ಬ್ರೇಕಿಂಗ್ ನ್ಯೂಸ್
09-11-26 06:57 pm HK News Staffer ಕರಾವಳಿ
ಮಂಗಳೂರು, ನ.9: ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿ ಇತ್ತೀಚೆಗೆ ಜಾಮೀನು ಪಡೆದಿದ್ದ ನಗರದ ವೆಲೆನ್ಸಿಯಾ ಸೈಂಟ್ ವಿನ್ಸೆಂಟ್ ಫೆರೇರಾ ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೋ ವಿರುದ್ದ ಎರಡನೇ ದೂರು ದಾಖಲಾಗಿದ್ದು ಮಹಿಳಾ ಠಾಣೆಯಲ್ಲಿ ಮತ್ತೊಬ್ಬ ಬಾಲಕನ ಕಡೆಯಿಂದ ದೂರು ದಾಖಲಾಗಿದೆ.
ಪೆರ್ಮನ್ನೂರು ಗ್ರಾಮದ ಸೈಂಟ್ ಸೆಬಾಸ್ಟಿಯನ್ ಚರ್ಚ್ ನಲ್ಲಿ ಪ್ರತಿ ಆದಿತ್ಯವಾರ ಪ್ರಾರ್ಥನೆಗೆ ತೆರಳುತ್ತಿದ್ದ ಅಪ್ರಾಪ್ತ 13 ವರ್ಷದ ಬಾಲಕನ ಮೇಲೆ ಸಿಪ್ರಿಯನ್ ಪಿಂಟೋ (65) ಅವರು 2026ರ ಮೇ 13ರಂದು ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ನೀಡಿರುವ ದೂರಿನ ಆಧಾರದಲ್ಲಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅಕ್ರ 50/2026 ಕಲಂ 75(2) ಬಿಎನ್ಎಸ್ ಮತ್ತು ಕಲಂ 8, 12 ಫೋಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
ಈ ಹಿಂದೆ ಅಕ್ಟೋಬರ್ 15ರಂದು ಅಪ್ರಾಪ್ತ 14 ವರ್ಷದ ಹುಡುಗನಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅಕ್ರ 212/2026 ಕಲಂ 75(2) ಬಿಎನ್ಎಸ್ ಮತ್ತು ಕಲಂ 8, 12 ಫೋಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಾಗಿ ಪ್ರಸ್ತುತ ತನಿಖೆಯಲ್ಲಿದೆ. ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಅ.18ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅ.30ರ ವರೆಗೆ ನ್ಯಾಯಾಂಗ ಬಂಧನದಲ್ಲಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಮುಂದಿನ ತನಿಖೆಯ ಬಗ್ಗೆ ಕೇಂದ್ರ ಉಪ ವಿಭಾಗ ಎಸಿಪಿ ಅವರಿಗೆ ವಹಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಪೋಕ್ಸೋ ಕಾಯ್ದೆಯಡಿ ಆರೋಪಿಗೆ ಜಾಮೀನು ಆಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಖಂಡನೆ ವ್ಯಕ್ತವಾಗಿತ್ತು. ಪಾದ್ರಿ ಸಿಪ್ರಿಯನ್ ಪಿಂಟೋ ಈ ಹಿಂದೆ ಪೆರ್ಮನ್ನೂರು ಚರ್ಚ್ ನಲ್ಲಿದ್ದಾಗಲೂ ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಕೇಳಿಬಂದಿದೆ.
09-11-26 07:45 pm
HK News Staffer
ಒಂದು ಕೋಟಿಗೆ 1.30 ಕೋಟಿ ಆಫರ್ ! ಹಣ ದುಪ್ಪಟ್ಟು ಪ್ಲ...
08-11-26 10:24 pm
ತುಂಡು ತುಂಡಾಗಿ ಕತ್ತರಿಸುತ್ತಾರೆಂದು ಹೇಳಿಕೆ ; ಛಲವಾ...
07-11-26 09:34 pm
ವಿಧಾನ ಪರಿಷತ್ ಚುನಾವಣೆ ಸೋಲಿಗೆ ಸ್ಟಿಂಗ್ ಕಾರಣ ; 5...
03-11-26 09:48 pm
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲ...
03-11-26 01:01 pm
09-11-26 04:45 pm
HK News Staffer
ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ.. ಇಲ್ಲದಿದ್ದರೆ...
09-11-26 11:51 am
ಇಸ್ರೇಲ್ ಅಧಿಪತ್ಯ ಪಡೆಯಲು ನೆತನ್ಯಾಹು ಸೋಲು ; ಹೊಸ ಸ...
29-10-26 09:28 pm
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
09-11-26 06:57 pm
HK News Staffer
ವಿಗ್ರಹ ಮಾರಾಟ ಆರೋಪದ ಬೆನ್ನಲ್ಲೇ ತಲಕಾವೇರಿಯಲ್ಲಿ ಬಾ...
08-11-26 10:43 pm
ಬ್ರಿಟಿಷ್ ಕಾಲದ ಶತಮಾನ ಪೂರೈಸಿದ ಹಾಸ್ಟೆಲ್ ಕಟ್ಟಡ ನೆ...
08-11-26 10:13 pm
ಬ್ರಿಟಿಷ್ ಕಾಲದ ಶತಮಾನ ಪೂರೈಸಿದ ಹಾಸ್ಟೆಲ್ ಕಟ್ಟಡ ನೆ...
08-11-26 10:11 pm
ದೀಪಾವಳಿ ಸಂಭ್ರಮದಲ್ಲಿ ಪೌರ ಕಾರ್ಮಿಕರಿಗೆ ಆತಿಥ್ಯ ;...
08-11-26 09:38 pm
07-11-26 11:07 pm
HK News Desk
15 ದಿನಗಳಲ್ಲಿ ಏಳು ಕೊಲೆ ! ಚಿನ್ನಾಭರಣ ದೋಚಿ ಶವಗಳನ್...
07-11-26 10:39 am
Mangalorr Police, Arrest: ವಾಕಿಂಗ್ ಮಾಡುತ್ತಿದ್ದ...
06-11-26 08:08 pm
Naresh Bhat, Wife Murder: ಪತ್ನಿ ವಿಷ ಕುಡಿದು ಆತ...
06-11-26 05:01 pm
ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ ; ಪತ್ನಿ ಮೇಲಿನ ಸಿ...
06-11-26 10:55 am