ಹಾಡಹಗಲೇ ಚಿರತೆ ಪ್ರತ್ಯಕ್ಷ ; ಜನರಲ್ಲಿ ಭೀತಿ ಸೃಷ್ಟಿ ! 

16-01-21 10:24 pm       Mangaluru Correspondent   ಕರಾವಳಿ

ಕರ್ನಾಟಕ - ಕೇರಳ ಗಡಿಭಾಗ ನರಿಂಗಾನ ಗ್ರಾಮದ ತೌಡುಗೋಳಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು ಜನರಲ್ಲಿ ಭೀತಿ ಸೃಷ್ಟಿಸಿದೆ. 

Photo credits : Representative Image

ಉಳ್ಳಾಲ, ಜ 16: ಕರ್ನಾಟಕ - ಕೇರಳ ಗಡಿಭಾಗ ನರಿಂಗಾನ ಗ್ರಾಮದ ತೌಡುಗೋಳಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು ಜನರಲ್ಲಿ ಭೀತಿ ಸೃಷ್ಟಿಸಿದೆ. 

ಕರ್ನಾಟಕ - ಕೇರಳ ಗಡಿಭಾಗ ತೌಡುಗೋಳಿ ಸುತ್ತಮುತ್ತಲಿನ‌ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಜನರಲ್ಲಿ ಭಯ ಹುಟ್ಟಿಸಿರುವ ಚಿರತೆ ಶನಿವಾರ ಬೆಳಗ್ಗೆ ತೌಡುಗೋಳಿಯ ಅಂಗನವಾಡಿ ಬಳಿಯ ಬೃಹತ್ ಬಂಡೆಕಲ್ಲಿನ ಮೇಲೆ ಮಲಗಿರುವುದನ್ನು ಸ್ಥಳೀಯ ಕೂಲಿ ಕಾರ್ಮಿಕರು ಕಂಡಿದ್ದಾರೆ.

ಕ್ರಶರ್ ಕೆಲಸಕ್ಕೆಂದು ನಾಲ್ಕು ಮಂದಿ ಆ ದಾರಿಯಲ್ಲಿ ಸಾಗುತ್ತಿರುವಂತೆಯೇ ಒಬ್ಬಾತ ಬಂಡೆಕಲ್ಲಿನ ಮೇಲೆ ಚಿರತೆ ಮಲಗಿರುವುದನ್ನು ಗಮನಿಸಿದ್ದು ಆತಂಕದಿಂದ ಇತರರಿಗೆ ಹೇಳಿದ್ದಾನೆ.

ಜನರ ಧ್ವನಿ ಕೇಳಿದ ತಕ್ಷಣ ಚಿರತೆ ದಟ್ಟ ಗುಡ್ಡವೊಂದಕ್ಕೆ ಸಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

A Leopard was spotted in the day time near Kerala - Karnataka border at Ullal in Mangalore.