ಕೊಣಾಜೆ: ಅಕ್ರಮ ಜಾನುವಾರು ಸಾಗಾಟ ಆರೋಪ, ವಾಹನ ತಡೆದ ಬಜರಂಗದಳ  

12-01-21 08:38 pm       Mangaluru Correspondant   ಕರಾವಳಿ

ಜಾನುವಾರು ಸಾಗಾಟದ ಈಚರ್ ವಾಹನವನ್ನು ಬಜರಂಗದಳದ ಕಾರ್ಯಕರ್ತರು ತಡೆದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ. 

ಉಳ್ಳಾಲ, ಜ.12: ಕೆ.ಸಿ. ರೋಡಿಂದ ಬಾಕ್ರಬೈಲಿಗೆ ಕಾನೂನು ಬಾಹಿರವಾಗಿ ಸಾಗಾಟ ನಡೆಸುತ್ತಿದ್ದಾರೆ ಎನ್ನಲಾದ ಜಾನುವಾರು ಸಾಗಾಟದ ಈಚರ್ ವಾಹನವನ್ನು ಬಜರಂಗದಳದ ಕಾರ್ಯಕರ್ತರು ತಡೆದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ. 

ಆರು ಹಸು, ಒಂದು ಕರುವನ್ನು ಕೆ.ಸಿ.ರೋಡಿನಿಂದ ಮುಡಿಪು ಕಡೆಗೆ ಸಾಗಿಸಲಾಗುತ್ತಿತ್ತು. ಮುಡಿಪುವಿನಲ್ಲಿ ಬಜರಂಗದಳದ ಕಾರ್ಯಕರ್ತರು ವಾಹನವನ್ನು ತಡೆದಿದ್ದು ಸ್ಥಳಕ್ಕೆ ಬಂದ ಕೊಣಾಜೆ ಪೊಲೀಸರು ಜಾನುವಾರು ವಾಹನವನ್ನು ವಶಕ್ಕೆ ಪಡೆದಿದ್ದಾರೆ. 

ಆದರೆ, ಜಾನುವಾರುಗಳನ್ನು ಕೆ.ಸಿ.ರೋಡ್ ನಿಂದ ಬಾಕ್ರಬೈಲು ಡಿಪೋಗೆ ಅನುಮತಿ ಪಡೆದೇ ಸಾಗಿಸಲಾಗುತ್ತಿದೆ ಎಂದು ಸಾಗಾಟಗಾರರು ಹೇಳಿದ್ದಾರೆ. ಜಾನುವಾರುಗಳನ್ನು ನಿಯಮ ಬಾಹಿರವಾಗಿ ಸಾಗಿಸಲಾಗುತ್ತಿತ್ತೆಂದು ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ.

ಕೊಣಾಜೆ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಜರಂಗದಳ ಕಾರ್ಯಕರ್ತರು ಠಾಣೆಯಲ್ಲಿ ಜಮಾಯಿಸಿದ್ದಾರೆ.

Kerala truck transporting cattle stopped by Bajrang dal activists at Konaje in Mangalore. The truck had authorised permission to carry cows to depo but yet the Bajrang dal activists opposed it. The Konje police have rushed to the spot.