ಬ್ರೇಕಿಂಗ್ ನ್ಯೂಸ್

AVBP protest, Mangalore University: ಏಕಾಏಕಿ ಶುಲ್ಕ ಏರಿಕೆ ; ಮಂಗಳೂರು ವಿವಿ ಆಡಳಿತ ಸೌಧಕ್ಕೆ ಮುತ್ತಿಗೆ- ಗಾಜಿನ ಬಾಗಿಲು ಪುಡಿ, ಸರ್ಕಾರದ ಹಣ ಬರ್ತಾ ಇಲ್ಲ, ಏನ್ಮಾಡ್ಲಿ ಎಂದ ಕುಲಪತಿಗೆ ವಿದ್ಯಾರ್ಥಿಗಳ ತರಾಟೆ, ನಿಮ್ಮ ಹೊರೆಯನ್ನು ವಿದ್ಯಾರ್ಥಿಗಳಿಗೆ ಹಾಕ್ತೀರಾ ಎಂದು ಆಕ್ರೋಶ    |    ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ್, ಡೀಸೆಲ್ ಬಿಡಿ, ಇಂಧನವೇ ಇಲ್ಲದೆ ಓಡಲಿದೆ ರೈಲು ! ಬರೀ ನೀರು ಬಳಸ್ಕೊಂಡೇ ಹೈಡ್ರೋಜನ್ ರೈಲು, ಅತಿ ಕಡಿಮೆ ವೆಚ್ಚ, ಪರಿಸರ ಸ್ನೇಹಿ !    |    Waqf row, Mangalore, CM Siddaramaiah; ವಕ್ಫ್ ಆಸ್ತಿ ಹೆಸರಲ್ಲಿ ಭೂ ಕಬಳಿಕೆಗೆ ಮುಖ್ಯ ಕಾರ್ಯದರ್ಶಿಯಿಂದ್ಲೇ ಆದೇಶ ; ಖಬರಸ್ತಾನಕ್ಕೂ ಸಾವಿರಾರು ಎಕ್ರೆ ಸರ್ಕಾರಿ ಭೂಮಿ ಅತಿಕ್ರಮಣಕ್ಕೆ ಗ್ರೀನ್ ಸಿಗ್ನಲ್, ‘ಗೊತ್ತಿಲ್ಲ, ನೋಟೀಸ್ ನೀಡಿಲ್ಲ’ ಎನ್ನುತ್ತಿದ್ದವರಿಗಿಲ್ಲಿದೆ ಸಾಕ್ಷ್ಯ!!    |   

ಸಂಪುಟಕ್ಕೆ ಸಿಗದ ಸ್ಥಾನ ; ಟ್ವಿಟರ್ ನಲ್ಲಿ ಅಸಮಾಧಾನ ತೋಡಿಕೊಂಡ ಕಾರ್ಕಳ ಸುನಿಲ್

13-01-21 01:16 pm       Mangaluru Correspondant   ಕರಾವಳಿ

ಸಿಎಂ ಯಡಿಯೂರಪ್ಪ ಸಂಪುಟಕ್ಕೆ ಸೇರುವ ಯಾದಿಯಲ್ಲಿದ್ದ ಕಾರ್ಕಳ ಶಾಸಕ ಸುನಿಲ್ ಕುಮಾರ್ ನಿರಾಸೆಗೊಂಡಿದ್ದಾರೆ.

