ಬ್ರೇಕಿಂಗ್ ನ್ಯೂಸ್
26-01-21 02:04 pm Mangalore Correspondent ಕರಾವಳಿ
ಕೊಣಾಜೆ, ಜ.26 : ಗಣರಾಜ್ಯೋತ್ಸವ ದಿನ ಸರ್ಕಾರಿ ಸಂಸ್ಥೆಗಳ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಗೌರವಪೂರ್ವಕವಾಗಿ ಹಾರಿಸುವುದು ಕಡ್ಡಾಯ. ಆದರೆ, ಇಲ್ಲಿನ ಬೆಳ್ಮ ಗ್ರಾಮ ಪಂಚಾಯತ್ ಕಚೇರಿಯ ಮುಂದೆ ಮಾತ್ರ ಬೆಳಗ್ಗೆ ಹತ್ತು ಗಂಟೆಯಾದರೂ ಧ್ವಜಾರೋಹಣ ಆಗಿರಲಿಲ್ಲ. ಸ್ಥಳೀಯರು ಪಿಡಿಓ ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದು ಬಳಿಕ ಯಾರೋ ಒಬ್ಬ ತಾತ್ಕಾಲಿಕ ಸಿಬಂದಿ ಮೂಲಕ ಧ್ವಜವನ್ನು ಏರಿಸಿದ್ದಾರೆ. ಆತ ಚಪ್ಪಲಿ ಹಾಕಿ, ದೂರದಲ್ಲಿ ನಿಂತು ಧ್ವಜ ಏರಿಸಿದ್ದಲ್ಲದೆ ಧ್ವಜ ವಂದನೆಯನ್ನೂ ಮಾಡದೆ ಅವಮಾನ ಮಾಡಿದ್ದಾನೆ. ರಾಷ್ಟ್ರ ಧ್ವಜಕ್ಕೆ ಅಗೌರವ ಸೂಚಿಸಿದ ವ್ಯಕ್ತಿ ಮತ್ತು ನಿರ್ಲಕ್ಷ್ಯ ತೋರಿದ ಪಿಡಿಓ ಅಧಿಕಾರಿಯನ್ನು ಅಮಾನತು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಗಣರಾಜ್ಯೋತ್ಸವ ದಿನ ಬೆಳಗ್ಗೆ ಒಂಬತ್ತು ಗಂಟೆ ಮೊದಲು ಸರ್ಕಾರಿ ಸಂಸ್ಥೆಗಳ ಮುಂದೆ ರಾಷ್ಟ್ರ ಧ್ವಜಾರೋಹಣ ಮಾಡಬೇಕೆಂದು ನಿಯಮ ಇದೆ. ಮಂಗಳೂರು ವಿಧಾನಸಭಾ ಕ್ಷೇತ್ರದ ಬೆಳ್ಮ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಸಮಯಕ್ಕೆ ಸರಿಯಾಗಿ ಧ್ವಜಾರೋಹಣ ನಡೆಯದಿರುವುದು ಸಾರ್ವಜನಿಕವಾಗಿ ಆಕ್ರೋಶಕ್ಕೆ ಕಾರಣವಾಯಿತು.
ಮಂಗಳೂರು ವಿಶ್ವವಿದ್ಯಾಲಯ ರಸ್ತೆಯಲ್ಲೇ ಗ್ರಾಪಂ ಕಚೇರಿ ಇರುವುದರಿಂದ ಹಾಗೂ ಮೂರು ಮೆಡಿಕಲ್ ಕಾಲೇಜು, ಆಸ್ಪತ್ರೆ ಅನತಿ ದೂರದಲ್ಲೇ ಇರುವುದರಿಂದ ಹೊರ ರಾಜ್ಯ ಹಾಗೂ ವಿದೇಶಿ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಇಂಥ ಜಾಗದಲ್ಲಿ ಬೆಳ್ಮ ಗ್ರಾಮ ಪಂಚಾಯಿತಿ ಎದುರಲ್ಲಿ ಈ ರೀತಿಯ ಅಸಡ್ಡೆ ಆಗಿರುವುದು ಯಾವ ಸಂದೇಶ ತಲುಪಬಹುದು ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ.
ಬೆಳ್ಮ ಪಂಚಾಯಿತಿ ಪಿಡಿಒ ನವೀನ್ ಹೆಗ್ಡೆ ಬಗ್ಗೆ ಭಾರೀ ಆಕ್ರೋಶ ಕೇಳಿಬಂದಿದೆ. ಇದೇ ವೇಳೆ, ಯುವಕನೊಬ್ಬ ಸಾದಾ ಸೀದಾ ಎನ್ನುವ ರೀತಿ ರಾಷ್ಟ್ರ ಧ್ವಜವನ್ನು ಏರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನರ ಟೀಕೆ, ಟಿಪ್ಪಣಿಗೆ ಆಹಾರವಾಗಿದೆ.
Video:
PDO of Belma gram panchayat Naveen Hedge in Mangalore has shown disrespect to national flag. Villagers urge suspension.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm