ಎಬಿವಿಪಿಯಿಂದ ವಿವೇಕ ಸ್ಪರ್ಧೆ, ರಕ್ತದಾನ ಶಿಬಿರ 

14-01-21 09:34 pm       Mangaluru Correspondant   ಕರಾವಳಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇದರ ಮಂಗಳೂರು ಮಹಾನಗರ ಘಟಕದ ವತಿಯಿಂದ ಆಯೋಜಿಸಿದ್ದ ವಿವೇಕ ಸ್ಪರ್ಧೆ - 2021 ಹಾಗೂ ರಕ್ತದಾನ ಶಿಬಿರವನ್ನು ಮಂಗಳೂರಿನ ಉದ್ಯಮಿ ಪುಷ್ಪರಾಜ್ ಜೈನ್ ಉದ್ಘಾಟಿಸಿದರು. 

ಮಂಗಳೂರು, ಜ.14: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇದರ ಮಂಗಳೂರು ಮಹಾನಗರ ಘಟಕದ ವತಿಯಿಂದ ಆಯೋಜಿಸಿದ್ದ ವಿವೇಕ ಸ್ಪರ್ಧೆ -2021 ಹಾಗೂ ರಕ್ತದಾನ ಶಿಬಿರವನ್ನು ಮಂಗಳೂರಿನ ಉದ್ಯಮಿ ಪುಷ್ಪರಾಜ್ ಜೈನ್ ಉದ್ಘಾಟಿಸಿದರು. 

ವಿವೇಕಾನಂದರ ಆದರ್ಶದಲ್ಲಿ ಮುನ್ನಡೆಯುತ್ತಿರುವ ಎಬಿವಿಪಿ, ಸಮಾಜಕ್ಕೆ ಉತ್ತಮ ವ್ಯಕ್ತಿತ್ವವುಳ್ಳ ನಾಗರಿಕರನ್ನು ನೀಡುತ್ತಿದೆ. ಇಂತಹ ಸಂಘಟನೆಯಿಂದ ಇನ್ನಷ್ಟು ಸಮಾಜ ಪರ ಒಲವುಳ್ಳವರು ಹುಟ್ಟಿ ಬರಲಿ ಎಂದು ಅವರು ಆಶಿಸಿದರು.
ಮುಖ್ಯ ಅತಿಥಿಯಾಗಿ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ರವೀಂದ್ರನಾಥ ರೈ ಉಪಸ್ಥಿತರಿದ್ದರು. ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ದೀಪ್ತಿ , ನಗರ ಅಧ್ಯಕ್ಷೆ ಭಾರತಿ ಪ್ರಭು, ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ಉಪಸ್ಥಿತರಿದ್ದರು. 

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಬರ್ಕೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಜ್ಯೋತಿರ್ಲಿಂಗ ಮಾತನಾಡಿ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದ ಸಂತನ ಜಯಂತಿಯನ್ನು ಆಚರಿಸುವುದರೊಂದಿಗೆ ನಾವೆಲ್ಲರೂ ಈ ಸಂಸ್ಕೃತಿಯನ್ನು ಸಂಸ್ಕಾರದೊಂದಿಗೆ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎಂದು ಹೇಳಿ ಜಾನಪದ ಗೀತೆಯೊಂದನ್ನು ಹಾಡಿದರು. 

ರಕ್ತದಾನ ಶಿಬಿರದಲ್ಲಿ ನಲವತ್ತೈದು ಯೂನಿಟ್ ರಕ್ತವನ್ನು ವಿದ್ಯಾರ್ಥಿಗಳು ನೀಡಿದರು. ಸ್ಪರ್ಧೆಯಲ್ಲಿ 80 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ನಗದು ಪುಸ್ತಕ ಮತ್ತು ಟ್ರೋಫಿಯನ್ನು ಬಹುಮಾನವಾಗಿ ನೀಡಲಾಯಿತು. 

ಸಮಾರೋಪ ಸಮಾರಂಭದಲ್ಲಿ ವಿಭಾಗ ಪ್ರಮುಖರಾದ ಕೇಶವ ಬಂಗೇರ, ಪ್ರಾಂತ ಕಾರ್ಯ ಸಮಿತಿ ಸದಸ್ಯ ಮಣಿಕಂಠ ಕಳಸ, ತಾಲ್ಲೂಕು ಸಂಚಾಲಕ ನಿಶಾನ್ ಆಳ್ವ ಉಪಸ್ಥಿತರಿದ್ದರು.