ಮಂಗಳೂರು, ಜ.12: ಸಿಎಂ ಯಡಿಯೂರಪ್ಪ ಸಂಪುಟಕ್ಕೆ ಸೇರುವ ಯಾದಿಯಲ್ಲಿದ್ದ ಕಾರ್ಕಳ ಶಾಸಕ ಸುನಿಲ್ ಕುಮಾರ್ ನಿರಾಸೆಗೊಂಡಿದ್ದಾರೆ. ಸಂಪುಟ ಸೇರುವ ಏಳು ಮಂದಿಯ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷ ನಿಷ್ಠೆ, ಕ್ಷೇತ್ರದ ಅಭಿವೃದ್ಧಿ , ಹಿಂದುತ್ವ ನನ್ನ ಅಜೆಂಡಾ. ನನಗೆ ಅನ್ಯಮಾರ್ಗ ತಿಳಿದಿಲ್ಲ. ಜಾತಿ ರಾಜಾಕರಣದ ವೈಭವೀಕರಣ ತಿಳಿದಿಲ್ಲ. ಸ್ಥಾನಮಾನಕ್ಕೆ ಬ್ಲಾಕ್ ಮೇಲ್ ಮಾಡಿದವನಲ್ಲ. ಮುಂದೆಯೂ ಈ ಮಾರ್ಗ ಹಿಡಿಯುವುದಿಲ್ಲ ಎಂಬುದಾಗಿ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.

ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿದವರಿಗೆ ಸ್ಥಾನ ಸಿಕ್ಕಿದೆ. ಜಾತಿಯ ಕೋಟಾದಡಿ ಲಾಬಿ ಮಾಡಿದವರಿಗೂ ಸ್ಥಾನ ಲಭಿಸಿದೆ. ಹೀಗಾಗಿ ಆ ರೀತಿಯ ಲಾಬಿ ನಡೆಸಲು ಹೋಗಿಲ್ಲ ಎನ್ನುವ ರೀತಿ ಟ್ವೀಟ್ ಮಾಡಿದ್ದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಕಾರ್ಕಳದಲ್ಲಿ ಮೂರು ಬಾರಿ ಶಾಸಕರಾಗಿರುವ ಸುನಿಲ್ ಕುಮಾರ್, ಸುಳ್ಯದ ಅಂಗಾರ ಬಿಟ್ಟರೆ ಅತಿ ಹೆಚ್ಚು ಅನುಭವ ಇರುವ ಹಿರಿಯ ಶಾಸಕರಲ್ಲಿ ಒಬ್ಬರು. ಹೀಗಾಗಿ ಅಂಗಾರ ಅಥವಾ ಸುನಿಲ್ ಗೆ ಈ ಬಾರಿ ಸಚಿವ ಸ್ಥಾನ ಸಿಗಲಿದೆ ಎನ್ನಲಾಗುತ್ತಿತ್ತು. ಅಲ್ಲದೆ, ವಿಧಾನ ಪರಿಷತ್ ಸದಸ್ಯ, ಹಾಲಿ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕೈಬಿಟ್ಟು ಬಿಲ್ಲವ ಸಮುದಾಯದವರೇ ಆಗಿರುವ ಸುನಿಲ್ ಕುಮಾರ್ ಗೆ ಸ್ಥಾನ ಸಿಗಲಿದೆ ಎನ್ನುವ ಮಾಹಿತಿಗಳಿದ್ದವು. ಆದರೆ, ಕೊನೆಗಳಿಗೆಯಲ್ಲಿ ಕೋಟ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವ ಪ್ರಸ್ತಾಪ ಆಗಿಲ್ಲ. ಹೀಗಾಗಿ ಸುನಿಲ್ ಕುಮಾರ್ ಆಸೆಯೂ ಕೈಗೂಡಲಿಲ್ಲ.

ಸುನಿಲ್ ಕುಮಾರ್ ಸೇರಿದಂತೆ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಮೂಲ ಬಿಜೆಪಿಯ ಹಲವರಿಗೆ ನಿರಾಸೆಯಾಗಿದ್ದು, ಮುಂದಿನ ವಾರ ಸಭೆ ಸೇರಿ ಪಕ್ಷದ ಹಿರಿಯರನ್ನು ಭೇಟಿಯಾಗಲಿದ್ದಾರೆ ಎನ್ನುವ ಮಾಹಿತಿಗಳಿವೆ. 

Karnataka cabinet expansion Karkala MLA Sunil Kumar makes a disappointed tweet for not considering him.