ಬ್ರೇಕಿಂಗ್ ನ್ಯೂಸ್
26-01-21 09:05 pm Mangaluru Correspondent ಕರಾವಳಿ
ಮಂಗಳೂರು, ಜ.26: ಒಂದೆಡೆ ಕೊರೊನಾ ನಿರ್ಬಂಧ, ಕ್ವಾರಂಟೈನ್ ನೆಪದಲ್ಲಿ ಎನ್ ಆರ್ ಐಗಳು ನರಳುತ್ತಿದ್ದರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಏಜನ್ಸಿಗಳು ಎನ್ಆರ್ ಐಗಳಿಂದಲೇ ಕೊರೊನಾ ಪ್ಯಾಕೇಜ್ ಹೆಸರಲ್ಲಿ ಹಣ ಪೀಕಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ಕುವೈಟ್ ಇನ್ನಿತರ ಸೌದಿ ರಾಷ್ಟ್ರಗಳಿಗೆ ತೆರಳುವ ಮಂದಿ ಕಡ್ಡಾಯ 14 ದಿನಗಳ ಕ್ವಾರಂಟೈನ್ ಇರಬೇಕು. ಅಲ್ಲದೆ, ತಮ್ಮ ಕೆಲಸಕ್ಕೆ ಹಾಜರಾಗುವ ವೇಳೆ ಕೋವಿಡ್ ನೆಗೆಟಿವ್ ಸರ್ಟಿಫಿಕೇಟನ್ನೂ ತೋರಿಸಬೇಕು. ಹೀಗಾಗಿ ಮಂಗಳೂರು ಸೇರಿ ಕರಾವಳಿಯಿಂದ ತೆರಳುವ ಮಂದಿಗೆ ಟ್ರಾವೆಲ್ ಏಜನ್ಸಿಗಳು ಪ್ಯಾಕೇಜ್ ವ್ಯವಸ್ಥೆ ಮಾಡಿವೆ. ಈ ಪ್ಯಾಕೇಜ್ ಅಡಿ ಹೋದಲ್ಲಿ ವಿಮಾನದ ಟಿಕೆಟ್, ಜೊತೆಗೆ ಅಲ್ಲಿ 14 ದಿನ ಕ್ವಾರಂಟೈನ್ ಇರಲು ಹೊಟೇಲ್ ವ್ಯವಸ್ಥೆ ಮತ್ತು ಆರ್ ಟಿ ಪಿಸಿಆರ್ ಟೆಸ್ಟ್ ಸೇರಿ ಎಲ್ಲವನ್ನೂ ಒಳಗೊಂಡಿದೆ ಎಂದು ಪ್ರಯಾಣಿಕರನ್ನು ನಂಬಿಸಲಾಗುತ್ತದೆ.
ಈ ನಡುವೆ, ಕುವೈಟ್, ಸೌದಿಯಲ್ಲಿ ಹೊರ ದೇಶಗಳ ಪ್ರಯಾಣಿಕರ ಸಂಚಾರಕ್ಕೆ ಬ್ರೇಕ್ ಹಾಕಿದ್ದು ತುರ್ತಾಗಿ ಊರಿಗೆ ಬಂದ ಪ್ರಯಾಣಿಕರನ್ನು ಚಿಂತೆಗೀಡು ಮಾಡಿದೆ. ಕಂಪನಿಗಳು ತುರ್ತಾಗಿ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡುವುದರಿಂದ ಪ್ರಯಾಣ ಮಾಡಬೇಕಾದ ಅನಿವಾರ್ಯತೆಯಲ್ಲಿ ಉದ್ಯೋಗಿಗಳು ಟ್ರಾವೆಲ್ ಏಜನ್ಸಿಗಳನ್ನು ಸಂಪರ್ಕಿಸುತ್ತಾರೆ. ಈ ವೇಳೆ, ಕುವೈಟ್ ತೆರಳಬೇಕಾದವರಿಗೆ ದುಬೈ, ಶಾರ್ಜಾಗೆ ಒಯ್ದು ಅಲ್ಲಿ ಕ್ವಾರಂಟೈನ್ ಮಾಡುವ ಪ್ಯಾಕೇಜ್ ವ್ಯವಸ್ಥೆ ಬಗ್ಗೆ ಹೇಳುತ್ತಾರೆ. ಇದೇ ರೀತಿ ವ್ಯಕ್ತಿಯೊಬ್ಬರಿಗೆ ಮಂಗಳೂರಿನ ಟ್ರಾವೆಲ್ ಏಜನ್ಸಿಯವರು ಸ್ಟಾರ್ ಹೊಟೇಲ್ ವ್ಯವಸ್ಥೆ ಸೇರಿ ಕುವೈಟ್ ಪ್ರಯಾಣಕ್ಕೆ 1.25 ಲಕ್ಷ ರೂ.ಗಳ ಪ್ಯಾಕೇಜ್ ವ್ಯವಸ್ಥೆ ಮಾಡಿದ್ದರು. ಆದರೆ, ಹೀಗೆ ಹೋದ ವ್ಯಕ್ತಿಯನ್ನು ಮೋಸ ಮಾಡಲಾಗಿದ್ದು ಸ್ಟಾರ್ ಹೊಟೇಲ್ ಬದಲು ಸಾದಾ ಸೀದಾ ಲಾಡ್ಜ್ ನಲ್ಲಿ ಕುಳ್ಳಿರಿಸಿದ್ದರು. ಅಲ್ಲದೆ, ಊಟದ ವ್ಯವಸ್ಥೆಯೂ ಸರಿಯಾಗಿ ನೀಡದೆ ಲಕ್ಷಾಂತರ ರೂ. ಹಣ ಲೂಟಿ ಮಾಡಿದ್ದಾರೆ ಎಂದು ಆ ವ್ಯಕ್ತಿ ದೂರಿದ್ದಾರೆ.
