ಅಂಗಾರ, ನಿರಾಣಿ, ಲಿಂಬಾವಳಿ ಸೇರಿ ಎಂಟು ಮಂದಿಗೆ ಸಂಪುಟ ಫಿಕ್ಸ್ !! ರಾಜಧಾನಿಗೆ ಬರುವಂತೆ ಸಿಎಂ ಕರೆ

12-01-21 08:52 pm       Dilip: Political Correspondent, Bengaluru   ಕರಾವಳಿ

ಕೊನೆಗೂ ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಕೈಹಾಕಿದ್ದಾರೆ. ನಾಳೆ ಮಧ್ಯಾಹ್ನ 3.30ಕ್ಕೆ ಏಳರಿಂದ ಎಂಟು ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದು ಫೈನಲ್ ಆಗಿದೆ. 

ಬೆಂಗಳೂರು, ಜ.12: ಕೊನೆಗೂ ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಕೈಹಾಕಿದ್ದಾರೆ. ನಾಳೆ ಮಧ್ಯಾಹ್ನ 3.30ಕ್ಕೆ ಏಳರಿಂದ ಎಂಟು ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದು ಫೈನಲ್ ಆಗಿದೆ. 

ಕರಾವಳಿಯ ಹಿರಿಯ ಶಾಸಕ ಎಸ್.ಅಂಗಾರ, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಸಿ.ಪಿ.ಯೋಗೀಶ್ವರ್, ಉಮೇಶ್ ಕತ್ತಿ ಅವರನ್ನು ಸ್ವತಃ ಸಿಎಂ ಯಡಿಯೂರಪ್ಪ ಕರೆ ಮಾಡಿ ನಾಳೆ ಬೆಂಗಳೂರಿಗೆ ಬರುವಂತೆ ಸೂಚನೆ ನೀಡಿದ್ದಾರೆ.‌ ಮಾಹಿತಿ ಪ್ರಕಾರ, ಐವರು ಮೂಲ ಬಿಜೆಪಿ ಶಾಸಕರಿಗೆ ಮತ್ತು ಮೂವರು ವಲಸಿಗ ಶಾಸಕರಿಗೆ ಸಚಿವ ಸ್ಥಾನ ನೀಡಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. 

ವಲಸಿಗರ ಪೈಕಿ ಎಂಟಿಬಿ ನಾಗರಾಜ್, ಆರ್.ಶಂಕರ್, ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡಲು ನಿರ್ಧಾರ ಆಗಿದೆ‌. ಆದರೆ, ಈಗ ಖಾಲಿ ಇರುವ ಸಚಿವ ಸ್ಥಾನ ಏಳು ಮಾತ್ರ ಆಗಿರುವುದರಿಂದ ಒಬ್ಬರು ಹಾಲಿ ಸಚಿವರನ್ನು ಸ್ಥಾನದಿಂದ ಕೈಬಿಡುತ್ತಾರೆಯೇ ಎನ್ನುವ ಅನುಮಾನ ಮೂಡಿದೆ. 

ಸಚಿವ ಸ್ಥಾನದಿಂದ ಕೈಬಿಡುವುದಾದ್ರೆ, ಶಶಿಕಲಾ ಜೊಲ್ಲೆ ಅಥವಾ ಅಬಕಾರಿ ಸಚಿವ ಆರ್.ನಾಗೇಶ್ ಅವರನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಂಗಳವಾರ ಸಂಜೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಏಳರಿಂದ ಎಂಟು ಮಂದಿ ಸಚಿವರಾಗಲಿದ್ದಾರೆ ಎಂದು ಹೇಳಿದ್ದಾರೆ. 

ಇದೆಲ್ಲ ಸಿಎಂ ಯಡಿಯೂರಪ್ಪ ಲೆಕ್ಕಾಚಾರವಾಗಿದ್ದು ನಾಳೆಯ ಹೊತ್ತಿಗೆ ಈ ಹೆಸರು ಬದಲಾದರೂ ಅಚ್ಚರಿ ಪಡಬೇಕಿಲ್ಲ. ಹೈಕಮಾಂಡ್ ಹೆಸರಲ್ಲಿ ಬೇರೆ ಕೆಲವರ ಸ್ಥಾನ ಬದಲಿಸಿ, ಸಂಪುಟ ಪುನಾರಚನೆಯೂ ಆಗುವ ಸಾಧ್ಯತೆ ಇದೆ. ಏನಿದ್ದರೂ, ಸಂಪುಟ ವಿಸ್ತರಣೆ ವಿಚಾರ ಕಳೆದ ಆರು ತಿಂಗಳಿಂದಲೂ ಚರ್ಚೆಯಲ್ಲಿತ್ತು. ಸಿಎಂ ಯಡಿಯೂರಪ್ಪ ವಿಸ್ತರಣೆಗೆ ಲಿಸ್ಟ್ ರೆಡಿ ಮಾಡಿಕೊಂಡರೂ, ಹೈಕಮಾಂಡ್ ಮಾತ್ರ ಅಸ್ತು ಎಂದಿರಲಿಲ್ಲ. ಈಗ ಕಡೆಗೂ ಕೇಂದ್ರ ಗೃಹ ಸಚಿವ ರಾಜ್ಯಕ್ಕೆ ಆಗಮಿಸುವ ವೇಳೆಗೆ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

Karnataka cabinet expansion 2021 post-fixed for Angara from Sullia, Murgesh Nirani, Arvind Limbavali, M. T. B. Nagaraj and four other leaders. List of new ministers to be inducted will be released by the evening said BSY.