ಪಚ್ಚನಾಡಿ ಬಳಿ ಕಾಗೆ ಸಾವು ; ಹಕ್ಕಿಜ್ವರದ ಬಗ್ಗೆ ಜನರಲ್ಲಿ ಆತಂಕ

11-01-21 12:32 pm       Mangalore Correspondent   ಕರಾವಳಿ

ಮಂಗಳೂರು ಹೊರವಲಯದ ವಾಮಂಜೂರಿನ ಪಚ್ಚನಾಡಿ ಸಮೀಪ ಮೂರು ಕಾಗೆಗಳು ಸತ್ತು ಬಿದ್ದಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. 

ಮಂಗಳೂರು, ಜ.11 : ದ.ಕ‌. ಜಿಲ್ಲೆಯಲ್ಲಿ ಹಕ್ಕಿ ಜ್ವರದ ಆತಂಕ ಹೆಚ್ಚುತ್ತಿರುವ ಸಂದರ್ಭದಲ್ಲೇ ಮಂಗಳೂರು ಹೊರವಲಯದ ವಾಮಂಜೂರಿನ ಪಚ್ಚನಾಡಿ ಸಮೀಪ ಮೂರು ಕಾಗೆಗಳು ಸತ್ತು ಬಿದ್ದಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. 

ಪಚ್ಚನಾಡಿ ಡಂಪಿಂಗ್ ಯಾರ್ಡ್ ಸಮೀಪ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ಮೂರು ಕಾಗೆಗಳು ಸತ್ತು ಬಿದ್ದಿರುವುದು ಸೋಮವಾರ ಬೆಳಗ್ಗೆ ಕಂಡುಬಂದಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಕಾಗೆಗಳ ಕಳೇಬರವನ್ನು ಸಂಗ್ರಹಿಸಿದ್ದಾರೆ. 

ವಾರದ ಹಿಂದೆ ಮಂಜನಾಡಿ ಬಳಿ ಆರು ಕಾಗೆಗಳು ಸತ್ತಿರುವುದು ಕಂಡುಬಂದಿತ್ತು.‌ ಆಬಳಿಕ ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿಯ ನಿಡಿಗಲ್ ಎಂಬಲ್ಲಿ ಎರಡು ರಣಹದ್ದುಗಳು ಸತ್ತಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಕಳೇಬರ ಸಂಗ್ರಹಿಸಿ, ಸ್ಥಳೀಯರಲ್ಲಿ ಜಾಗೃತಿ ಮೂಡಿಸಿದ್ದಾರೆ.