಿ...
31-08-25 05:35 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 05:05 pm
Mangalore Correspondent
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
Udupi, Diksha Sets New World Record, Bharatan...
31-08-25 12:49 pm
01-09-25 03:07 pm
Udupi Correspondent
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm