ಎಸ್ಡಿಪಿಐ ಕಾರ್ಯಕರ್ತರಿಂದ ಎಸ್ಪಿ ಕಚೇರಿಗೆ ಮುತ್ತಿಗೆ ಯತ್ನ ; ಪೊಲೀಸರ ತಡೆಬೇಲಿ 

15-01-21 11:18 pm       Mangaluru Correspondent   ಕರಾವಳಿ

ಪಾಕ್ ಪರ ಘೋಷಣೆ ಪ್ರಕರಣದಲ್ಲಿ ಬಂಧಿಸಿರುವ ಎಸ್ಡಿಪಿಐ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಎಸ್ ಡಿಪಿಐ ಪಕ್ಷದ ವತಿಯಿಂದ ಮಂಗಳೂರಿನಲ್ಲಿ ಎಸ್ಪಿ ಕಚೇರಿ ಚಲೋ ಮಾಡುವ ಯತ್ನ ನಡೆಯಿತು. ಆದರೆ, ಪೊಲೀಸರು ಕಾರ್ಯಕರ್ತರ ಪ್ರಯತ್ನವನ್ನು ವಿಫಲಗೊಳಿಸಿದರು. 

ಮಂಗಳೂರು, ಜ.15: ಪಾಕ್ ಪರ ಘೋಷಣೆ ಪ್ರಕರಣದಲ್ಲಿ ಬಂಧಿಸಿರುವ ಎಸ್ಡಿಪಿಐ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಎಸ್ ಡಿಪಿಐ ಪಕ್ಷದ ವತಿಯಿಂದ ಮಂಗಳೂರಿನಲ್ಲಿ ಎಸ್ಪಿ ಕಚೇರಿ ಚಲೋ ಮಾಡುವ ಯತ್ನ ನಡೆಯಿತು. ಆದರೆ, ಪೊಲೀಸರು ಕಾರ್ಯಕರ್ತರ ಪ್ರಯತ್ನವನ್ನು ವಿಫಲಗೊಳಿಸಿದರು. 

ಕಾರ್ಯಕ್ರಮದ ಹಿನ್ನೆಲೆ ಮಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ನಡೆಸಲಾಗಿತ್ತು. ಗ್ರಾಮ ಪಂಚಾಯತ್ ಚುನಾವಣೆ ವಿಜಯೋತ್ಸವ ಸಂದರ್ಭ ಪಾಕ್ ಪರ ಘೋಷಣೆ ಕೂಗಿದ ಆರೋಪದಡಿ  ಮೂವರು ಎಸ್ ಡಿ ಪಿ ಐ ಕಾರ್ಯಕರ್ತರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಆ ದಿನದಿಂದ  ಬಂಧಿತ ಮೂವರು ಅಮಾಯಕರು ಅಂತಲೇ ಎಸ್ ಡಿ ಪಿ ಐ  ವಾದಿಸುತ್ತಾ ಬಂದಿದ್ದು ಅವರನ್ನು ಬಂಧಮುಕ್ತ ಗೊಳಿಸಬೇಕೆಂದು ಒತ್ತಾಯಿಸುತ್ತಾ ಬಂದಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ಮುತ್ತಿಗೆ ಹಾಕಿದ ಎಸ್ ಡಿ ಪಿ ಐ  ಕಾರ್ಯಕರ್ತರು ಮಂಗಳೂರು ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ಲಾನ್ ಹಾಕಿದ್ದರು. ಆದರೆ ನಗರದ ಕ್ಲಾಕ್ ಟವರ್ ನಿಂದ ಹೊರಟ ಮೆರವಣಿಗೆಯನ್ನು ಪೊಲೀಸರು ಪುರಭವನ ಸಮೀಪಿಸುತ್ತಲೇ ಬ್ಯಾರಿಕೇಡ್ ತಡೆಬೇಲಿಯಿಂದ ತಡೆದು ನಿಲ್ಲಿಸಿದರು. ಈ ಸಂದರ್ಭ ಅಲ್ಲಿಯೇ ಸುಮಾರು ಎರಡೂವರೆ ಗಂಟೆ ಧರಣಿ ಕೂತ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. 

ಪ್ರಮುಖವಾಗಿ ಮೂರು ಬೇಡಿಕೆಗಳೊಂದಿಗೆ ಎಸ್ಪಿ ಕಚೇರಿ ಚಲೋ ನಡೆಸಲಾಗಿತ್ತು. ಪಾಕ್ ಪರ ಘೋಷಣೆ ಆರೋಪದ ಮೇರೆಗೆ  ಬಂಧಿತ ಆರೋಪಿಗಳ ಬಿಡುಗಡೆ, ಬೆಳ್ತಂಗಡಿ ಎಸ್ಐ ಅಮಾನತು ಹಾಗೂ ಪಾಕ್ ಪರ ಘೋಷಣೆ ಕೂಗಿದ್ದಾನೆ ಎಂದು ಬಿಜೆಪಿ ಕಾರ್ಯಕರ್ತನನ್ನ ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. 

ಪ್ರತಿಭಟನೆ ಅರ್ಧದಲ್ಲೇ ತಡೆದ ಹಿನ್ನೆಲೆ ಪಶ್ಚಿಮ ವಲಯ ಐಜಿಪಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಬಳಿಕ ಐಜಿಪಿ ಪರವಾಗಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ತೆರಳಿ ಮನವಿ ಸ್ವೀಕರಿಸಿದರು.

SDPI on Friday January 15, organized a massive protest rally, 'SP Office Chalo', a foot march against arresting of its three workers by Beltangady police. The three are slapped with the accusation of raising pro-Pakistani slogans.