ಈ ಬಗ್ಗೆ ಕೇಳಲು ಏಜನ್ಸಿಗೆ ಫೋನ್ ಮಾಡಿದರೆ, ರಿಸೀವ್ ಮಾಡುತ್ತಿರಲಿಲ್ಲ. ಅಲ್ಲದೆ, ಕೆಲವೊಮ್ಮೆ ರಿಸೀವ್ ಮಾಡಿದರೂ ಬೇಕಾದರೆ ಹೋಗಿ ಇಲ್ಲದಿದ್ದರೆ ಪ್ರಯಾಣದ ಟಿಕೆಟನ್ನೇ ರದ್ದು ಪಡಿಸುವ ಬೆದರಿಕೆ ಒಡ್ಡುತ್ತಾರೆ ಎಂದು ಬೇಸತ್ತ ಪ್ರಯಾಣಿಕರು ಟ್ರಾವೆಲ್ ಏಜನ್ಸಿಯ ದೋಖಾವನ್ನು ಹೇಳಿಕೊಂಡಿದ್ದಾರೆ. ಕರಾವಳಿಯಿಂದ ಇಂಥ ಪ್ಯಾಕೇಜ್ ನಂಬಿ ಹೋದ ಹಲವಾರು ಮಂದಿ ಮೋಸ ಹೋಗಿದ್ದಾರೆ. ಆದರೆ, ಅರ್ಧ ದಾರಿಯಲ್ಲಿ ಈ ಮೋಸ ಅರಿವಾಗುವುದರಿಂದ ಏನೂ ಮಾಡಲಾಗುತ್ತಿಲ್ಲ. ಅಲ್ಲದೆ, ಈ ಬಗ್ಗೆ ಪ್ರಶ್ನೆ ಮಾಡಿದರೆ ಟಿಕೆಟ್ ರದ್ದುಪಡಿಸುವ ಬೆದರಿಕೆ ನೀಡುತ್ತಿದ್ದಾರೆ.
ಮಂಗಳೂರು, ಉಡುಪಿಯಲ್ಲಿ ಹಲವಾರು ಟ್ರಾವೆಲ್ ಏಜನ್ಸಿಗಳು ಇದೇ ರೀತಿಯ ದಂಧೆಯಲ್ಲಿ ತೊಡಗಿರುವ ಬಗ್ಗೆ ಶಂಕೆ ಮೂಡಿದೆ. ಸಾಮಾನ್ಯವಾಗಿ ದುಬೈ, ಕುವೈಟ್ ಇನ್ನಿತರ ಸೌದಿ ರಾಷ್ಟ್ರಗಳಿಗೆ ಪ್ರಯಾಣಿಸಲು ವಿಮಾನ ಟಿಕೆಟ್ ದರ 20 ಸಾವಿರ ಆಸುಪಾಸು ಇರುತ್ತದೆ. ಆದರೆ, ಹೊಟೇಲ್ ಸೌಲಭ್ಯ ಸೇರಿ ಒಂದು ಲಕ್ಷಕ್ಕೂ ಹೆಚ್ಚು ಪ್ಯಾಕೇಜ್ ಬಿಲ್ ಮಾಡುವ ದಲ್ಲಾಳಿ ಟ್ರಾವೆಲ್ ಏಜನ್ಸಿಗಳು ಎನ್ನಾರೈಗಳನ್ನೇ ದೋಚುವ ಹೀನ ಕೆಲಸಕ್ಕೆ ಕೈಹಾಕಿವೆ. ಸ್ಟಾರ್ ಹೊಟೇಲ್ ಹೆಸರಲ್ಲಿ ಸಾಮಾನ್ಯ ಹಾದಿ ಬೀದಿಯ ಲಾಡ್ಜ್ ಗಳಲ್ಲಿ ಇರಿಸಿ, ಎನ್ನಾರೈಗಳನ್ನೇ ವಂಚಿಸುತ್ತಿರುವ ವಿಚಾರ ಬಯಲಾಗಿದೆ.
Travels agencies in Mangalore are constantly cheating NRI's with corona air ticket and package in lakhs between Mangalore to Dubai and Kuwait has come to light.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm