ಬ್ರೇಕಿಂಗ್ ನ್ಯೂಸ್
13-01-21 03:46 pm Mangaluru Correspondent ಕರಾವಳಿ
ಕೊಣಾಜೆ, ಜ.13: ಅಕ್ರಮ ಮರಳು ಮಾಫಿಯಾ ಬಗ್ಗೆ ಮಾಹಿತಿ ಕೊಟ್ಟಿಲ್ಲ ಎಂದು ಅಮಾನತಾಗಿದ್ದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಗುಪ್ತಚರ ವಿಭಾಗದಲ್ಲಿದ್ದ ಅಶೋಕ್ ಕುಮಾರ್ ಅವರನ್ನು ಮತ್ತೆ ಅದೇ ಠಾಣೆಯಲ್ಲಿ ಮುಂದುವರಿಸಲಾಗಿದೆ.
ಮಂಗಳೂರು ಕಮಿಷನರ್ ವಿಕಾಸ್ ಕುಮಾರ್ ವರ್ಗಾವಣೆಗೊಂಡು ಇಲ್ಲಿಂದ ಹಿಂತಿರುಗುವ ಸಮಯದಲ್ಲೇ ಅಮಾನತು ರದ್ದುಪಡಿಸಿ ಆದೇಶ ಮಾಡಿದ್ದರು ಎನ್ನುವ ಮಾಹಿತಿ ತಿಳಿದುಬರುತ್ತಿದೆ. ಅಮಾನತಿನಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದ ನಿವೃತ್ತ ಯೋಧನೂ ಆಗಿರುವ ಅಶೋಕ್ ಕುಮಾರ್, ಅಮಾನತು ರದ್ದುಪಡಿಸುವಂತೆ ಕಮಿಷನರ್ ಮುಂದೆ ದುಂಬಾಲು ಬಿದ್ದಿದ್ದರು. ಅಲ್ಲದೆ ಉಳ್ಳಾಲದ ಬಿಜೆಪಿ ಮುಖಂಡರಿಂದ ಒತ್ತಡವನ್ನೂ ಹಾಕಿಸಿದ್ದರು ಎನ್ನಲಾಗುತ್ತಿದೆ. ಇದರಿಂದ ಪ್ರಕರಣದ ಬಗ್ಗೆ ಇಲಾಖಾ ತನಿಖೆ ಮುಂದುವರಿಸಿದ ಕಮಿಷನರ್ ವಿಕಾಸ್ ಕುಮಾರ್, ಸಸ್ಪೆನ್ಶನ್ ಅನ್ನು ರಿವೋಕ್ ಮಾಡಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಈ ಬಗ್ಗೆ ನಗರ ಪೊಲೀಸ್ ಉಪಾಯುಕ್ತ ಹರಿರಾಮ್ ಶಂಕರ್ ಅವರಲ್ಲಿ ಕೇಳಿದಾಗ, ಅಮಾನತು ರದ್ದು ಆಗಿದ್ದು ಹೌದು. ಹಾಗಂತ ತನಿಖೆ ರದ್ದು ಆಗಿಲ್ಲ. ಇಲಾಖಾ ತನಿಖೆ ಮುಂದುವರಿದಿದೆ. ಅಮಾನತು ಮಾಡುವುದು ಕೇವಲ ಸದ್ರಿ ಪ್ರಕರಣದ ಬಗ್ಗೆ ಮಾಹಿತಿ ಮತ್ತು ಇನ್ನಿತರ ದಾಖಲೆ ಕ್ರೋಡೀಕರಣಕ್ಕೆ ಮಾತ್ರ. ಒಂದು ವಾರದಲ್ಲಿ ಆ ಪ್ರಕ್ರಿಯೆ ಮುಗಿಸಿ, ಮತ್ತೆ ಅಲ್ಲಿಯೇ ಮುಂದುವರಿಸಲಾಗಿದೆ ಎಂದಿದ್ದಾರೆ. ಅಲ್ಲದೆ, ಕೊಣಾಜೆ ಠಾಣೆಯಲ್ಲಿ ಸಿಬಂದಿ ಕೊರತೆ ಇದೆ. ಹೀಗಾಗಿ ಅಲ್ಲಿಂದ ಬೇರೆ ಕಡೆಗೆ ವರ್ಗಾವಣೆಗೊಳಿಸಿದರೆ ಮತ್ತಷ್ಟು ಸಮಸ್ಯೆ ಆಗುತ್ತದೆ. ಹೀಗಾಗಿ ಸದ್ಯಕ್ಕೆ ಅಲ್ಲಿಯೇ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ಎಎಸ್ಐ ಅಥವಾ ಅದಕ್ಕಿಂತ ಮೇಲಿನ ದರ್ಜೆಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದರೆ, ಆನಂತರ ಕರ್ತವ್ಯಕ್ಕೆ ನಿಯೋಜನೆಗೊಂಡಾಗ ಬೇರೆ ಠಾಣೆಗೆ ವರ್ಗಾಯಿಸಲಾಗುತ್ತದೆ. ಇಲ್ಲಿ ಪೇದೆ ಆಗಿರುವುದರಿಂದ ಅಂಥ ಕೆಲಸ ಮಾಡಿಲ್ಲ ಎನ್ನಲಾಗುತ್ತಿದೆ. ಗುಪ್ತಚರ ವಿಭಾಗದಲ್ಲಿದ್ದ ಅಶೋಕ್ ಕುಮಾರ್, ಈಗ ಅಪರಾಧ ವಿಭಾಗದಲ್ಲಿ ಮುಂದುವರಿದಿದ್ದಾರೆ.
ಡಿ.31ರಂದು ವರ್ಗಾವಣೆಯಾಗಿದ್ದ ಕಮಿಷನರ್ ವಿಕಾಸ್ ಕುಮಾರ್, ಜ.1ರಂದು ಮಂಗಳೂರಿಗೆ ಹೊಸ ಕಮಿಷನರ್ ಶಶಿಕುಮಾರ್ ಆಗಮಿಸಿದ್ದರಿಂದ ಅಂದೇ ಇಲ್ಲಿಂದ ನಿರ್ಗಮಿಸಿದ್ದರು. ಅದಕ್ಕೂ ಎರಡು ದಿನಗಳ ಹಿಂದೆ ಅಶೋಕ್ ಕುಮಾರ್ ಅಮಾನತು ಆದೇಶ ಆಗಿತ್ತು.
ಐಪಿಎಸ್ ಅಧಿಕಾರಿ ವರ್ಗಾವಣೆಯೂ ರದ್ದು
ಇದಕ್ಕೂ ಮುನ್ನ ಡಿ.22ರಂದು ಐಪಿಎಸ್ ಅಧಿಕಾರಿ, ಎಸಿಪಿ ರಂಜಿತ್ ಕುಮಾರ್ ಬಂಡಾರು ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಿ, ಕೇರಳ ಗಡಿಭಾಗ ತಲೆಕ್ಕಿ ಎಂಬಲ್ಲಿ ಭಾರೀ ಪ್ರಮಾಣದ ಮರಳನ್ನು ವಶಪಡಿಸಿಕೊಂಡಿದ್ದರು. ಇದೇ ವಿಚಾರದಲ್ಲಿ ಗಣಿ ಇಲಾಖೆಯವರ ದೂರಿನಂತೆ ಕೊಣಾಜೆ ಠಾಣೆ ಗುಪ್ತಚರ ವಿಭಾಗದಲ್ಲಿದ್ದ ಅಶೋಕ್ ಕುಮಾರ್ ಅವರನ್ನು ಅಮಾನತು ಮಾಡಲಾಗಿತ್ತು. ಆದರೆ, ಒಂದೇ ವಾರದಲ್ಲಿ ಎಸಿಪಿ ರಂಜಿತ್ ಕುಮಾರ್ ಅವರನ್ನೂ ಕಮಿಷನರ್ ವಿಕಾಸ್ ಕುಮಾರ್ ಜೊತೆಗೆ ವರ್ಗಾಯಿಸಿ ಆದೇಶ ಮಾಡಲಾಗಿತ್ತು. ಉಳ್ಳಾಲದ ಮರಳು ಮಾಫಿಯಾಕ್ಕೆ ಮಣಿದು ಈ ವರ್ಗಾವಣೆ ನಡೆದಿತ್ತು ಎನ್ನಲಾಗಿತ್ತು. ಈ ಬಗ್ಗೆ ‘ಹೆಡ್ ಲೈನ್ ಕರ್ನಾಟಕ ’ ಮರಳು ಮಾಫಿಯಾದ ಒತ್ತಡಕ್ಕೆ ಮಣಿದು ವರ್ಗಾಯಿಸಲಾಗಿದೆ ಎನ್ನುವ ಸುದ್ದಿ ಪ್ರಕಟಿಸಿತ್ತು. ಇದರ ಪರಿಣಾಮವೋ ಏನೋ, ಯುವ ಐಪಿಎಸ್ ಅಧಿಕಾರಿಯಾಗಿರುವ ರಂಜಿತ್ ಕುಮಾರ್ ವರ್ಗಾವಣೆ ರದ್ದಾಗಿದ್ದು ಅವರು ಅದೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
Also Read:
ಅಕ್ರಮ ಮರಳುಗಾರಿಕೆಗೆ ಕುಮ್ಮಕ್ಕು ; ಕೊಣಾಜೆ ಗುಪ್ತ ವಾರ್ತೆ ಪೊಲೀಸ್ ಅಮಾನತು !!
Suspended SB of Konaje Police Station has been revoked from suspension and is back to the same police station as Constable. Also, the transfer order of ACP Ranjith Kumar Bandaru is put on hold.
07-10-25 11:20 pm
Bangalore Correspondent
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
ದಸರಾ ರಜಾ ಅವಧಿ ವಿಸ್ತರಣೆ ಮಾಡಿ ಎಂದು ಮನವಿ ; 10 ದಿ...
07-10-25 05:23 pm
07-10-25 11:16 pm
HK News Desk
ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದ...
07-10-25 01:53 pm
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
07-10-25 11:14 pm
Mangalore Correspondent
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
ಫಿಶ್ ಮೀಲ್ ಲಾರಿಗಳಿಂದ ಉಳ್ಳಾಲದಲ್ಲಿ ಗಬ್ಬುನಾತ ! ರಸ...
07-10-25 03:33 pm
07-10-25 10:13 pm
Mangalore Correspondent
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm